ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ಸ್ವೀಕಾರ 
ರಾಜಕೀಯ

ಬಿಜೆಪಿಯಲ್ಲಿ 'ವಿಜಯ' ಶಕೆ ಆರಂಭ: ಹಿರಿಯರ ಮುನಿಸು ತಣಿಸಿ ಎಲ್ಲರನ್ನೊಟ್ಟಿಗೆ ಕರೆದೊಯ್ಯುವುದು ದೊಡ್ಡ ಸವಾಲು!

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಇರುವ ಹೊತ್ತಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿ. ವೈ. ವಿಜಯೇಂದ್ರ ಎದುರಿಗೆ ಬೆಟ್ಟದಷ್ಟು ಸವಾಲುಗಳಿವೆ. ಹಿರಿಯರು, ಕಿರಿಯರ ನಡುವೆ ಸಾಮರಸ್ಯ ಸಾಧಿಸಿ, ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯಬೇಕಾದ ಅನಿವಾರ್ಯತೆ ಇದೆ.

ಬೆಂಗಳೂರು: ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಅವರು ಔಪಚಾರಿಕವಾಗಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ತಮ್ಮ ತಂದೆ ಬಿಎಸ್ ಯಡಿಯೂರಪ್ಪ ಅವರ ಸ್ಥಾನ ತುಂಬುವುದು ವಿಜಯೇಂದ್ರ ಅವರ ಮೊದಲ ಕರ್ತವ್ಯವಾಗಿದೆ.

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಇರುವ ಹೊತ್ತಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿ.ವೈ. ವಿಜಯೇಂದ್ರ ಎದುರಿಗೆ ಬೆಟ್ಟದಷ್ಟು ಸವಾಲುಗಳಿವೆ. ಹಿರಿಯರು, ಕಿರಿಯರ ನಡುವೆ ಸಾಮರಸ್ಯ ಸಾಧಿಸಿ, ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯಬೇಕಾದ ಅನಿವಾರ್ಯತೆ ಇದೆ..

ಹಾಟ್‌ಸೀಟ್‌ ಆಕ್ರಮಿಸಿಕೊಂಡ ಮೊದಲ ಅಪ್ಪ-ಮಗ ಜೋಡಿ ಇವರದ್ದಾಗಿದೆ. 2019 ರಲ್ಲಿ ಪಕ್ಷದ ಅಧ್ಯಕ್ಷರಾಗಿ, ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದರೂ ಕರ್ನಾಟಕದಿಂದ ಬಿಜೆಪಿಗೆ 25 ಲೋಕಸಭಾ ಸ್ಥಾನಗಳನ್ನು ಗೆಲ್ಲುವಲ್ಲಿ ಯಡಿಯೂರಪ್ಪ ಯಶಸ್ವಿಯಾದರು. ಒಟ್ಟಾರೆಯಾಗಿ, ಅವರ ಸಾಮೂಹಿಕ ಮತ ಪಾಲು ಶೇಕಡಾ 55 ಕ್ಕಿಂತ ಹೆಚ್ಚಿತ್ತು. ಈಗ ವಿಜಯೇಂದ್ರ ಮುಂದೆ ಮತ್ತದೆ ಸವಾಲು ಎದುರಾಗಿದೆ.

ವಿಜಯೇಂದ್ರ ಅವರು ಮೊದಲು ಮಾಡಬೇಕಾದ ಕೆಲವು ಕೆಲಸಗಳಿವೆ ಎಂದು ಹೆಸರು ಹೇಳಲು ಇಷ್ಟಪಡದ ಆರ್‌ಎಸ್‌ಎಸ್-ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಪಕ್ಷದಲ್ಲಿ ಅಸಮಾಧಾನ ಹೊಂದಿರುವ ಹಿರಿಯರ ಮನವೊಲಿಸಿ  ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು. ಹಳೆಯ ತಂಡವು ತನ್ನ ಅವಧಿಯನ್ನು ಪೂರ್ಣಗೊಳಿಸಿರುವುದರಿಂದ ಪಕ್ಷವನ್ನು ಪುನರುಜ್ಜೀವನಗೊಳಿಸುವುದು ಮತ್ತು ಹೊಸ ಪದಾಧಿಕಾರಿಗಳನ್ನು ತರುವುದು ಅವರ ಎರಡನೇ ಪ್ರಮುಖ ಯೋಜನೆಯಾಗಿದೆ.

ಕಟೀಲ್ ಅವರ ಅವಧಿಯೂ ಹಲವು ತಿಂಗಳ ಹಿಂದೆ ಮುಗಿದಿದ್ದು, ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ಸ್ಥಾನಗಳನ್ನು ಪರಿಷ್ಕರಿಸಬೇಕು. ಶೀಘ್ರದಲ್ಲಿಯೇ ಈ ಸಂಬಂಧ ಹಿರಿಯ ಮುಖಂಡರ ಸಭೆ ನಡೆಸಿ ತೀರ್ಮಾನಿಸಲಾಗುವುದು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂಎಲ್‌ಸಿ ರವಿಕುಮಾರ್‌ ತಿಳಿಸಿದ್ದಾರೆ.

