ಬೂತ್ ಕಾರ್ಯಕರ್ತರ ಸಮಾವೇಶವನ್ನು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮತ್ತಿತರರು ಉದ್ಘಾಟಿಸಿದರು.
ಬೂತ್ ಕಾರ್ಯಕರ್ತರ ಸಮಾವೇಶವನ್ನು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮತ್ತಿತರರು ಉದ್ಘಾಟಿಸಿದರು.  
ರಾಜಕೀಯ

ಏಪ್ರಿಲ್ 12ಕ್ಕೆ ನಾಮಪತ್ರ ಸಲ್ಲಿಕೆ: ಪಕ್ಷೇತರನಾಗಿ ಸ್ಪರ್ಧೆ ಎಂದು ಘೋಷಿಸಿರುವ ಕೆ ಎಸ್ ಈಶ್ವರಪ್ಪ

Sumana Upadhyaya

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಕಣ ರಂಗೇರುತ್ತಿದೆ. ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರು ಬಿಜೆಪಿಯಿಂದ ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ತಾವು ಏಪ್ರಿಲ್ 12 ರಂದು 25 ಸಾವಿರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ.

ಶಿವಮೊಗ್ಗದ ಶುಭಮಂಗಳದಲ್ಲಿ ನಿನ್ನೆ ಬೂತ್‌ ಮಟ್ಟದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಈಶ್ವರಪ್ಪ, ಸ್ವತಂತ್ರವಾಗಿ ಸ್ಪರ್ಧಿಸಲು ಬಿಜೆಪಿ ರಾಷ್ಟ್ರೀಯ ನಾಯಕರಿಂದ ಕರೆ ಬರುತ್ತಿದ್ದು, ಮೊದಲ ದಿನವೇ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೇನೆ. ಅವರ ಈ ನಿರ್ಧಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಭೀತಿ ಹುಟ್ಟಿಸಿದೆ ಎಂದಿದ್ದಾರೆ.

ನನ್ನನ್ನು ಬೆಂಬಲಿಸುತ್ತಿರುವ ಅನೇಕ ಕಾರ್ಯಕರ್ತರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹೆಸರಿನಲ್ಲಿ ಬಲವಂತವಾಗಿ ಮತ್ತು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕೆಲವು ನಾಯಕರು ಹಾಳು ಮಾಡಿದ್ದಾರೆ, ಅದಕ್ಕಾಗಿಯೇ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕೇವಲ 66 ಸ್ಥಾನಗಳನ್ನು ಗಳಿಸಲು ಸಾಧ್ಯವಾಯಿತು ಎಂದು ಆರೋಪಿಸಿದ್ದಾರೆ.

‘ಶೇ.40 ಕಮಿಷನ್ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕರೂ ಸಚಿವ ಸ್ಥಾನ ನಿರಾಕರಿಸಲಾಗಿದೆ ನನ್ನ ಮಗನಿಗೆ ಈ ಬಾರಿ ಸಂಸದ ಟಿಕೆಟ್ ನಿರಾಕರಿಸಲಾಗಿದೆ. ಹಿಂದುಳಿದ ವರ್ಗದ ನಾಯಕರನ್ನು ರಾಜಕೀಯದಲ್ಲಿ ಬೆಳೆಯದಂತೆ ನಿರ್ಬಂಧಿಸಲು ಸಂಚು ರೂಪಿಸಲಾಗಿದೆ, ಇದು ಈ ಅಡೆತಡೆಗಳ ಹಿಂದೆ ಕಾರಣವಾಗಿದೆ ಎಂದರು.

ಪ್ರಚಾರದ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಬೈಂದೂರಿನಲ್ಲಿ ಅನೇಕ ನಿಷ್ಠಾವಂತ ಕಾರ್ಯಕರ್ತರು ನನ್ನ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಶಿಕಾರಿಪುರದಲ್ಲಿ ಸಭೆ ನಡೆಸಿದ ನನಗೆ ಅಲ್ಲಿಯೂ ಉತ್ತಮ ಬೆಂಬಲ ಸಿಕ್ಕಿದೆ. ನನ್ನ ಮಗನಿಗೆ ದೂರವಾಣಿ ಕರೆ ಬಂದಿದೆ. ನಾನು ನನ್ನ ನಿರ್ಧಾರದಲ್ಲಿ ದೃಢವಾಗಿದ್ದೇನೆ. ನಾನು ಸ್ಪರ್ಧಿಸಿ ಗೆಲ್ಲುವುದು ಖಚಿತ ಎಂದರು. ಈಶ್ವರಪ್ಪ ಅವರ ಪುತ್ರ ಕೆ ಇ ಕಾಂತೇಶ್ ಸಭೆಯಲ್ಲಿ ಉಪಸ್ಥಿತರಿದ್ದರು.

SCROLL FOR NEXT