ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ 
ರಾಜಕೀಯ

ಜಯನಗರದಲ್ಲಿ ಕೋಟಿ ಕೋಟಿ ಹಣ ಪತ್ತೆ; ಕಾಂಗ್ರೆಸ್ ಗೆ ಸೋಲಿನ ಅರಿವು ಸ್ಪಷ್ಟ: ತೇಜಸ್ವಿ ಸೂರ್ಯ

Nagaraja AB

ಬೆಂಗಳೂರು: ಚುನಾವಣಾ ಆಯೋಗ ಜಯನಗರದಲ್ಲಿ ಶನಿವಾರ ವಶಪಡಿಸಿಕೊಂಡಿರುವ ಕೋಟಿ, ಕೋಟಿ ಹಣ ಕಾಂಗ್ರೆಸ್ ಗೆ ಸೋಲಿನ ಅರಿವಾಗಿರುವುದರ ಸ್ಪಷ್ಟ ಸಂಕೇತವಾಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿಯಾಗಿರುವ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಈ ಕುರಿತು ಸಮಗ್ರ ತನಿಖೆ ನಡೆಸಿ, ಇದರಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಬೇಕು ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ತೇಜಸ್ವಿ ಸೂರ್ಯ, ನಮ್ಮ ದೂರಿನ ಆಧಾರದ ಮೇಲೆ ಚುನಾವಣಾ ಆಯೋಗವು ಜಯನಗರದಲ್ಲಿ ಕಾಂಗ್ರೆಸ್ ನವರಿಂದ 1.34 ಕೋಟಿ ರೂ, ಅಕ್ರಮ ಹಣ ಜಪ್ತಿ ಮಾಡಿದೆ. ಸೋಲಿನ ಹತಾಶೆಯಿಂದ ಕಾಂಗ್ರೆಸ್ ಹಣ ಮತ್ತು ತೋಳ್ಬಲದ ಪ್ರದರ್ಶನಕ್ಕೆ ಇಳಿದಿರುವುದು ದುರಂತ. ನರೇಂದ್ರ ಮೋದಿ ಅವರ ಅಭಿವೃದ್ಧಿಯ ಆಧಾರದಲ್ಲಿ, ಮುಂಬರುವ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದ ಸ್ವಾಭಿಮಾನಿ ಮತದಾರರು ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಣ, ತೋಳ್ಬಲದ ಆಧಾರದಲ್ಲಿ ಚುನಾವಣೆ ಗೆಲ್ಲಬಹುದು ಎಂಬ ಅಹಂಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಬೆಂಗಳೂರು ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಜಯನಗರದಲ್ಲಿ ದುಡ್ಡು ವಶಪಡಿಸಿಕೊಂಡ ಸಂದರ್ಭದಲ್ಲಿ ಸ್ಥಳದಲ್ಲಿ ಪ್ರತ್ಯಕ್ಷವಾಗುತ್ತಿರುವ ಕಾಂಗ್ರೆಸ್ ನಾಯಕರು, ಮರೆಗೆ ತೆರಳಿ ತಮ್ಮ ಪೊಲಿಟಿಕಲ್ ಬಾಸ್ ಗಳ ಜೊತೆ ಸಂಭಾಷಣೆಯಲ್ಲಿ ನಿರತವಾಗಿರುವುದನ್ನು ಮಾಧ್ಯಮಗಳೇ ಸೆರೆ ಹಿಡಿದಿವೆ. ಸಾರ್ವಜನಿಕರು ಅಭಿವೃದ್ಧಿಯ ರಾಜಕಾರಣಕ್ಕೆ , ದೇಶದ ಹಿತಾಸಕ್ತಿ ಕಾಯುವ ಬಿಜೆಪಿಗೆ ಬೆಂಬಲ ನೀಡುತ್ತಾರೆಯೇ ವಿನಃ, ಕಾಂಗ್ರೆಸ್ ನ ಹತಾಶೆಯ, ಕೊನೆಯ ಹಂತದ ದುಡ್ಡಿನ ರಾಜಕಾರಣಕ್ಕೆ ಅಲ್ಲ ಎಂಬುದು ಸ್ಪಷ್ಟ ಎಂದು ಹೇಳಿದ್ದಾರೆ.

SCROLL FOR NEXT