ಬೆಂಗಳೂರು: ಮುಡಾ ಅಕ್ರಮ, ಮಹರ್ಷಿ ವಾಲ್ಮೀಕಿ ನಿಗಮ ಹಗರಣ ಗದ್ದಲಕ್ಕೆ ಸಂಬಂಧಪಟ್ಟಂತೆ ಪ್ರತಿಪಕ್ಷಗಳಾದ ಬಿಜೆಪಿ-ಕಾಂಗ್ರೆಸ್ ಮೈಸೂರು ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದು, ಅದಕ್ಕೆ ಟಕ್ಕರ್ ನೀಡಲು ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮವನ್ನು ನಡೆಸುವುದರ ಮಧ್ಯೆ ಕಾಂಗ್ರೆಸ್ ಪಕ್ಷದೊಳಗೆ ಮಹತ್ವದ ಬೆಳವಣಿಗೆಯಾಗುತ್ತಿದೆಯೇ ಎಂಬ ಸಂದೇಹ ಉಂಟಾಗಿದೆ.
ಈ ಸಂಶಯಕ್ಕೆ ಕಾರಣ ಇಂದು ಬೆಂಗಳೂರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳಾದ ರಂದೀಪ್ ಸಿಂಗ್ ಸುರ್ಜೆವಾಲಾ ಮತ್ತು ಕೆ ಸಿ ವೇಣುಗೋಪಾಲ್ ಆಗಮಿಸಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಣದೀಪ್ ಸುರ್ಜೇವಾಲ ಅವರನ್ನು ಸ್ವಾಗತಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಅವರು ಸ್ವಾಗತಿಸಿದ್ದಾರೆ.
ಇವರಿಬ್ಬರ ಭೇಟಿ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಡಾ ಜಿ ಪರಮೇಶ್ವರ್, ಉಸ್ತುವಾರಿಗಳ ಆಗಮನದ ಅಜೆಂಡಾ ಏನೆಂದು ಗೊತ್ತಿಲ್ಲ. ಎಲ್ಲ ಸಚಿವರನ್ನು ಸಭೆಗೆ ಕರೆದಿದ್ದಾರೆ. ರಾಜ್ಯಪಾಲರು ಸಿಎಂಗೆ ನೀಡಿದ್ದ ಶೋಕಾಸ್ ನೊಟೀಸ್ ನ್ನು ಡಿಸಿಎಂ ನೇತೃತ್ವದಲ್ಲಿ ಹಿಂಪಡೆಯಿರಿ ಎಂದು ಮನವಿ ಮಾಡಲಾಗಿತ್ತು. ಈ ಬೆಳವಣಿಗೆಯ ಬಗ್ಗೆ ಚರ್ಚೆ ಮಾಡುವುದಕ್ಕೆ ಬರುತ್ತಿರಬಹುದು. ಮುಂದೆ ಯಾವ ಕಾರ್ಯಕ್ರಮ ರೂಪಿಸಬಹುದು ಎಂದು ಚರ್ಚಿಸಬಹುದು. ಇಲ್ಲ ಮಧುಸೂದನ್ ಮಿಸ್ತ್ರಿ ಅವರ ವರದಿಯ ಅಂಶವೂ ಇರಬಹುದು. ಸಚಿವರ ಖಾತೆ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಹೈಕಮಾಂಡ್ ಮಾಡುತ್ತದೆ ಎಂದು ಹೇಳಿದರು.