ಬಚ್ಚೇಗೌಡ 
ರಾಜಕೀಯ

ಬಿಜೆಪಿ ಒಂದು ಕೋಮುವಾದಿ ಪಕ್ಷ: ಸ್ವಪಕ್ಷದ ವಿರುದ್ಧವೇ ಸಂಸದ ಬಚ್ಚೇಗೌಡ ವಾಗ್ದಾಳಿ

ಬಿಜೆಪಿ ಒಂದು ಮತೀಯ ಮತ್ತು ಕೋಮುವಾದಿ ಪಕ್ಷ ಎಂದು ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ಅವರು ಶುಕ್ರವಾರ ಸ್ವಪಕ್ಷದ ವಿರುದ್ಧವೇ ತೀವ್ರ ವಾಗ್ದಾಳಿ ನಡೆಸಿದ್ದಾರೆಯ

ಚಿಕ್ಕಬಳ್ಳಾಪುರ: ಬಿಜೆಪಿ ಒಂದು ಮತೀಯ ಮತ್ತು ಕೋಮುವಾದಿ ಪಕ್ಷ ಎಂದು ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ಅವರು ಶುಕ್ರವಾರ ಸ್ವಪಕ್ಷದ ವಿರುದ್ಧವೇ ತೀವ್ರ ವಾಗ್ದಾಳಿ ನಡೆಸಿದ್ದಾರೆಯ

ಇತ್ತೀಚಿಗಷ್ಟೇ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದ ಬಿಜೆಪಿ ಸಂಸದ ಬಚ್ಚೇಗೌಡ ಅವರು ಇಂದು ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ನಡೆದ ದಿಶಾ ಸಭೆಯಲ್ಲಿ ಮಾತಾಡಿದರು.

ಈ ವೇಳೆ ಬಿಜೆಪಿ - ಜೆಡಿಎಸ್ ಮೈತ್ರಿ ಬಗ್ಗೆ ವರದಿಗಾರರೊಂದಿಗೆ ಮಾತನಾಡಿದ ಬಚ್ಚೇಗೌಡ ಅವರು, ದೇವೇಗೌಡರು ಇರುವವರೆಗೂ ಬಿಜೆಪಿ ಜೊತೆ ಜೆಡಿಎಸ್ ಹೋಗುವುದಿಲ್ಲ ಎಂದುಕೊಂಡಿದ್ದೆ. ಜಾತ್ಯತೀತ ಎನಿಕೊಂಡಿರುವ ಜೆಡಿಎಸ್ ಕೋಮುವಾದಿ ಬಿಜೆಪಿ ಜೊತೆ ಹೋಗುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ.

ಜಾತ್ಯಾತೀತ ಅಂತ ಹೆಸರಿಟ್ಟುಕೊಂಡು ಒಂದು ಕೋಮುವಾದಿ ಪಕ್ಷದ ಜೊತೆ ಸ್ನೇಹ ಬೆಳೆಸಲು ಹೊರಟಿದ್ದಾರೆ. ಇದು ನನಗೆ ಅಚ್ಚರಿ ಮೂಡಿಸಿದೆ ಎಂದು ಬಚ್ಚೇಗೌಡ ಹೇಳಿದರು. ಸರ್ ನೀವು ಬಿಜೆಪಿ ಸಂಸದರು ಅಲ್ವಾ ಅಂತ ಕೇಳಿದಾಗ, ಹೌದು ನಿಜ, ಹಾಗಂತ ಪಕ್ಷ ಮಾಡಿದ್ದನ್ನೆಲ್ಲ ಸರಿ ಅಂತ ಹೇಳಲಾಗಲ್ಲ. ನನಗೂ ಸಾಕಷ್ಟು ಅನುಭವವಾಗಿದೆ, ಕೆಲವು ಸಲ ಸುಮ್ಮನಿರಬೇಕಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕೂಡಲೇ ಧರ್ಮೇಂದ್ರ ಪ್ರಧಾನ್`ರನ್ನು ವಜಾ ಮಾಡಿ; ಇಲ್ಲದಿದ್ದರೆ ನಿಮ್ಮ ರಾಜೀನಾಮೆಯನ್ನೂ ಕೇಳುತ್ತೇವೆ': ಪ್ರಧಾನಿ ಮೋದಿಗೆ CJP ಮುಖ್ಯಸ್ಥ Abhijeet Dipke ಎಚ್ಚರಿಕೆ

'ಪ್ರಜಾಪ್ರಭುತ್ವ ಉಳಿಸಿ': CJP Protest ಬೆಂಬಲಿಸಿ ಸಂವಿಧಾನದ ಪ್ರಸ್ತಾವನೆ ಓದಿದ ಸುಪ್ರೀಂ ಕೋರ್ಟ್ ವಕೀಲರು!

'ದೃಷ್ಟಿ ಕಳೆದುಕೊಳ್ಳುವ ಭೀತಿ': CJP ಪ್ರತಿಭಟನೆ ವೇಳೆ ಪೆಲೆಟ್ ಗುಂಡಿನ ಗಾಯ; ಪೊಲೀಸ್ ಆಗಬೇಕೆಂಬ ಸಾಹಿಲ್ ಆಸೆಗೆ ಕೊಳ್ಳಿ!

CJP ಪ್ರತಿಭಟನೆ: ಫ್ಯಾನ್ಸ್ ಕೆಂಗಣ್ಣಿಗೆ ಗುರಿ ಆದ ಸೋನು ನಿಗಮ್, ಶೋ ಬಹಿಷ್ಕಾರಕ್ಕೆ ಕರೆ! Video

ಮುಂಗಾರು ಅಧಿವೇಶನ: ಪ್ರತಿಪಕ್ಷಗಳ NEET ಬಿಸಿಗೆ ಕೇಂದ್ರ ತಲ್ಲಣ; ಉಭಯ ಸದನ 4ನೇ ದಿನಕ್ಕೆ ಮುಂದೂಡಿಕೆ!