ವಿಜಯೇಂದ್ರ 
ರಾಜಕೀಯ

ವಿಜಯೇಂದ್ರ ಕೇವಲ BSY ಬಣಕ್ಕೆ ಮಾತ್ರ ಅಧ್ಯಕ್ಷರೇ? ಬಿಜೆಪಿ ಪಕ್ಷ ಒಪ್ಪಿಕೊಂಡಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?

ಯಡಿಯೂರಪ್ಪನವರ ಮಗ ಅಧ್ಯಕ್ಷನಾಗಿರುವುದು ಸಂತೋಷ ಕೂಟಕ್ಕೆ ತೀವ್ರ ಅಸಹನೆ ಇರುವುದು ಜಗತ್ತಿಗೆ ತಿಳಿದಿರುವ ಸತ್ಯ. ಅದೇ ಸಂತೋಷ ಕೂಟದ ಭಾಗವಾಗಿರುವ ಬಿಜೆಪಿ ಕರ್ನಾಟಕ ಸಾಮಾಜಿಕ ಜಾಲತಾಣಕ್ಕೂ ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಬೆಂಗಳೂರು: ಯಡಿಯೂರಪ್ಪನವರ ಮಗ ಅಧ್ಯಕ್ಷನಾಗಿರುವುದು ಸಂತೋಷ ಕೂಟಕ್ಕೆ ತೀವ್ರ ಅಸಹನೆ ಇರುವುದು ಜಗತ್ತಿಗೆ ತಿಳಿದಿರುವ ಸತ್ಯ. ಅದೇ ಸಂತೋಷ ಕೂಟದ ಭಾಗವಾಗಿರುವ ಬಿಜೆಪಿ ಕರ್ನಾಟಕ ಸಾಮಾಜಿಕ ಜಾಲತಾಣಕ್ಕೂ ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್,  ವಿಜಯೇಂದ್ರ ಅಧ್ಯಕ್ಷರಾಗಿ ನೇಮಕವಾಗಿ ಮೂರ್ನಾಲ್ಕು ದಿನ ಕಳೆದಾಗಿದೆ, ಪದಗ್ರಹಣವೂ ಆಗಿದೆ, ಆದರೆ ಇನ್ನೂ ಸಹ ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ನಳಿನ್ ಕುಮಾರ್ ಕಟೀಲ್ ಕಂಗೊಳಿಸುತ್ತಿದ್ದಾರೆ! ಬಿಜೆಪಿ ಪಕ್ಷ ವಿಜಯೇಂದ್ರರನ್ನು ಒಪ್ಪಿಕೊಂಡಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ವಿಜಯೇಂದ್ರ ಕೇವಲ BSY ಬಣಕ್ಕೆ ಮಾತ್ರ ಅಧ್ಯಕ್ಷರೇ? ಎಂದು ಪ್ರಶ್ನಿಸಿದೆ.

ವಿಜಯೇಂದ್ರ ಒಬ್ಬನೇ ಎಲ್ಲವೂ ಅಲ್ಲ - ಈಶ್ವರಪ್ಪ

ವಿಜಯೇಂದ್ರ 3 ವರ್ಷ ಮಾತ್ರ ಅಧ್ಯಕ್ಷ - ಪೇಶ್ವೆ ಜೋಷಿಗಳು (ಕುಮಾರಸ್ವಾಮಿಯವರು ಕೊಟ್ಟ ಹೆಸರು!)

ವಿಜಯೇಂದ್ರರ ಪದಗ್ರಹಣಕ್ಕೆ ನಾನು ಹೋಗುವುದಿಲ್ಲ - ಸಿ. ಟಿ ರವಿ

................... - ವಿ. ಸೋಮಣ್ಣ

ವಿಜಯೇಂದ್ರ ಬಗ್ಗೆ ನೋ ಕಾಮೆಂಟ್ಸ್ - ಬೆಲ್ಲದ್

 ಬಿಎಲ್ ಸಂತೋಷ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್   ಗಾಢ ಮೌನ, ಇಷ್ಟು ದಿನ #FamilyJanataParty ಒಡೆದ ಮನೆಯಾಗಿತ್ತು, ಇನ್ಮುಂದೆ ಯುದ್ಧಕಣವಾಗುವುದು ನಿಶ್ಚಿತ, ಸಂತೋಷ ಕೂಟ ರಣವಿಳ್ಯ ನೀಡಲು ತಯಾರಾಗುತ್ತಿದೆ! #BJPvsBJP ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಯಡಿಯೂರಪ್ಪನವರ ಪುತ್ರನ ಅಧ್ಯಕ್ಷ ಗಾದಿಯ ಪದಗ್ರಹಣ ಕಾರ್ಯಕ್ರಮಕ್ಕೆ ಹಾಜರಿರುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ @CTRavi_BJP, ಸಿ.ಟಿ ರವಿಯ ಬಾಯಲ್ಲಿ ಬಂದಿದ್ದು ಕೇವಲ ಅವರೊಬ್ಬರ ಮಾತಲ್ಲ, ಇಡೀ ಸಂತೋಷ ಕೂಟದ ಅಸಹನೆಯ ಮಾತುಗಳು.

ನಾನು ಹಿಂದೂ ಹುಲಿ ಎನ್ನುತ್ತಿದ್ದ ಬಚ್ಚಲು ಬಾಯಿಯ @BasanagoudaBJP  ಇಲಿಯಾಗಿ ಬಿಲ ಸೇರಿದ್ದಾರೆ, ಇತ್ತ ಸಿ.ಟಿ ರವಿ ಕುದಿಯುತ್ತಿರುವ ತಾಪ 100 ಡಿಗ್ರಿ ದಾಟಿದೆ! @drashwathcn ಹತಾಶೆ ಮುಗಿಲು ಮುಟ್ಟಿದೆ. ಹೊಸ ಅಧ್ಯಕ್ಷರ ಪದಗ್ರಹಣವು ಬಿಜೆಪಿಗೆ "ಕೇತು ಗ್ರಹಣ"ವಾಗಿ ಪರಿಣಮಿಸುವುದು ನಿಶ್ಚಿತ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT