ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ  
ರಾಜಕೀಯ

ಆಸ್ತಿ ಮೌಲ್ಯ 54 ಕೋಟಿ ರೂ., ಯಾವುದೇ ವಾಹನ ಹೊಂದಿಲ್ಲ!: ಹಾವೇರಿ ಕ್ಷೇತ್ರದಿಂದ ಮಾಜಿ ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

Sumana Upadhyaya

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಕ್ಷೇತ್ರದಿಂದ ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅವರು ಘೋಷಿಸಿಕೊಂಡಂತೆ ಅವರ ಬಳಿ 23.45 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದ್ದು, ಅದರಲ್ಲಿ 20 ಕೋಟಿ ಮೌಲ್ಯದ ಆಸ್ತಿ ತಮ್ಮ ಪೂರ್ವಜರಿಂದ ಹಿಂದೂ ಅವಿಭಜಿತ ಕುಟುಂಬದಿಂದ(HUF) ಬಂದುದಾಗಿದೆ ಎಂದು ಘೋಷಿಸಿಕೊಂಡಿದ್ದಾರೆ.

ಇನ್ನು ತಮ್ಮ ಬಳಿ 6.12 ಕೋಟಿ ಮೌಲ್ಯದ ಚರಾಸ್ತಿ ಮತ್ತು ಪತ್ನಿ ಚನ್ನಮ್ಮ ಹೆಸರಿನಲ್ಲಿ 1.32 ಕೋಟಿ ರೂಪಾಯಿ ಚರಾಸ್ತಿಯಿದೆ ಎಂದು ಬಹಿರಂಗಪಡಿಸಿದ್ದಾರೆ. ಅವರು ತಮ್ಮ ಹೆಸರಿನಲ್ಲಿ 5.31 ಕೋಟಿ ರೂ ಮೌಲ್ಯದ ಸಾಲ ಹೊಂದಿದ್ದು ಅದರಲ್ಲಿ 15 ಲಕ್ಷ ರೂಪಾಯಿ ಪೂರ್ವಜರಿಂದ ಬಂದುದಾಗಿದೆ. ಪೂರ್ವಜರಿಂದ 1.49 ಕೋಟಿ ಚರಾಸ್ತಿಯನ್ನು ಹೊಂದಿದ್ದು ಅದರಲ್ಲಿ 1.53 ಕೋಟಿ ರೂಪಾಯಿ ತಮ್ಮ ಪುತ್ರಿ ಅದಿತಿ ಬೊಮ್ಮಾಯಿ ಹೆಸರಿನಲ್ಲಿದೆ.

ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿರುವ 64 ವರ್ಷದ ಬೊಮ್ಮಾಯಿ ಅವರು ಯಾವುದೇ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿಲ್ಲ. ಇನ್ನು ತಮ್ಮ ಕುಟುಂಬ ಯಾವುದೇ ವಾಹನ ಹೊಂದಿಲ್ಲ. ಬದಲಿಗೆ 3.14 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಪ್ರಸ್ತುತ ಶಿಗ್ಗಾವಿ ಕ್ಷೇತ್ರದ ಶಾಸಕರಾಗಿದ್ದಾರೆ.

SCROLL FOR NEXT