ಮೈಸೂರು-ಕೊಡಗು ಕ್ಷೇತ್ರಗಳ ಅಭ್ಯರ್ಥಿಗಳ ಕೊಲಾಜ್ ಚಿತ್ರ  
ರಾಜಕೀಯ

ರಾಜವಂಶಸ್ಥ V/S ಜನಸಾಮಾನ್ಯ: ಮೈಸೂರು-ಕೊಡಗಿನಲ್ಲಿ ನಿರ್ಣಾಯಕವಾಗುತ್ತಾ ಒಕ್ಕಲಿಗ ಮತಗಳು?

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ರಾಜವಂಶಸ್ಥರು ಮತ್ತು ಸಾಮಾನ್ಯರ ನಡುವೆ ಹೈವೋಲ್ಟೇಜ್ ಸ್ಪರ್ಧೆ ಏರ್ಪಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತವರು ನೆಲದಲ್ಲಿ ತಮ್ಮ ಜನಪ್ರಿಯತೆಯನ್ನು ಪಣಕ್ಕಿಟ್ಟಿದ್ದರೆ, ಬಿಜೆಪಿ ಇಲ್ಲಿ ಸತತ ಮೂರನೇ ಬಾರಿಗೆ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ರಾಜವಂಶಸ್ಥರು ವರ್ಸಸ್ ಸಾಮಾನ್ಯರ ನಡುವೆ ಹೈವೋಲ್ಟೇಜ್ ಸ್ಪರ್ಧೆ ಏರ್ಪಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ನೆಲದಲ್ಲಿ ತಮ್ಮ ಜನಪ್ರಿಯತೆಯನ್ನು ಪಣಕ್ಕಿಟ್ಟಿದ್ದರೆ, ಬಿಜೆಪಿ ಇಲ್ಲಿ ಸತತ ಮೂರನೇ ಬಾರಿಗೆ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹದಿನೆಂಟು ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಆದರೆ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಮೇಲೆ ಎಲ್ಲರ ಗಮನ. ರಾಜ್ಯ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ ಅವರು ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.

ಕೇಸರಿ ಪಕ್ಷವು ತನ್ನ ಹಾಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಕೈಬಿಟ್ಟು ಯದುವೀರ್ ಅವರನ್ನು ನಾಮನಿರ್ದೇಶನ ಮಾಡುವ ಮೂಲಕ 'ಮಾಸ್ಟರ್ಸ್ಟ್ರೋಕ್' ನೀಡಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಲಕ್ಷ್ಮಣ್ ಅವರ ಉಮೇದುವಾರಿಕೆ ಮೂಲಕ ರಾಜ್ಯ ಕಾಂಗ್ರೆಸ್ ಇಲ್ಲಿ ಒಕ್ಕಲಿಗ ಮತ ಮೇಲೆ ಕಣ್ಣಿಟ್ಟಿದೆ. ಮೈಸೂರು ಬಿಜೆಪಿಯಲ್ಲಿದ್ದ ಆಂತರಿಕ ಭಿನ್ನಮತ ಪ್ರತಾಪ್ ಸಿಂಹ ಅವರನ್ನು ಕೈಬಿಟ್ಟ ನಂತರ ಕೇಂದ್ರ ನಾಯಕತ್ವ ಪ್ರವೇಶ ಮೂಲಕ ಬಗೆಹರಿಸಲಾಗಿದೆ.

ಆದರೆ ಪ್ರತಾಪ್ ಸಿಂಹ ಅವರು ಒಕ್ಕಲಿಗ ಸಮುದಾಯದವರಾಗಿರುವುದರಿಂದ ಆ ಸಮುದಾಯದವರಲ್ಲಿ ಕೊಂಚ ಅಸಮಾಧಾನವಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವು ಒಕ್ಕಲಿಗ ಸಮುದಾಯದ ಲಕ್ಷ್ಮಣ ಅವರನ್ನು ಕಣಕ್ಕಿಳಿಸಿ ಮತ ಗಳಿಸುವ ತಂತ್ರಗಾರಿಕೆ ಅನುಸರಿಸುತ್ತಿದೆ. ವಾಸ್ತವದಲ್ಲಿ 40 ವರ್ಷಗಳಿಂದ ಕಾಂಗ್ರೆಸ್‌ನಿಂದ ಮೈಸೂರು ಕ್ಷೇತ್ರದಿಂದ ಕಣಕ್ಕಿಳಿದ ಮೊದಲ ಒಕ್ಕಲಿಗ ಲಕ್ಷ್ಮಣ್. ಕಾಂಗ್ರೆಸ್ ಇದನ್ನು ರಾಜವಂಶಸ್ಥ ಮತ್ತು ಸಾಮಾನ್ಯರ ನಡುವಿನ ಹೋರಾಟ ಎಂದು ಬಿಂಬಿಸುತ್ತಿದೆ. ಇದು ಕರ್ನಾಟಕದ ಸಂಕೀರ್ಣವಾದ ರಾಜಕೀಯ ಚಿತ್ರಣದ ಸಂಕೇತವಾಗಿದೆ.

