ಬೊಮ್ಮಾಯಿ
ಬೊಮ್ಮಾಯಿ  
ರಾಜಕೀಯ

ಮೋದಿ ಮತ್ತೆ ಪ್ರಧಾನಿಯಾದ 3 ತಿಂಗಳಲ್ಲಿ ಕಾಂಗ್ರೆಸ್ ವಿಭಜನೆ: ಮಾಜಿ ಸಿಎಂ ಬೊಮ್ಮಾಯಿ ಭವಿಷ್ಯ

Manjula VN

ಗಜೇಂದ್ರಗಡ: ಮೋದಿಯವರು ಮತ್ತೆ ಪ್ರಧಾನಿಯಾದ 3 ತಿಂಗಳ ಬಳಿಕ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ವಿಭಜನೆಯಾಗಲಿದೆ. ಪರಿಣಾಮ ಸಂಸದನಾಗಿ ನಾನು ಮತ್ತೆ ರೋಣಕ್ಕೆ ಬರುವುದು ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಎಂದು ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದರು.

ಮಾಜಿ ಶಾಸಕ ಕಳಕಪ್ಪ ಬಂಡಿ ಅವರ ನಿವಾಸದ ಆವರಮದಲ್ಲಿ ಸೋಮವಾರ ರೋಣ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಈಗಿನ ಸರ್ಕಾರ ಪೂರ್ಣಾವಧಿ ಆಡಳಿತ ನಡೆಸುವುದಿಲ್ಲ. ದೇಶದ ಬಳಿಕ ರಾಜ್ಯದಲ್ಲೂ ಪಕ್ಷ ವಿಭಜನಯಾಗಲಿದೆ. ‘ಕಾಂಗ್ರೆಸ್‌ನಲ್ಲಿ ಟಿಕೆಟ್‌ ಕೇಳುವವರೇ ಇಲ್ಲ. ಅಲ್ಲಿ ಬಂಡಾಯದ ಪ್ರಶ್ನೆಯೇ ಇಲ್ಲ. ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಕಟ್ಟಲು ಪ್ರಮುಖ ಪಾತ್ರ ವಹಿಸಿರುವ ಕೆ.ಎಸ್‌.ಈಶ್ವರಪ್ಪ ತಮ್ಮ ಪುತ್ರ ಕಾಂತೇಶಗೆ ಟಿಕೆಟ್ ಸಿಗದಿರುವುದಕ್ಕೆ ಬೇಸರಗೊಂಡಿದ್ದಾರೆ. ಪಕ್ಷದ ವರಿಷ್ಠರು ಅವರ ಮನವೊಲಿಸುವರು ಎಂದು ತಿಳಿಸಿದರು.

ಪಕ್ಷದ ಆಂತಕರಿಕ ಸಮೀಕ್ಷೆ ಪರಿಶೀಲಿಸಿ ಹಾವೇರಿ– ಗದಗ ಲೋಕಸಭಾ ಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಕರ್ತವ್ಯದ ಪ್ರಶ್ನೆ. ವರಿಷ್ಠರು ಸೂಚಿಸಿದಾಗ, ಅದನ್ನು ಸಮರ್ಥವಾಗಿ ನಿಭಾಯಿಸಬೇಕು. ನಿಭಾಯಿಸುವೆ ಎಂದರು.

SCROLL FOR NEXT