ರಾಜ್ಯದ ಮೊದಲ ಮುಖ್ಯಮಂತ್ರಿ ಕೆಸಿ ರೆಡ್ಡಿ ಅವರ ಮರಿ ಮೊಮ್ಮಗಳು ಸಂಯುಕ್ತಾ ಕೆಸಿ ರೆಡ್ಡಿ 
ರಾಜಕೀಯ

ರಾಜಕೀಯ ಪ್ರವೇಶಕ್ಕೆ ಕೆ.ಸಿ.ರೆಡ್ಡಿ ಮರಿಮೊಮ್ಮಗಳು ಉತ್ಸುಕ!

ಲೋಕಸಭೆ ಚುನಾವಣೆಗೆ ವಿವಿಧ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಈ ನಡುವೆಯೇ ರಾಜಕೀಯ ಹಿನ್ನೆಲೆಯುಳ್ಳ ಇಬ್ಬರು ಯುವತಿಯರು ರಾಜಕೀಯ ಪ್ರವೇಶಿಸಲು ಉತ್ಸುಕರಾಗಿದ್ದಾರೆ.

ಬೆಂಗಳೂರು: ಲೋಕಸಭೆ ಚುನಾವಣೆಗೆ ವಿವಿಧ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಈ ನಡುವೆಯೇ ರಾಜಕೀಯ ಹಿನ್ನೆಲೆಯುಳ್ಳ ಇಬ್ಬರು ಯುವತಿಯರು ರಾಜಕೀಯ ಪ್ರವೇಶಿಸಲು ಉತ್ಸುಕರಾಗಿದ್ದಾರೆ.

ರಾಜ್ಯದ ಮೊದಲ ಮುಖ್ಯಮಂತ್ರಿ ಕೆಸಿ ರೆಡ್ಡಿ ಅವರ ಮರಿ ಮೊಮ್ಮಗಳು ಸಂಯುಕ್ತಾ ಕೆಸಿ ರೆಡ್ಡಿ (20) ಕಳೆದ ಶುಕ್ರವಾರ ತಮ್ಮ ಮತ ಹಕ್ಕು ಚಲಾಯಿಸಲು ಪುಣೆಯಿಂದ ಬೆಂಗಳೂರಿಗೆ ಭೇಟಿ ನೀಡಿದ್ದರು. ಸಂಯುಕ್ತ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಅರಮನೆ ನಗರದಲ್ಲಿ ಪ್ರಥಮ ಬಾರಿಗೆ ಮತ ಚಲಾಯಿಸಿದರು.

ಮತಹಕ್ಕು ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರವೇಶಿಸಲು ಇಂಗಿತ ವ್ಯಕ್ತಪಡಿಸಿದರು.

ರಾಜಕೀಯಕ್ಕೆ ಶಿಕ್ಷಣವು ಪ್ರಸ್ತುತವಲ್ಲ ಎಂಬುದು ನನ್ನ ಭಾವನೆ. ನಾನು ಉತ್ತಮ ರಾಜಕೀಯ ಹಿನ್ನೆಲೆಯುಳ್ಳವಳು. ರಾಜಕೀಯ ನೀತಿ ನಿರೂಪಣೆಗೆ ಕೊಡುಗೆ ನೀಡಬಲ್ಲೆ ಎಂದು ಹೇಳಿದರು.

ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಿರುವುದು. ಪುರುಷ ಪ್ರಧಾನ ರಾಜಕೀಯದಲ್ಲಿನ ಅಂತರವನ್ನು ಕಡಿಮೆ ಮಾಡುತ್ತದೆ. ಮಹಿಳೆಯರಿಗೆ ಸಾಕಷ್ಟು ಅವಕಾಶವನ್ನು ನೀಡುತ್ತದೆ. ಪ್ರಜಾಪ್ರಭುತ್ವದ ಮನೋಭಾವ ಮುಂದುವರಿಯಬೇಕು ಎಂಬುದು ನನ್ನ ಸಿದ್ಧಾಂತ. ಜನರಿಗೆ ಕೆಲವು ಸಾಮಾಜಿಕ ಕಲ್ಯಾಣ ಯೋಜನೆಗಳ ಅಗತ್ಯವಿದೆ. ಸಕ್ರಿಯ ರಾಜಕಾರಣದ ಜೊತೆಗೆ ಉತ್ತಮ ಆಡಳಿತ ಮತ್ತು ನೀತಿಗೆ ಕೊಡುಗೆ ನೀಡುವ ಆಸಕ್ತಿಯನ್ನು ಹೊಂದಿದ್ದೇನೆಂದು ಸಂಯುಕ್ತಾ ತಿಳಿಸಿದರು.

