ಸಿದ್ದರಾಮಯ್ಯ 
ರಾಜಕೀಯ

ಲೋಕ ಸಮರ: ಹಳೇ ಮೈಸೂರಿಗೆ ಲಗ್ಗೆ ಇಡಲು ಬಿಜೆಪಿಗೆ 'ಕೆರಗೋಡು' ರಹದಾರಿ; ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ 'ಇತ್ತ ಪುಲಿ ಅತ್ತ ದರಿ'!

'ಕಾಂಗ್ರೆಸ್ ಪಾಲಿಗೆ ಇದು ಕಷ್ಟದ ಕಾಲವಾಗಿದೆ,  ಮಾತನಾಡಿದರೂ ಕೆಟ್ಟದು, ಮಾತನಾಡದಿದ್ದರೂ ಕೆಟ್ಟದು ಎನ್ನುವಂತಾಗಿದೆ. ಆದರೆ ರಾಷ್ಟ್ರದ ಹಿತದೃಷ್ಟಿಯಿಂದ ಅವರು ಮಾತನಾಡಬೇಕಾಗಿದೆ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಮೈಸೂರು: ಲೋಕಸಭಾ ಚುನಾವನೆಗೂ ಮುನ್ನ ಮಂಡ್ಯದ ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಮೂರೂ ಪಕ್ಷಗಳು ಭಾರಿ ಕಸರತ್ತು ಮಾಡುತ್ತಿವೆ.  ಇದಕ್ಕೆ ಪೂರಕವೆಂಬಂತೆ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದ ಆರಂಭವಾಗಿದೆ.

ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವುಗೊಳಿಸಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ನಡೆುತ್ತಿರುವ ವಿದ್ಯಮಾನಗಳನ್ನು ಗಮನಸಿದರೇ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ಜಂಟಿ ವಿರೋಧ ಎದುರಿಸಲು ಕಾಂಗ್ರೆಸ್‌ನಲ್ಲಿ ಪರಿಹಾರ ಮತ್ತು ಇದಕ್ಕೆ ಸೂಕ್ತ ರಾಜಕೀಯ ಪ್ರತ್ಯುತ್ತರ ನೀಡಲು ಶಕ್ತವಾಗಿಲ್ಲವೇ ಎಂಬ ಪ್ರಶ್ನೆ ಮೂಡುತ್ತಿವೆ.

ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಬಲೆಗೆ ಬಿದ್ದಿದ್ದಾರೆಯೇ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಕಳೆದ ಮೂರು ದಶಕಗಳಿಂದ ಸೋಲು ಕಂಡಿದ್ದ ಕೇಸರಿ ಪಕ್ಷಕ್ಕೆ ಹಳೇ ಮೈಸೂರು ಭಾಗದಲ್ಲಿ ಕೆರಗೋಡು ಪ್ರಕರಣದ ಮೂಲಕ ಬಿಜೆಪಿಗೆ ಗೆಲುವು ಸಿಗಲಿಗದೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿದ್ದರಾಮಯ್ಯ ಸರ್ಕಾರ ತನ್ನ ಮೊದಲ ಅಧಿಕಾರಾವಧಿಯಲ್ಲಿ ಟಿಪ್ಪು ಜಯಂತಿ ಆಚರಿಸಿದಾಗ ಬಿಜೆಪಿ ಅದರ ವಿರುದ್ಧ ತಿರುಗಿ ಬಿದ್ದಿತು. ಕೊಡಗಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಒಬ್ಬ ವ್ಯಕ್ತಿಯೊಬ್ಬನನ್ನು ಕೊಲ್ಲಲಾಯಿತು. ಆ ಸಂದರ್ಭ ಬಿಜೆಪಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿತು, ಈಗ ಕೆರಗೋಡು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡುವ ಮೂಲಕ ಬಿಜೆಪಿಗೆ  ಕಾಂಗ್ರೆಸ್ ಮತ್ತೊಂದು ಅವಕಾಶ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರಿನ ಶಾಸಕರಾಗಿರುವ ಸ್ಪೀಕರ್ ಯು.ಟಿ.ಖಾದರ್ ಮೂರು ಬಾರಿ ಬಲಪಂಥೀಯ ಕಾರ್ಯಕರ್ತರಿಂದ ತಮ್ಮ ವಿರುದ್ಧ ಪ್ರತಿಭಟನೆಗಳನ್ನು ಎದುರಿಸಿದ್ದರು.  ಆ ವೇಳೆ ಪ್ರತಿಭಟನಾಕಾರರು ಬಂದಾಗ ಅವರು ಲಾಠಿಚಾರ್ಜ್ ಮಾಡಿಸಲಿಲ್ಲ ಅಥವಾ  ಅವರನ್ನು ಬಂಧಿಸಿಲಿಲ್ಲ, ಆ ಸಮಯದಲ್ಲಿ ಅವರು ತುಂಬಾ ಸೂಕ್ಷ್ಮವಾಗಿ ಪ್ರಕರಣವನ್ನು ಹ್ಯಾಂಡಲ್ ಮಾಡಿದರು ಎಂದು ಮೂಲಗಳು ತಿಳಿಸಿವೆ.