ಪಕ್ಷದ ಉನ್ನತ ಸ್ಥಾನಕ್ಕೆ ಪ್ರಥಮ ಬಾರಿಗೆ ಶಾಸಕರಾದ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿರುವುದು ಕೆಲ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ರಾಜ್ಯ ಬಿಜೆಪಿ ಕಚೇರಿಯ ಮಾಜಿ ಕಾರ್ಯದರ್ಶಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್  ಗೆ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಲಿಂಗಾಯತ ನಾಯಕರಾದ ವಿ ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಸಿಸಿ ಪಾಟೀಲ್ ಮತ್ತು ಇತರರನ್ನು ಆಯ್ಕೆ ಮಾಡಬಹುದಾಗಿತ್ತು, ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರು ಮಾತ್ರ  ಲಿಂಗಾಯತ ನಾಯಕರೆಂದು ಬಹುಶಃ ಲಿಂಗಾಯತ ಸಮುದಾಯವು ಪರಿಗಣಿಸುತ್ತದೆಯೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕ ಮತ್ತು ದೆಹಲಿಯ ಕೆಲವು ಹಿರಿಯ ನಾಯಕರು ರಾಜ್ಯ ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿ ಮತ್ತು  ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ನಾಯಕರ ದಾರಿ ತಪ್ಪಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.  

ಹಿರಿಯ ನಾಯಕರನ್ನು ಕಡೆಗಣಿಸಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಕ್ಷದ ಮುಖಂಡರೊಬ್ಬರು, ಹಿರಿತನ ಒಂದು ಅಂಶವಷ್ಟೆ, ನಾಯಕತ್ವ ಮುಖ್ಯ. ವಿಜಯೇಂದ್ರ  ನಾಯಕತ್ವದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 18-20 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನಾವು ನಿರೀಕ್ಷಿಸಬಹುದು ಎಂದಿದ್ದಾರೆ.

ಬಿಜೆಪಿಯಂತಹ ಶಿಸ್ತಿನ ಪಕ್ಷಕ್ಕೆ ತಂದೆ-ಮಗನ ಸಂಸ್ಕೃತಿ ಸರಿಯಲ್ಲ, 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ತಮ್ಮ ತಂದೆಯ ಪತನಕ್ಕೆ ವಿಜಯೇಂದ್ರ ಅವರೇ ಕಾರಣ ಎಂದು ಕೆಲವರು  ಟೀಕಿಸಿದ್ದರು.  ಈ ವೇಳೆ ಬಿಜೆಪಿ ನಾಯಕರು ಅವರ ರಕ್ಷಣೆಗೆ ಧಾವಿಸಿದರು. ವಿಜಯೇಂದ್ರ ಪ್ರತಿಭಾವಂತ, ಯಡಿಯೂರಪ್ಪ ಅವರೊಂದಿಗೆ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಹೈಕಮಾಂಡ್ ದೊಡ್ಡ ನಿರೀಕ್ಷೆಯೊಂದಿಗೆ ಬಿ. ವೈ. ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದೆ. ಈ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಬೇಕಿದೆ. ರಾಜ್ಯ ನಾಯಕರು ಹಾಗೂ ದಿಲ್ಲಿ ಮಟ್ಟ ದ ನಾಯಕರ ಜತೆ ಉತ್ತಮ ಬಾಂಧವ್ಯ ಹಾಗೂ ಸಾಮರಸ್ಯ ಸಾಧಿಸಬೇಕಿದೆ.

ದೊಡ್ಡ ನಾಯಕರು ಹಾಗೂ ಸಣ್ಣ ನಾಯಕರನ್ನು ವಿಶ್ವಾಸ ಪಡೆದು ಒಟ್ಟಿಗೆ ಮುನ್ನಡೆಸಬೇಕಿದೆ. ರಾಜ್ಯಾಧ್ಯಕ್ಷ ಪಟ್ಟ ಘೋಷಣೆಯಾದ ಕೂಡಲೇ ಬಿಜೆಪಿಯ ಹಲವು ಹಿರಿಯ ನಾಯಕರನ್ನು ಭೇಟಿ ಮಾಡಿದ ವಿಜಯೇಂದ್ರ, ಮುಂದಿನ ದಿನಗಳಲ್ಲೂ ಹಿರಿಯ ನಾಯಕರ ಸಹಕಾರದೊಂದಿಗೆ ಮುನ್ನಡೆಯಬೇಕಿದೆ. ಪಕ್ಷದೊಳಗಿನ ಬಣಗಳ ಬಡಿದಾಟಕ್ಕೆ ಅಂತ್ಯ ಹಾಡಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT