ಶಿವಮೊಗ್ಗದಲ್ಲಿ ಕೆ ಎಸ್ ಈಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ 
ರಾಜಕೀಯ

'ರಾಹುಲ್ ಗಾಂಧಿ ನೀವ್ ಯಾವ ಜಾತಿ, ಮಿಶ್ರತಳಿ, ಬೆರಕೆನಾ?': ಈಶ್ವರಪ್ಪ ಪ್ರಶ್ನೆ

ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ಜಾತಿ ಬಗ್ಗೆ ಕೆಣಕಿದ್ದರು. ಇದಕ್ಕೆ ತಿರುಗೇಟು ಎಂಬಂತೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿದ್ದಾರೆ. 

ಶಿವಮೊಗ್ಗ: ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ಜಾತಿ ಬಗ್ಗೆ ಕೆಣಕಿದ್ದರು. ಇದಕ್ಕೆ ತಿರುಗೇಟು ಎಂಬಂತೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿದ್ದಾರೆ. 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿಂದುಳಿದ ವರ್ಗಕ್ಕೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಹಿಂದುಳಿದ ಮೊರ್ಚಾದಿಂದ ಶಿವಮೊಗ್ಗ ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಹುಲ್ ಗಾಂಧಿ ಪ್ರತಿಕೃತಿ ದಹಿಸಿ, ರಾಹುಲ್ ಗಾಂಧಿ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಲಾಯಿತು. 

ಪ್ರತಿಭಟನೆಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ನರೇಂದ್ರ ಮೋದಿಯವರ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಾರೆ. ರಾಹುಲ್ ಗಾಂಧಿಗೆ ಎಷ್ಟು ಜ್ಞಾನವಿದೆ ಎನ್ನುವುದು ಪರೀಕ್ಷೆ ಮಾಡಬೇಕಿದೆ. ಕಾಂಗ್ರೆಸ್ ನಾಯಕರೇ ರಾಹುಲ್ ಗಾಂಧಿಯವರಿಗೆ ಒಂದು ಕ್ಲಾಸ್ ತಗೊಳಿ ಎಂದರು.

ಇಡೀ ಪ್ರಪಂಚದ ನಾಯಕ ನರೇಂದ್ರ ಮೋದಿ. ದೇಶದ ಜನ ಪ್ರಧಾನಿಗಳ ಜಾತಿ ನೋಡಿಲ್ಲ. ರಾಹುಲ್ ಗಾಂಧಿ ನೀವ್ ಯಾವ ಜಾತಿ. ಮಿಶ್ರತಳಿ, ಬೆರಕೆನಾ? ಇದನ್ನು ನಾನು ಹೇಳುತ್ತಿಲ್ಲ ಸಾರ್ವಜನಿಕರು ಹೇಳುತ್ತಿದ್ದಾರೆ. ನಿಮ್ಮ ಜಾತಿ ಯಾವುದು ಎಂದು ದೇಶದ ಜನಕ್ಕೆ ನೀವು ಹೇಳಬೇಕು. ನಿಮ್ಮಜ್ಜಿ ಇಂದಿರಾಗಾಂಧಿ, ನಿಮ್ಮಜ್ಜ ಪಿರೋಜ್ ಖಾನ್ ಹಾಗಾದರೇ ನಿಮ್ಮ ಜಾತಿ ಯಾವುದು ರಾಹುಲ್ ಗಾಂಧಿಯವರೇ ಎಂದು ಕಿಡಿಕಾರಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ಸತತ 4ನೇ ಬಾರಿ CNG ದರ ಏರಿಕೆ: ಕೆಜಿಗೆ 2 ರೂ. ಹೆಚ್ಚಳ, ವಾಹನ ಸವಾರರಿಗೆ ಶಾಕ್‌

ಗೃಹಲಕ್ಷ್ಮಿ ಯೋಜನೆಯಲ್ಲಿ 100 ಕೋಟಿ ರೂ.ದುರ್ಬಳಕೆ: ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಚಿಂತನೆ..!

ವಿಜಯ್ ಸಿಎಂ ಆಗುತ್ತಿದ್ದಂತೆಯೇ ಆಂಧ್ರದಲ್ಲಿ ಗಂಭೀರವಾದ DCM ಪವನ್ ಕಲ್ಯಾಣ್ ! JSP ಕಾರ್ಯಕರ್ತರಿಗೆ ಖಡಕ್ ಸೂಚನೆ

Ebola ಭೀತಿ: ಏರ್ ಲೈನ್ ಗಳಿಗೆ ಡಿಜಿಸಿಎ SOP ಬಿಡುಗಡೆ

SCROLL FOR NEXT