ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್ 
ರಾಜಕೀಯ

ವರಿಷ್ಠರು ತೀರ್ಮಾನಿಸಿದರೆ ಲೋಕಸಭೆಗೆ ಸ್ಪರ್ಧಿಸಲು ಸಿದ್ಧ; ಯಾವುದೇ ಕ್ಷೇತ್ರಕ್ಕೆ ಬೇಡಿಕೆಯಿಟ್ಟಿಲ್ಲ: ಜಗದೀಶ್​​ ಶೆಟ್ಟರ್​​

Shilpa D

ಹುಬ್ಬಳ್ಳಿ: ಪಕ್ಷ ಮತ್ತು ವರಿಷ್ಠರು ತೀರ್ಮಾನ ಮಾಡಿದರೆ ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸಲು ತಯಾರಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ತಾವು ಬಿಜೆಪಿಗೆ ಮರು ಸೇರ್ಪಡೆಯಾದ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೇಳಿಲ್ಲ. ಇಂತಹುದ್ದೇ ಕ್ಷೇತ್ರ ಬೇಕೆಂದು ವರಿಷ್ಠರನ್ನು ಒತ್ತಾಯಿಸಿಲ್ಲ. ತಮ್ಮನ್ನು ಹಾವೇರಿ ಅಥವಾ ಬೆಳಗಾವಿಯಿಂದ ಸ್ಪರ್ಧಿಸುವಂತೆ ಕೇಳಲಾಗಿದೆ. ಆದರೆ, ಹುಬ್ಬಳಿ-ಧಾರವಾಡದ ಜನತೆ ತಮ್ಮನ್ನು ಬೆಂಬಲಿಸುತ್ತಿದ್ದಾರೆ. ಈ ಮೊದಲು ಲೋಕಸಭಾ ಚುನಾವಣೆ ಸ್ಪರ್ಧೆಗೆ ಒಂದಲ್ಲಾ ಮೂರು ಸಲ ಅವಕಾಶ ನೀಡಲಾಗಿತ್ತು. ಆದರೆ, ಆಸಕ್ತಿ ಇಲ್ಲದ ಕಾರಣ ಸ್ಪರ್ಧಿಸಿರಲಿಲ್ಲ. ಆದರೆ, ಈ ಬಾರಿ ಜನರ ಒತ್ತಡ ಹೆಚ್ಚಾಗಿದೆ ಎಂದರು.

ಈ ವಿಷಯದಲ್ಲಿ ಪಕ್ಷದ ತೀರ್ಮಾನವೇ ಅಂತಿಮ. ಪಕ್ಷ ಹೇಳಿದರೆ ಮಾತ್ರ ತಾವು ಚುನಾವಣೆಗೆ ಸ್ಪರ್ಧಿಸುವುದಾಗಿ ಜಗದೀಶ್ ಶೆಟ್ಟರ್ ಹೇಳಿದರು. 'ನನಗೆ ಹಾವೇರಿ, ಬೆಳಗಾವಿ ಬೇರೆ ಬೇರೆ ತಾಲೂಕಿನಿಂದ ನಮ್ಮಲ್ಲಿಗೆ ಬನ್ನಿ ಎಂಬ ಬೆಂಬಲದ ಕರೆ ಬರುತ್ತಿದೆ. ಹಾಗೆಯೇ ಧಾರವಾಡದಲ್ಲಿಯೇ ನಾನು ಇರಬೇಕೆಂಬುದು ಇಲ್ಲಿನ ನಾಗರಿಕರು, ನಮ್ಮ ಪಕ್ಷದ ಕಾರ್ಯಕರ್ತರ ಒತ್ತಡವೂ ಆಗಿದೆ. ಹೀಗಾಗಿ ಇದೆಲ್ಲವನ್ನೂ ನಾನು ಪಕ್ಷದ ವರಿಷ್ಠರಿಗೆ ಬಿಡುತ್ತೇನೆ. ಎಲ್ಲಿ ಸ್ಪರ್ಧೆ ಮಾಡಬೇಕು, ಬೇಡ ಎನ್ನುವುದು ಅವರಿಗೆ ಬಿಟ್ಟಿದ್ದು ಎಂದರು.

ರಾಜಕೀಯದಲ್ಲಿ ಹೇಗೆಲ್ಲಾ ಬದಲಾವಣೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಿಂದೆ 2-3 ಸಲ ಲೋಕಸಭೆಗೆ ಹೋಗಲು ಅವಕಾಶ ಬಂದಾಗ ನಾನು ಹೋಗಲಿಲ್ಲ. 1991ರಲ್ಲಿ ನಾನು ರಾಜಕೀಯಕ್ಕೆ ಪ್ರವೇಶಿಸಿ 3 ವರ್ಷ ಕಳೆದ ಸಮಯದಲ್ಲೇ ನನಗೆ ಟಿಕೆಟ್​ ಕೊಟ್ಟಿದ್ದರು. ಆಗ ಹಿರಿಯ ಮುಖಂಡ ಬಂದರೂ ಹೇಳಿ ಅವರಿಗೆ ಟಿಕೆಟ್​ ನೀಡಿದ್ದರು.

ಕೂಡಲೇ ನಾನು ಅದರಿಂದ ಹಿಂದೆ ಸರಿದೆ. ಅದಾಗಿ 2004ರಲ್ಲಿ ಚುನಾವಣೆಗೆ ಅವಕಾಶ ಬಂದಿತ್ತು. ಆದರೆ ಆಗ ನಾನು ಆಸಕ್ತಿ ತೋರಿಸಿರಲಿಲ್ಲ. ಇದೇ ರೀತಿ ಬೇರೆ ಸಂದರ್ಭದಲ್ಲಿಯೂ ಅವಕಾಶಗಳು ಬಂದಿದ್ದವು. ಆಗ ನಾನು ಲೋಕಸಭೆಗೆ ಹೋಗುವ ನಿರ್ಧಾರ ಮಾಡಿರಲಿಲ್ಲ. ಈಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಜನರ ಒತ್ತಡವಿದೆ. ಏನು ಆಗುತ್ತದೆಂದು ಮುಂದೆ ನೋಡೋಣ ಎಂದು ಹೇಳಿದರು.

SCROLL FOR NEXT