ತಮ್ಮ ವಿರುದ್ಧ ಪ್ರತಿಭಟನೆ ಮಾಡಲು ಬಂದವರಿಗೆ ಒಂದು ಕಪ್ ಚಹಾ ಕೊಟ್ಟು ಕಳುಹಿಸಿದರು.  ಬಲ ಪಂಥೀಯ ಸಂಘಟನೆಗಳ ವಿರುದ್ಧ ಖಾದರ್ ಅವರಿಗೆ ಬಹಳ ಅಸಮಾಧಾನವಿದ್ದರೂ ಖಾದರ್ ಅವರ್ನು ಘನತೆಯಿಂದ ನಡೆಸಿಕೊಂಡರು.

2023 ರ  ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಜಾಬ್ ಮತ್ತು ಹಲಾಲ್ ಸಂಬಂಧ ಹಲವು ಸಮಸ್ಯೆಗಳು ತಲೆದೋರಿದವು.  ಹಿಜಾಬ್  ನಿಷೇದಿಸುವಂತೆ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದವು.  ಆದರೆ ಹಿಂದೂ ಸಂಘಟನೆಗಳ ಘೋಷಣೆಗಳಿಗೆ ಪ್ರತಿಯಾಗಿ ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್  ಅಲ್ಲಾ ಓ ಅಕ್ಬರ್ ಕೂಗಿದ್ದಳು, ಅದಾದ ನಂತರ ನಡೆದ ಘಟನೆಗಳು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಳ್ಳಳು ಸಹಾಯ ಮಾಡಿದವು.

ಈಗ ಜೆಡಿಎಸ್ ಕಾರ್ಯಕರ್ತರು ಕೇಸರಿ ಶಾಲು ಹಾಕಿಕೊಂಡಿರುವುದರಿಂದ ಅವಕಾಶಗಳು ಪ್ರಕಾಶಮಾನವಾಗಿ ಕಾಣುತ್ತಿವೆ ಎನ್ನುತ್ತಾರೆ ವಿಶ್ಲೇಷಕರು. ಈ ಧಾರ್ಮಿಕ ಭಾವನಾತ್ಮಕ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಬದಲು ಪ್ರಧಾನಿ ಮೋದಿಯವರ ಅಭಿವೃದ್ಧಿ ನಿರೂಪಣೆಯ ಭಾಷೆಯನ್ನು ರಾಜ್ಯ ಬಿಜೆಪಿ ಕಲಿಯಬೇಕಾಗಿದೆ ಎಂದು ಶಿಕ್ಷಣ ಮತ್ತು ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಕಿರಣ್ ಗಾಜನೂರು ಹೇಳಿದರು.

'ಕಾಂಗ್ರೆಸ್ ಪಾಲಿಗೆ ಇದು ಕಷ್ಟದ ಕಾಲವಾಗಿದೆ,  ಮಾತನಾಡಿದರೂ ಕೆಟ್ಟದು, ಮಾತನಾಡದಿದ್ದರೂ ಕೆಟ್ಟದು ಎನ್ನುವಂತಾಗಿದೆ. ಆದರೆ ರಾಷ್ಟ್ರದ ಹಿತದೃಷ್ಟಿಯಿಂದ ಅವರು ಮಾತನಾಡಬೇಕಾಗಿದೆ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಲಿಂಗಾಯತರು ಹೆಚ್ಚಾಗಿ ಬೆಂಬಲಿಸಿರುವ ಬಿಜೆಪಿ ಮತ್ತು ಒಕ್ಕಲಿಗರ ಬೆಂಬಲಿತ ಜೆಡಿಎಸ್, ರಾಜ್ಯದ ಎರಡು ಪ್ರಬಲ ಸಮುದಾಯಗಳು ಒಟ್ಟಿಗೆ ಸೇರಿದಾಗ, ಉಳಿದವರೆಲ್ಲರೂ ಕೈಜೋಡಿಸಿದರೆ  ಕಾಂಗ್ರೆಸ್ ಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂಬುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT