ಡಿಕೆ.ಶಿವಕುಮಾರ್ 
ರಾಜಕೀಯ

ರಾಮರಾಜ್ಯದ ಕನಸು ನಮ್ಮ ಸರ್ಕಾರದ ಗ್ಯಾರಂಟಿಗಳಿಂದ ನನಸು: ಡಿಕೆ.ಶಿವಕುಮಾರ್

ರಾಮರಾಜ್ಯದ ಕನಸು ಗ್ಯಾರಂಟಿ ಯೋಜನೆಗಳಿಂದ ನನಸಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ.

ಬೆಂಗಳೂರು: ರಾಮರಾಜ್ಯದ ಕನಸು ಗ್ಯಾರಂಟಿ ಯೋಜನೆಗಳಿಂದ ನನಸಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ.

ಶತಮಾನಗಳ ಕನಸು ಇಂದು ನನಸಾಗುತ್ತಿದ್ದು, ಅಯೋಧ್ಯೆ ತುಂಬಾ ಸಂಭ್ರಮ ಮನೆ ಮಾಡಿದೆ. ರಾಮಮಂದಿರ ಉದ್ಘಾಟನೆ ಹಿನ್ನೆಲೆ ಅಯೋಧ್ಯೆಯ ಎಲ್ಲ ಬೀದಿ-ಬೀದಿಗಳು ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದು, ಅಯೋಧ್ಯೆ ಮಧುವಣಗಿತ್ತಿಯಂತೆ ಸಿದ್ಧಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಶುಭ ಹಾರೈಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಮರಾಜ್ಯದ ನಿರ್ಮಾಣ, ನಮ್ಮ ಕನಸು. ಅದನ್ನು ನನಸು ಮಾಡುವ ಉದ್ದೇಶದಿಂದ ಜಾರಿಗೊಳಿಸಿದ ಐದು ಗ್ಯಾರಂಟಿಗಳು ಇಂದು ಯಶಸ್ವಿಯಾಗಿವೆ. ರಾಮನ ಆದರ್ಶ, ಹನುಮನ ನಿಷ್ಠೆ ಇದ್ದರೆ ಅದೇ ಅರ್ಥಪೂರ್ಣ ಬದುಕು. ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಶುಭ ಹಾರೈಕೆಗಳು ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!