ಯದುವೀರ್‌ ಒಡೆಯರ್ ಅವರಿಗೆ ಕನಿಷ್ಠ 1 ಲಕ್ಷ ಮತಗಳ ಮುನ್ನಡೆ ಸಾಧಿಸಲು ಪಕ್ಷದ ಚುನಾವಣಾ ಶಕ್ತಿಯನ್ನು ಮತ್ತು ಜೆಡಿಎಸ್ ಶಾಸಕರನ್ನು ಬಳಸಿಕೊಂಡು ಒಗ್ಗಟ್ಟಿನಿಂದ ಹೋರಾಡಲು ಬಿಜೆಪಿ ನೋಡುತ್ತಿದೆ, ಆದರೆ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಕ್ರೋಢೀಕರಿಸುವ ಸಂದರ್ಭದಲ್ಲಿ ಲಕ್ಷ್ಮಣ್ ಅವರ ಮೂಲಕ ಒಕ್ಕಲಿಗ ಮೂಲಗಳನ್ನು ನೆಚ್ಚಿಕೊಂಡಿದೆ.

ಮೈಸೂರು ಭಾಗಗಳಲ್ಲಿ ಆಳವಾಗಿ ಬೇರೂರಿರುವ ಯದುವೀರ್ ಅವರ ರಾಜಮನೆತನದ ಶಕ್ತಿ ಎದುರಿಸುವುದು ಕಾಂಗ್ರೆಸ್ ಗೆ ಕಷ್ಟವಾಗಿದೆ. ಎರಡು ದಶಕಗಳ ನಂತರ ರಾಜಕೀಯದಲ್ಲಿ ಒಡೆಯರ್ ಕುಟುಂಬ ಪುನರುತ್ಥಾನಗೊಂಡಿರುವುದು ಕಾಂಗ್ರೆಸ್ ಗೆ ಸವಾಲಾಗಿದೆ.

ಯದುವೀರ್ ಅವರ ಅಭಿಯಾನವು ಪಾರಂಪರಿಕ ಸಂರಕ್ಷಣೆಯೊಂದಿಗೆ ಹೆಣೆದುಕೊಂಡಿರುವ ಕೈಗಾರಿಕಾ ಬೆಳವಣಿಗೆಯನ್ನು ಒತ್ತಿಹೇಳುತ್ತದೆ, ವಿದ್ಯಾರ್ಥಿಗಳು ಮತ್ತು ಯುವಕರು ಒಡೆಯರ್ ಪರವಾಗಿರುವಂತೆ ಕಂಡುಬರುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ, ಲಕ್ಷ್ಮಣ್ ಅವರು ಮೈಸೂರು ಮತ್ತು ಕೊಡಗಿನ ಅಭಿವೃದ್ಧಿಗೆ ಸಮಗ್ರ ದೃಷ್ಟಿಕೋನವನ್ನು ವಿವರಿಸುತ್ತಾರೆ. ಕಾಂಗ್ರೆಸ್‌ನ ಖಾತರಿ ಕಾರ್ಯಕ್ರಮಗಳ ಮೇಲೆ ಕೂಡ ಅವಲಂಬಿತವಾಗಿದ್ದಾರೆ.

ಲಕ್ಷ್ಮಣ್ ಅವರ ಉಮೇದುವಾರಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ವೈಯಕ್ತಿಕ ವರ್ಚಸ್ಸು ಕೂಡ ಮುಖ್ಯವಾಗಿದೆ.ಇದು ಅವರ ನಾಯಕತ್ವದ ಜನಾಭಿಪ್ರಾಯ ಎಂದು ರೂಪಿಸುತ್ತದೆ. ಕಾಂಗ್ರೆಸ್ ತಳಮಟ್ಟದಿಂದ ಮತದಾರರನ್ನು ತಲುಪಿ ಮತಗಳಿಕೆಯಾಗಿ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ರಾಜಮನೆತನದ ಅಭ್ಯರ್ಥಿಯಿಂದ ಬಿಜೆಪಿ ಗೆಲ್ಲುತ್ತದೆಯೇ ಅಥವಾ ಬಿಜೆಪಿಯ ಒಕ್ಕಲಿಗ ಬೆಂಬಲದ ಮೂಲದಲ್ಲಿ ಕಾಂಗ್ರೆಸ್ ತಿಣುಕಾಡಬಹುದೇ ಎಂಬುದನ್ನು ಈ ಬಾರಿಯ ಲೋಕಸಭೆ ಚುನಾವಣೆ ಫಲಿತಾಂಶ ನಿರ್ಧರಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT