ಕೊಡಗು ಜಿಲ್ಲೆಯಲ್ಲಿರುವ ಬುಡಕಟ್ಟು ಜನಾಂಗ 
ರಾಜಕೀಯ

ಬಿಜೆಪಿ ಭದ್ರಕೋಟೆ ಕೊಡಗು: ಗ್ಯಾರಂಟಿಗಳಿಂದಾಗಿ ಕಾಂಗ್ರೆಸ್‌ನತ್ತ ಒಲವು; ಯಾರ ಪರ ಮತದಾರನ ನಿಲುವು!

ಜಿಲ್ಲೆಯಲ್ಲಿ 4.5 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಹೆಚ್ಚಿನ ಸಂಖ್ಯೆಯ ಹಿಂದೂ ಮಧ್ಯಮ ವರ್ಗದ ನಿವಾಸಿಗಳು ಬಿಜೆಪಿಗೆ ತಮ್ಮ ಬೆಂಬಲ ಮುಂದುವರಿಸಲು ಬಯಸುತ್ತಿದ್ದಾರೆ, ಅನೇಕ ಬುಡಕಟ್ಟುಗಳು ಸೇರಿದಂತೆ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ಮತದಾರರು ಕಾಂಗ್ರೆಸ್ ಪಕ್ಷ ಬೆಂಬಲಿಸಲು ಪ್ರತಿಜ್ಞೆ ಮಾಡಿದ್ದಾರೆ.

ಮಡಿಕೇರಿ: ಬಿಜೆಪಿಯ ಭದ್ರಕೋಟೆಯಾಗಿದ್ದ ಕೊಡಗಿನ ರಾಜಕೀಯ ನಿಲುವು ಇತ್ತೀಚಿನ ದಿನಗಳಲ್ಲಿ ಬದಲಾಗಿದೆ. ಸಾರ್ವಜನಿಕ ಅಭಿಪ್ರಾಯ ಮತ್ತು ಮತದಾರರ ಮನಸ್ಥಿತಿ ಬದಲಾವಣೆಯಿಂದ ಎರಡು ಪಕ್ಷಗಳ ನಡುವೆ ನೇರಾ ನೇರ ಹೋರಾಟ ಏರ್ಪಟ್ಟಿದೆ.

ಜಿಲ್ಲೆಯಲ್ಲಿ 4.5 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಹೆಚ್ಚಿನ ಸಂಖ್ಯೆಯ ಹಿಂದೂ ಮಧ್ಯಮ ವರ್ಗದ ನಿವಾಸಿಗಳು ಬಿಜೆಪಿಗೆ ತಮ್ಮ ಬೆಂಬಲ ಮುಂದುವರಿಸಲು ಬಯಸುತ್ತಿದ್ದಾರೆ, ಅನೇಕ ಬುಡಕಟ್ಟುಗಳು ಸೇರಿದಂತೆ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ಮತದಾರರು ಕಾಂಗ್ರೆಸ್ ಪಕ್ಷ ಬೆಂಬಲಿಸಲು ಪ್ರತಿಜ್ಞೆ ಮಾಡಿದ್ದಾರೆ.

‘ರಾಷ್ಟ್ರೀಯತೆ’ ಸಿದ್ಧಾಂತ ಬೆಂಬಲಿಸುವ ಕೊಡವರು ಯಾವಾಗಲೂ ಬಿಜೆಪಿಯತ್ತ ಒಲವು ತೋರಿದ್ದಾರೆ. ಅದೇನೇ ಇದ್ದರೂ, ಜಿಲ್ಲೆಯಾದ್ಯಂತ ಸಂಗ್ರಹಿಸಿದ ಅಭಿಪ್ರಾಯಗಳ ಪ್ರಕಾರ ಕೊಡವರು ಸಾಕಷ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕ ಎಎಸ್ ಪೊನ್ನಣ್ಣ ಪರವಾಗಿದ್ದಾರೆ. ಶ್ರೀಮಂಗಲ, ಕುಟ್ಟ, ಗೋಣಿಕೊಪ್ಪಲು ಸೇರಿದಂತೆ ದಕ್ಷಿಣ ಕೊಡಗಿನಲ್ಲಿ ಪೊನ್ನಣ್ಣ ಅವರನ್ನು ಜನ ಬೆಂಬಲಿಸುತ್ತಿದ್ದಾರೆ. ಅನೇಕ ಸಣ್ಣ ಬೆಳೆಗಾರರು ಕೂಡ ಕಾಂಗ್ರೆಸ್‌ಗೆ ಒಲವು ತೋರುವ ಸಾಧ್ಯತೆ ಇದೆ. “ಕಾಂಗ್ರೆಸ್ ಪ್ರಣಾಳಿಕೆಯು ಸ್ವಾಮಿನಾಥನ್ ವರದಿಯ ಅನುಷ್ಠಾನದ ಜೊತೆಗೆ ಎಂಎಸ್‌ಪಿ ಮತ್ತು ಸಾಲ ಮನ್ನಾಕ್ಕೆ ಭರವಸೆ ನೀಡುತ್ತದೆ. ಬಿಜೆಪಿಯಿಂದ ಸಣ್ಣ ಬೆಳೆಗಾರರಿಗೆ ಲಾಭವಾಗಿಲ್ಲ ಎಂದು ಶ್ರೀಮಂಗಲದ ಬೆಳೆಗಾರ ಹರೀಶ್ ಮಾದಪ್ಪ ಬೇಸರ ವ್ಯಕ್ತಪಡಿಸಿದರು. ದಕ್ಷಿಣ ಕೊಡಗಿನ ಹಲವಾರು ಯುವಕರು ಸಹ ಸ್ಥಳೀಯ ಶಾಸಕರ ಅಭಿಮಾನಿಗಳಾಗಿದ್ದಾರೆ.

ಬಹುಪಾಲು ಬುಡಕಟ್ಟುಗಳು ಬಿಜೆಪಿ ವಿರುದ್ಧ ತಿರುಗಿ ಬಿದ್ದಿವೆ. ಪಕ್ಷದಿಂದ ಶೋಷಣೆ ಮಾಡುತ್ತಿವೆ ಎಂದು ಆರೋಪಿಸಿ ಪೊನ್ನಣ್ಣನತ್ತ ಒಲವು ತೋರುತ್ತಿದ್ದಾರೆ. ಬಿಜೆಪಿಯು ಅರಣ್ಯಗಳ ಖಾಸಗೀಕರಣ, ಸರ್ಕಾರಿ ಭೂಮಿಯನ್ನು ಅತಿಕ್ರಮಣದಾರರಿಗೆ ಗುತ್ತಿಗೆ ನೀಡುವುದು ಮತ್ತು ಸಂವಿಧಾನವನ್ನು ಬದಲಾಯಿಸುವ ಯೋಜನೆಯಲ್ಲಿ ತೊಡಗಿದೆ. ಬುಡಕಟ್ಟು ಜನಾಂಗದವರ ಮೇಲೆ ಶೋಷಣೆ ಹೆಚ್ಚುತ್ತಿದ್ದು, ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಜೇನುಕುರುಬ ಮುಖಂಡ ಜೆ.ಟಿ.ಕಾಳಿಂಗ ಹೇಳಿದರು.

ಸ್ವಾತಂತ್ರ್ಯ ಬಂದ ನಂತರ ತಮಗೆ ಸ್ವಂತ ಮನೆಗಳನ್ನು ಮಂಜೂರು ಮಾಡಿ ನಮ್ಮ ಅಗತ್ಯಗಳನ್ನು ಪೂರೈಸಿದ್ದಾರೆ ಎಂದು ಬುಡಕಟ್ಟು ಜನಾಂಗದವರು ಕಾಂಗ್ರೆಸ್ ಶಾಸಕರ ಪರ ಒಲವು ತೋರಿದ್ದಾರೆ. ಅದೇನೇ ಇದ್ದರೂ, ಬುಡಕಟ್ಟುಗಳ ಒಂದು ವಿಭಾಗವು ಕೊನೆಯ ಕ್ಷಣದ ಲಂಚಗಳಿಂದ ಪ್ರಭಾವಿತರಾಗುವ ಸಾಧ್ಯತೆಯಿದೆ.

ಏತನ್ಮಧ್ಯೆ, ಕಡೆಗಣಿಸಲ್ಪಟ್ಟಿದ್ದರೂ ಸಹ ಮುಸ್ಲಿಂ ಮತದಾರರು ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. “ಕಾಂಗ್ರೆಸ್ ಕಾರ್ಯಕರ್ತರು ಒಕ್ಕಲಿಗ ಪ್ರದೇಶದ ಮೇಲೆ ಮಾತ್ರ ಕೇಂದ್ರೀಕರಿಸುತ್ತಿದ್ದಾರೆ, ಇದುವರೆಗೂ ಮತಕ್ಕಾಗಿ ನಮ್ಮನ್ನು ಸಂಪರ್ಕಿಸಿಲ್ಲ. ಆದರೆ ನಮಗೆ ಸೀಮಿತ ಆಯ್ಕೆಗಳಿದ್ದು, ಕಾಂಗ್ರೆಸ್‌ಗೆ ಬೆಂಬಲ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕಂದಕೆರೆ ನಿವಾಸಿ ಇಸ್ಮಾಯಿಲ್ ಹೇಳಿದರು. ಪೊನ್ನಂಪೇಟೆಯಾದ್ಯಂತ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಉಳಿದ ಮತದಾರರು ಬಿಜೆಪಿ-ಜೆಡಿಎಸ್ ಮೈತ್ರಿಗೆ ಬೆಂಬಲ ನೀಡಿದ್ದಾರೆ. ಮಡಿಕೇರಿಯಲ್ಲಿ ಮತದಾರರು ಹೆಚ್ಚಾಗಿ ಬಿಜೆಪಿಯತ್ತ ಒಲವು ತೋರಿದ್ದಾರೆ. ಯಾರು ನಮಗೆ ಉಚಿತ ಕೊಡುಗೆಗಳನ್ನು ನೀಡಿದರೂ ನಾವು ಮಾತ್ರ ಕೇಂದ್ರದಲ್ಲಿ ಮೋದಿಯವರನ್ನು ಆಯ್ಕೆ ಮಾಡುತ್ತೇವೆ" ಎಂದು ಹೇಳುತ್ತಾರೆ.

ಭಾಗಮಂಡಲ, ಅಪ್ಪಂಗಳ, ಆವಂದೂರು ಹಾಗೂ ಸುತ್ತಮುತ್ತಲಿನ ಕುಶಾಲನಗರದ ಗೌಡರ ಮತದಾರರು ಅತಂತ್ರರಾಗಿದ್ದಾರೆ. ಸೋಮವಾರಪೇಟೆಯಾದ್ಯಂತ ಒಕ್ಕಲಿಗ ಅಭ್ಯರ್ಥಿಯ ಕಾರಣದಿಂದ ಜೆಡಿಎಸ್ ಮತಗಳು ಕಾಂಗ್ರೆಸ್ ಪರವಾಗಿ ತಿರುಗುವ ಸಾಧ್ಯತೆಯಿರುವುದರಿಂದ ನೇರ ಪೈಪೋಟಿ ಎದುರಾಗಲಿದೆ. ನಾಪೋಕ್ಲುವಿನಲ್ಲಿ ಶಾಸಕ ಪೊನ್ನಣ್ಣ ಅವರೊಂದಿಗೆ ಹಲವಾರು ಯುವಕರು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ, ಈ ಕಾರ್ಯಕರ್ತರು ವಿವೇಚನೆಯಿಂದ ಕೇಂದ್ರದಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ದಕ್ಷಿಣ ಕೊಡಗಿನ ಪ್ರಮುಖ ಭಾಗಗಳಲ್ಲಿ ‘ಮೋದಿ ಅಲೆ’ ವಿರುದ್ಧ ‘ಪೊನ್ನಣ್ಣ ಅಲೆ’ಯಾಗಿದ್ದು, ಜಿಲ್ಲೆಯ ಉತ್ತರ ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡುವ ನಿರೀಕ್ಷೆ ಇದೆ. ಕೇವಲ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮತಗಳೊಂದಿಗೆ ಕಾಂಗ್ರೆಸ್ ನಿರೀಕ್ಷಿತ ಮುನ್ನಡೆ ಪಡೆಯುವುದು ಕಠಿಣವಾಗಿದ್ದರೂ, ಬಿಜೆಪಿಗೆ ಸಿಂಹಪಾಲು ಸಿಗುವುದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ತೀರ್ಮಾನಿಸಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

SCROLL FOR NEXT