ಸಂಯಕ್ತಾ ಅವರು ಸಿಂಬಿಯಾಸಿಸ್ ಇಂಟರ್‌ನ್ಯಾಶನಲ್ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಮಾಡುತ್ತಿದ್ದಾರೆ. ಸಂಯುಕ್ತಾ ಕೆ.ಸಿ.ಶ್ರೀಕರ್ ಮತ್ತು ವಸನಾಥ ಕವಿತಾ ದಂಪತಿಯ ಪುತ್ರಿಯಾಗಿದ್ದು, ಶ್ರೀಕರ್ ಅವರು ಕೆ ಸಿ ಶ್ರೀನಿವಾಸ್ ಅವರ ಪುತ್ರ ಮತ್ತು ಕೆ ಸಿ ರೆಡ್ಡಿ ಅವರ ಮೊಮ್ಮಗರಾಗಿದ್ದಾರೆ.

ಇದರ ಜೊತೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಕೂಡ ರಾಜಕೀಯ ಪ್ರವೇಶಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ.

ಮತದಾನದ ದಿನದಂದು ಮಾತನಾಡಿದ್ದ ಐಶ್ವರ್ಯಾ ಅವರು, ನಾನು ಶಿಕ್ಷಣತಜ್ಞೆಯಾಗಿದ್ದು, ಈ ಕೆಲಸ ಮಾಡುವುದರಿಂದ ನನಗೆ ತುಂಬಾ ಸಂತೋಷವಾಗಿದೆ. ಭಾರತವನ್ನು ಹೆಮ್ಮೆ ಪಡುವಂತೆ ಮಾಡಲು ಪ್ರತಿಯೊಬ್ಬರೂ ವಿಭಿನ್ನ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ನಾನು ಇಂದು ಶಿಕ್ಷಣದ ಅಗತ್ಯವಿರುವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಶಿಕ್ಷಣವನ್ನು ನೀಡುವುದು ಬಹಳ ಮುಖ್ಯ ಏಕೆಂದರೆ ವಿದ್ಯಾವಂತರು ನಾಳೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ ಮತ್ತು ಅದು ದೇಶಕ್ಕೆ ಬದಲಾವಣೆಯನ್ನು ತರುತ್ತದೆ' ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

GST 2.0: ಶಾಂಪುವಿನಿಂದ ಸಣ್ಣ ಕಾರುಗಳವರೆಗೆ, ಯಾವುದು ಅಗ್ಗ ಮತ್ತು ದುಬಾರಿ?

ಉತ್ತರ ಭಾರತದ ಹಲವೆಡೆ ಭಾರಿ ಪ್ರವಾಹ, ಭೂ ಕುಸಿತಕ್ಕೆ ಇದೇ ಕಾರಣ! ಕೇಂದ್ರ, ರಾಜ್ಯಗಳಿಂದ ಉತ್ತರ ಬಯಸಿದ ಸುಪ್ರೀಂಕೋರ್ಟ್!

56th GST Council: ಇನ್ನು ಶೇ.5 ಮತ್ತು ಶೇ.18 ಎರಡು ಹಂತದ ತೆರಿಗೆ, ಸೆ.22ರಂದು ಜಾರಿ

GST 2.0: ಯಾವುದಕ್ಕೆ ತೆರಿಗೆ, ಯಾವುದಕ್ಕೆ ವಿನಾಯಿತಿ ಇಲ್ಲಿದೆ ಮಾಹಿತಿ...

ಮುಖ್ಯಮಂತ್ರಿ ಹುದ್ದೆಯಿಂದ ಫಡ್ನವೀಸ್ ಗೆ ಕೊಕ್; ರಾಷ್ಟ್ರ ರಾಜಕಾರಣಕ್ಕೆ ಮಹಾರಾಷ್ಟ್ರ ಸಿಎಂ?; ಬಿಜೆಪಿ ರಾಷ್ಟ್ರಾಧ್ಯಕ್ಷ ರೇಸ್ ನಲ್ಲಿ ರೂಪಾಲಾ!

SCROLL FOR NEXT