ಕೆ.ಪಿ. ನಂಜುಂಡಿ, ಡಿಕೆ ಶಿವಕುಮಾರ್ ಮತ್ತಿತರರು
ಕೆ.ಪಿ. ನಂಜುಂಡಿ, ಡಿಕೆ ಶಿವಕುಮಾರ್ ಮತ್ತಿತರರು 
ರಾಜಕೀಯ

ಮಾಜಿ MLC ಕೆ.ಪಿ. ನಂಜುಂಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ!

Nagaraja AB

ಬೆಂಗಳೂರು: ವಿಶ್ವಕರ್ಮ ಸಮಾಜದ ಮುಖಂಡ ಕೆ. ಪಿ. ನಂಜುಂಡಿ ಬುಧವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜಿವಾಲ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು.

ನಂಜುಂಡಿ ಅವರು ಮಂಗಳವಾರ ವಿಧಾನಪರಿಷತ್ ಸದಸ್ಯತ್ವಕ್ಕೆ ಸಲ್ಲಿಸಿದ್ದ ರಾಜೀನಾಮೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕರಿಸಿದ್ದರು. ಕಾಂಗ್ರೆಸ್ ಸೇರ್ಪಡೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂಜುಂಡಿ, ಬಿಜೆಪಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಸಾಮರ್ಥ್ಯ ಆಧರಿಸಿ ಜವಾಬ್ದಾರಿ, ಸ್ಥಾನ ಕೊಡಲಿಲಿಲ್ಲ, ಇದರಿಂದ ಬೇಸರಗೊಂಡು ಪರಿಷತ್ತಿನ ಸದಸ್ಯಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.

ವಿಶ್ವಕರ್ಮ ಸೇರಿದಂತೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ರೂ. 1,000 ಕೋಟಿ ಅನುದಾನ ಕೊಡಬೇಕು ಎಂದು ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿದ್ದೆ. ಆದರೆ, ಸ್ಪಂದನೆ ಸಿಗಲಿಲ್ಲ. ಕೆಪಿಸಿಸಿ ಅಧ್ಯಕ್ಷರು ನನ್ನ ಜೊತೆಗೆ ಮಾತನಾಡಿದ ಬಳಿಕ ಬಿಜೆಪಿಯ ಯಾವ ನಾಯಕರು ಸಂಪರ್ಕಿಸಲಿಲ್ಲ ಎಂದು ಅವರು ಹೇಳಿದರು.

SCROLL FOR NEXT