ವಿಪಕ್ಷ ನಾಯಕ ಆರ್.ಅಶೋಕ್ 
ರಾಜಕೀಯ

ಕೆಫೆ ಸ್ಫೋಟ ಪ್ರಕರಣ: ಕಾಂಗ್ರೆಸ್ ನಾಯಕರಿಂದ ತನಿಖೆ ದಿಕ್ಕು ತಪ್ಪಿಸುವ ಯತ್ನ- ಆರ್.ಅಶೋಕ್

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಶನಿವಾರ ಆರೋಪಿಸಿದರು.

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಶನಿವಾರ ಆರೋಪಿಸಿದರು.

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಶನಿವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ದುಷ್ಕರ್ಮಿಗಳ ಕೈವಾಡವಿರುವ ಮಹತ್ವದ ಅಂಶವನ್ನು ಎನ್ ಐಎ ಅಧಿಕಾರಿಗಳು ಹೊರಗೆ ಹಾಕಿದ್ದಾರೆ. ಘಟನೆಯ ಆರಂಭಿಕ ಹಂತದಲ್ಲಿ ಇದೊಂದು ಸಣ್ಣ ಪ್ರಕರಣ, ಹೋಟೆಲ್ ಉದ್ಯಮದ ಪೈಪೋಟಿಯು ಕಾರಣ ಇರಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆದಿಯಾಗಿ ಅನೇಕ ಸಚಿವರು ತೀರ್ಪು ನೀಡಿದ್ದರು. ಅಷ್ಟೇ ಅಲ್ಲ ಮತ್ತೊಬ್ಬ ಸಚಿವ ಪ್ರಕರಣದ ಸಾಕ್ಷಿದಾರನನ್ನು ಶಂಕಿತ ಎಂದು ಬಿಂಬಿಸಿ ಬಿಜೆಪಿ ತಲೆಗೆ ಕಟ್ಟುವ ಹಾಸ್ಯಾಸ್ಪದ ಪ್ರಯತ್ನಕ್ಕೂ ಕೈಹಾಕಿದ್ದರು.

ಓಲೈಕೆ ಸರ್ಕಾರ ಹಾಕಿಕೊಟ್ಟ ಜಾಡಿನಲ್ಲಿ ಸಾಗಿದ ಪೊಲೀಸರ ತನಿಖೆ ಆರೋಪಿಗಳ ಪತ್ತೆ, ಹೆಚ್ಚಿನ ವಿವರ ಕಲೆಹಾಕಲು ಸಾಧ್ಯವಾಗಲಿಲ್ಲ. ಆದರೆ. ಎನ್ ಐಎ ತನಿಖೆಗೆ ಇಳಿದ ನಂತರ ತನಿಖೆ ಚುರುಕಾಗಿ ಉಗ್ರ ಕೃತ್ಯವೆಂಬುದು ದೃಢಪಟ್ಟಿದೆ. ಜತೆಗೆ ಕಾಂಗ್ರೆಸ್ ನವರಿಗೆ ಆಂತರಿಕ ಭದ್ರತೆ, ಸುರಕ್ಷತೆ ಬಗ್ಗೆ ಕಾಳಜಿ ಇಲ್ಲವೆಂಬುದು ಬಯಲುಗೊಳಿಸಿದೆ ಎಂದು ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬಂಧನ ಮಾಡಲು ಒಂದು ವಾರ ತೆಗೆದುಕೊಂಡರು. ಆದರೆ, ಅವರು ಕೂಗೇ ಇಲ್ಲ ಎಂದು ಕಾಂಗ್ರೆಸ್ ಸಚಿವರು ವಾದ ಮಾಡಿದರು. ಆದರೆ ಇವಾಗ ಯಾರದ್ದು ಕಾಮಾಲೆ ಕಣ್ಣು? ಕಾಂಗ್ರೆಸ್ ನವರು ಇವಾಗ ಏನು ಹೇಳುತ್ತೀರಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನ ತುಷ್ಟೀಕರಣ ರಾಜಕಾರಣವು ವಿಧ್ವಂಸಕ ಕೃತ್ಯ‌ ಎಸಗುವವರಿಗೆ ‘ಸುರಕ್ಷಿತ ಮಾನಸಿಕತೆ’ಯನ್ನು ನೀಡಿದೆ. ಇಂಡಿ ಒಕ್ಕೂಟದ ಡಿಎಂಕೆಯ ಸ್ಟಾಲಿನ್, ಈ ಒಕ್ಕೂಟದಲ್ಲಿದ್ದ ಟಿಎಂಸಿ ನಾಯಕಿ ಮಮತಾ ನಾಯಕಿ ಮಮತಾ ಬ್ಯಾನರ್ಜಿ ಧೋರಣೆ ಭಿನ್ನವಾಗಿಲ್ಲ. ನೀವು ಏನೇ ಮಾಡಿ ನಮಗೆ ವೋಟು ಹಾಕಿ ಎಂಬ ಸಂದೇಶ ಘಾತುಕರಿಗೆ ನೀಡಿದಂತಿದ್ದು, ಈ ರಾಜ್ಯಗಳು ಸುರಕ್ಷಿತ ಅಡಗುತಾಣವಾಗಿದೆ. ಸರ್ಕಾರವೇ ಮೃದು ನಿಲುವು ತಳೆದಾಗ ಗುಪ್ತಚರ ವ್ಯವಸ್ಥೆಯು ದುರ್ಬಲವಾಗುತ್ತದೆ ಎಂದು ದೂರಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT