ಶಿವಾನಂದ ಪಾಟೀಲ್ 
ರಾಜಕೀಯ

ಅನಗತ್ಯ ರಾಜಕೀಯ ಗಿಮಿಕ್ ಬೇಡ, ಅಭಿವೃದ್ಧಿ ಕಡೆ ಗಮನ ಕೊಡಿ: ಮರುನಾಮಕರಣ ವಿಚಾರಕ್ಕೆ ಶಿವಾನಂದ ಪಾಟೀಲ್ ಕಿಡಿ

ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ ಎಂದು ನಾಮಕರಣ ಮಾಡುವ ವಿಷಯದಲ್ಲಿ ಅನಗತ್ಯವಾಗಿ ಯಾರೂ ಗಿಮಿಕ್ ಮಾಡುವುದು ಬೇಡ. ಚುನಾವಣೆ ಹೊಸ್ತಿಲಲ್ಲಿ ಇಂಥ ನಡೆ ರಾಜಕೀಯ ಅಭಾಸ ಎನಿಸಲಿದೆ.

ವಿಜಯಪುರ: ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ ಎಂದು ನಾಮಕರಣ ಮಾಡುವ ವಿಷಯದಲ್ಲಿ ಅನಗತ್ಯವಾಗಿ ಯಾರೂ ಗಿಮಿಕ್ ಮಾಡುವುದು ಬೇಡ. ಚುನಾವಣೆ ಹೊಸ್ತಿಲಲ್ಲಿ ಇಂಥ ನಡೆ ರಾಜಕೀಯ ಅಭಾಸ ಎನಿಸಲಿದೆ. ವಿಜಯಪುರ ಜಿಲ್ಲೆ ಬಸವೇಶ್ವರರ ತವರು ಜಿಲ್ಲೆ ಎಂಬುದು ಇಡಿ ಜಗತ್ತಿಗೆ ಗೊತ್ತಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರರ ಹೆಸರನ್ನು ವಿಜಯಪುರ ಜಿಲ್ಲೆಗೆ ಮರುನಾಮಕರಣ ಮಾಡುವುದರ ಹಿಂದಿನ ತರ್ಕವೇನು ಎಂದು ಪ್ರಶ್ನಿಸಿದರು. ಹೆಸರು ಬದಲಾವಣೆ ಮಾಡುವ ಬದಲು ಬಸವೇಶ್ವರರು ಜನಿಸಿದ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ಎಂದು ಪ್ರತಿಪಾದಿಸಿದರು.

ಬಸವೇಶ್ವರರು ಹುಟ್ಟಿದ ಸ್ಥಳ ವಿಜಯಪುರ ಎಂಬುದು ಗೊತ್ತಿರುವ ಕಾರಣ ಹೆಸರು ಬದಲಾಯಿಸುವ ಅಗತ್ಯವಿಲ್ಲ. ಬದಲಾಗಿ ಹೆಚ್ಚಿನ ಸೌಲಭ್ಯ ಮತ್ತು ಮೂಲಸೌಕರ್ಯಗಳೊಂದಿಗೆ ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕು ಎಂದಿದ್ದಾರೆ.

ಕೇವಲ ಜಿಲ್ಲೆಗೆ ಬಸವೇಶ್ವರರ ಹೆಸರನ್ನು ಮರುನಾಮಕರಣ ಮಾಡುವುದರಿಂದ ಅವರ ವಿಚಾರಧಾರೆ, ನಿಲುವು, ವ್ಯಕ್ತಿತ್ವವನ್ನು ಪ್ರಚಾರ ಮಾಡಲು ಆಗುವುದಿಲ್ಲ ಎಂದ ಪಾಟೀಲ, ಅವರ ಬದುಕು, ಚಿಂತನೆಗಳನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ಉಳಿಸಿ, ರಕ್ಷಿಸಿ, ಜನಪ್ರಿಯಗೊಳಿಸುವುದು ಮುಖ್ಯ ಎಂದರು.

ಬಸವೇಶ್ವರರು ಕೊನೆಯುಸಿರೆಳೆದ ಕೂಡಲಸಂಗಮ ಇಲ್ಲಿಯವರೆಗೂ ಸಂಪೂರ್ಣ ಅಭಿವೃದ್ಧಿ ಕಂಡಿಲ್ಲ ಎಂದು ವಿಷಾದಿಸಿದರು. ಅದೇ ರೀತಿ ಅವರ ಜನ್ಮಸ್ಥಳವೂ ಇನ್ನೂ ಅಭಿವೃದ್ಧಿಯಾಗಬೇಕಿದೆ. ಮುಖ್ಯಮಂತ್ರಿ ಅವರು ಈ ಪ್ರಮುಖ ಅಂಶಗಳತ್ತ ಗಮನ ಹರಿಸಿದರೆ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದರು.

ಸಮಾಜ ಸುಧಾರಕರ ಜನ್ಮಸ್ಥಳವನ್ನು ಅಭಿವೃದ್ಧಿ ಪಡಿಸಲು ಪ್ರತ್ಯೇಕ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ವಿಶೇಷ ಪ್ಯಾಕೇಜ್‌ಗಳನ್ನು ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.  ಕರ್ನಾಟಕಕ್ಕೆ ಬಸವೇಶ್ವರ ನಾಡು ಎಂದು ಮರುನಾಮಕರಣ ಮಾಡಲು ಆಸಕ್ತಿಯಿಲ್ಲ ಎಂದಿದ್ದಾರೆ.

ಇದೊಂದು ರಾಜಕೀಯ ಗಿಮಿಕ್, ಯಾರೂ ಇತಿಹಾಸ ತಿರುಚುವ ಪ್ರಯತ್ನ ಮಾಡಬಾರದು, ಶ್ರೇಷ್ಠ ಇತಿಹಾಸ ನಿರ್ಮಿಸಲು ಎಲ್ಲರೂ ಶ್ರಮಿಸಬೇಕು. ಜಿಲ್ಲೆಯ ಅಭಿವೃದ್ಧಿಯತ್ತ ಗಮನ ಹರಿಸಿದರೆ ವಿಜಯಪುರ ಜಿಲ್ಲೆ ಜಾಗತಿಕ ಮಟ್ಟದಲ್ಲಿ ತಾನಾಗಿಯೇ ಖ್ಯಾತಿ ಪಡೆಯುತ್ತದೆ ಎಂದು ಪಾಟೀಲ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT