ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಿಇಸಿ ಸಭೆ
ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಿಇಸಿ ಸಭೆ 
ರಾಜಕೀಯ

ಲೋಕಸಭೆ ಚುನಾವಣೆ: 39 ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ, ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್ ಕಣಕ್ಕೆ

Lingaraj Badiger

ನವದೆಹಲಿ: ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಥತೆ ನಡೆಸಿರುವ ಕಾಂಗ್ರೆಸ್ ರಾಜ್ಯದ ಏಳು ಕ್ಷೇತ್ರಗಳ ಅಭ್ಯರ್ಥಿಗಳು ಸೇರಿದಂತೆ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ.

ಇಂದು ಸಂಜೆ ಎಐಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ವಿವಿಧ ರಾಜ್ಯಗಳ 39 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಕರ್ನಾಟಕದ 28 ಕ್ಷೇತ್ರಗಳ ಪೈಕಿ 7 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಶಿವಮೊಗ್ಗದಿಂದ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸಲಾಗಿದೆ.

ಕರ್ನಾಟಕದ 7, ತೆಲಂಗಾಣದ 4, ಛತ್ತೀಸ್​ಗಡದ 6, ಕೇರಳದ 15, ಮೇಘಾಲಯದ 2, ನಾಗಲ್ಯಾಂಡ್, ಸಕ್ಕಿಂ​ ಹಾಗೂ ತ್ರಿಪುರದ ತಲಾ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಘೋಷಿಸಿದೆ. ಈ ಮೂಲಕ ಒಟ್ಟು 39 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡಗಡೆ ಮಾಡಿದೆ.

ಕರ್ನಾಟಕ

1. ತುಮಕೂರು - ಮುದ್ದಹನುಮೇಗೌಡ - ಒಕ್ಕಲಿಗ

2. ಶಿವಮೊಗ್ಗ - ಗೀತಾ ಶಿವರಾಜ್ ಕುಮಾರ್ - ಈಡಿಗ

3. ಹಾಸನ - ಶ್ರೇಯಸ್ ಪಟೇಲ್ - ಒಕ್ಕಲಿಗ

4. ವಿಜಯಪುರ - ರಾಜು ಆಲಗೂರು - ಎಸ್.ಸಿ

5. ಮಂಡ್ಯ - ವೆಂಕಟರಮಣೇಗೌಡ (ಸ್ಟಾರ್ ಚಂದ್ರು) - ಒಕ್ಕಲಿಗ

6. ಬೆಂಗಳೂರು ಗ್ರಾಮಾಂತರ - ಡಿಕೆ ಸುರೇಶ್ - ಒಕ್ಕಲಿಗ

7. ಹಾವೇರಿ - ಆನಂದ್ ಸ್ವಾಮಿ ಗಡ್ಡದೇವರಮಠ

ತಾತ್ಕಾಲಿಕವಾಗಿ ತಡೆ ಹಿಡಿಯಲಾದ ಕರ್ನಾಟಕ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು

1. ಉಡುಪಿ-ಚಿಕ್ಕಮಗಳೂರು - ಜಯಪ್ರಕಾಶ್ ಹೆಗ್ಡೆ - ಬಂಟ್ಸ್

2. ಚಿತ್ರದುರ್ಗ - ಬಿ.ಎನ್ ಚಂದ್ರಪ್ಪ - ಎಸ್.ಸಿ

ಕೇರಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ

ವಯನಾಡ್ (ಕೇರಳ): ರಾಹುಲ್ ಗಾಂಧಿ

ಕಾಸರಗೋಡು (ಕೇರಳ): ರಾಜಮೋಹನ್ ಉಣ್ಣಿತ್ತಾನ್

ಕಣ್ಣೂರು (ಕೇರಳ): ಕೆ ಸುಧಾಕರನ್

ವಡಕರ (ಕೇರಳ): ಶಫಿ ಪರಂಬಿಲ್

ಕೋಝಿಕ್ಕೋಡ್ (ಕೇರಳ): ಎಂಕೆ ರಾಘವನ್

ಪಾಲಕ್ಕಾಡ್ (ಕೇರಳ): ವಿಕೆ ಶ್ರೀಕಂಠನ್

ಅಲತೂರ್(ಎಸ್‌ಸಿ) (ಕೇರಳ): ರೆಮ್ಯಾ ಹರಿದಾಸ್

ತ್ರಿಶೂರ್ (ಕೇರಳ): ಕೆ ಮರಳೀಧರನ್

ಚಾಲಕ್ಕುಡಿ (ಕೇರಳ): ಬೆನ್ನಿ ಬಹನ್ನಾನ್

ಎರ್ನಾಕುಲಂ(ಕೇರಳ): ಹಿಬಿ ಇಡೆನ್

ಇಡುಕ್ಕಿ(ಕೇರಳ): ಡೀನ್ ಕುರಿಯಾಕೋಸ್

ಮಾವೇಲಿಕರ(ಎಸ್‌ಸಿ)(ಕೇರಳ): ಕೋಡಿಕುನ್ನಿಲ್ ಸುರೇಶ್

ಪಟ್ಟಣಂತಿಟ್ಟ(ಕೇರಳ): ಆ್ಯಂಟೋ ಆ್ಯಂಟೋನಿ

ಅತ್ತಿಂಗಲ್(ಕೇರಳ): ಅಡೂರ್ ಪ್ರಕಾಶ್

SCROLL FOR NEXT