ಸಿ.ಟಿ ರವಿ 
ರಾಜಕೀಯ

ಮನಸ್ಸಿನಲಿ ಬಹಳ ನೋವಿದೆ ರಾಷ್ಟ್ರದ ಹಿತಕ್ಕಾಗಿ ಎಲ್ಲವನ್ನು ಸಹಿಸಿಕೊಂಡಿದ್ದೇನೆ: ಚುನಾವಣೆ ನಂತರ ಹೇಳುತ್ತೇನೆ; ಸಿ.ಟಿ ರವಿ

ಮನಸ್ಸಿನಲ್ಲಿ ಬಹಳ ನೋವುಗಳಿವೆ. ರಾಷ್ಟ್ರದ ಹಿತಕ್ಕಾಗಿ ಎಲ್ಲವನ್ನು ನುಂಗಿಕೊಂಡಿದ್ದೇನೆ. ಲೋಕಸಭೆ ಚುನಾವಣೆ ಬಳಿಕ ಎಲ್ಲವನ್ನೂ ಜನರ ಮುಂದಿಡುತ್ತೇನೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.

ಚಿಕ್ಕಮಗಳೂರು: ಮನಸ್ಸಿನಲ್ಲಿ ಬಹಳ ನೋವುಗಳಿವೆ. ರಾಷ್ಟ್ರದ ಹಿತಕ್ಕಾಗಿ ಎಲ್ಲವನ್ನು ನುಂಗಿಕೊಂಡಿದ್ದೇನೆ. ಲೋಕಸಭೆ ಚುನಾವಣೆ ಬಳಿಕ ಎಲ್ಲವನ್ನೂ ಜನರ ಮುಂದಿಡುತ್ತೇನೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಯಾರು ಹೇಗೆ ನಡೆದುಕೊಂಡರು ಎಂದು ಗೊತ್ತಿದೆ. ಹೆಚ್ಚು ದಿನ ಮನಸ್ಸಿನಲ್ಲೇ ಇಟ್ಟು ಕೊಳ್ಳಲಾಗದು ಅವುಗಳನ್ನು ಹೇಳಲೇಬೇಕು.

ವೈಯಕ್ತಿಕ ನೆಲೆಯಲ್ಲಿ ಲೋಕಸಭೆ ಚುನಾವಣೆ ನಂತರ ಮಾಡುತ್ತೇನೆ ಎಂದು ಯಾರ ಹೆಸರನ್ನೂ ಹೇಳದೆ ಸ್ವಪಕ್ಷದವರ ವಿರುದ್ಧ ಸುದ್ದಿಗಾರರ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಸದ್ಯಕ್ಕೆ ರಾಷ್ಟ್ರದ ಹಿತ ಮುಖ್ಯ, ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಆಗಬೇಕು. ಅದಷ್ಟೇ ನಮ್ಮ ಮುಂದಿನ ಗುರಿ. ಸಮಯ ಬಂದಾಗ ಬೇರೆ ವಿಷಯಗಳನ್ನು ಹೇಳುತ್ತೇನೆ ಎಂದರು.

ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡೋದಾದ್ರೂ ಕೇವಲ ಲೋಕಸಭಾ ಚುನಾವಣೆ ನಂತರ. ಈಗೇನಿದ್ರೂ ಪಕ್ಷ ಹಿತ ಮತ್ತು ರಾಷ್ಟ್ರ ಹಿತಕ್ಕಾಗಿ ಬಹಳ ಸಂಗತಿಗಳನ್ನ ನುಂಗಿಕೊಳ್ಳಬೇಕಾಗುತ್ತದೆ. ಈ ವಿಷಯಗಳನ್ನು ಬಹಳ ದಿನ ಹೊಟ್ಟೆಯೊಳಗೆ ಇಟ್ಕೊಳ್ಳೋಕೆ ಆಗಲ್ಲ. ಸಮಯ, ಸಂದರ್ಭ ಬಂದಾಗ ಹೇಳಬೇಕಾಗುತ್ತೆ, ಆಗ ಜನರ ಮುಂದೆ ಹೇಳುವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