ಶರಣಬಸಪ್ಪ ದರ್ಶನಾಪುರ 
ರಾಜಕೀಯ

ಪ್ರಜ್ವಲ್ ರೇವಣ್ಣ ಡಿಕೆ ಶಿವಕುಮಾರ್ ಕೇಳಿ ಸೆಕ್ಸ್ ವಿಡಿಯೋ ರೆಕಾರ್ಡ್​​ ಮಾಡಿಕೊಂಡ್ರಾ?: ಸಚಿವ ದರ್ಶನಾಪುರ

ನೇಹಾ ಹಿರೇಮಠ ಕೊಲೆಯಾದಾಗ ಬಿಜೆಪಿ ಮತ್ತು ಜೆಡಿಎಸ್​ನವರು ಆರೋಪಿಯನ್ನು ಎನ್ಕೌಂಟರ್ ಮಾಡಬೇಕು ಎಂದರು. ಈಗ ಬಿಜೆಪಿ, ಜೆಡಿಎಸ್​ನವರು ಎಲ್ಲಿದ್ದಾರೆ? ಪ್ರಜ್ವಲ್​ನನ್ನು ಎನ್ಕೌಂಟರ್ ಮಾಡಿ ಅಂತ ಯಾಕೆ ಹೇಳುತ್ತಿಲ್ಲ?

ಯಾದಗಿರಿ: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್​ ರೇವಣ್ಣ ಅವರು ಡಿಕೆ ಶಿವಕುಮಾರ್ ಅವರ ಮಾತು ಕೇಳಿ ಸೆಕ್ಸ್​​ ವಿಡಿಯೋ ಮಾಡಿಕೊಂಡ್ರಾ? ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಅವರು ಬುಧವಾರ ಜೆಡಿಎಸ್ - ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರ ಜತೆ ರಾಸಲೀಲೆ ನಡೆಸಿದ ವಿಡಿಯೋ ಇದ್ದ ಪೆನ್​ಡ್ರೈವ್​ ಬಿಡುಗಡೆಯ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು, “ಪ್ರಜ್ವಲ್ ರೇವಣ್ಣ ಅವರು ಡಿಕೆ ಶಿವಕುಮಾರ್ ಮಾತು ಕೇಳಿ ಸೆಕ್ಸ್​​ ವಿಡಿಯೋ ಮಾಡಿಕೊಂಡ್ರಾ? ಅಥವಾ ಡಿಕೆ ಶಿವಕುಮಾರ್ ಏನು ಎಲ್ಲ ಹೆಣ್ಣು ಮಕ್ಕಳ ಸೆಕ್ಸ್ ವಿಡಿಯೋ ಮಾಡಿಕೊ ಅಂತ ಹೇಳಿದ್ರಾ? ಅಥವಾ ಡಿಕೆ ಶಿವಕುಮಾರ್ ಅವರೇ ವಿಡಿಯೋ ಮಾಡಿದ್ರಾ?” ಎಂದು ಪ್ರಶ್ನಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನಾಪುರ ಅವರು, ಪ್ರಜ್ವಲ್ ರೇವಣ್ಣ ವಿಡಿಯೋ ರೆಕಾರ್ಡ್​​ ಮಾಡಿಕೊಂಡು ಈಗ ಬೇರೆಯವರ ಮೇಲೆ ಹಾಕುತ್ತಿದ್ದಾರೆ. ಈ ವಿಡಿಯೋ ಬಿಡುಗಡೆ ಮಾಡಿದವರು ಯಾರು? ಎಷ್ಟು ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ದಾರೆ? ನೇಹಾ ಹಿರೇಮಠ ಕೊಲೆಯಾದಾಗ ಬಿಜೆಪಿ ಮತ್ತು ಜೆಡಿಎಸ್​ನವರು ಆರೋಪಿಯನ್ನು ಎನ್ಕೌಂಟರ್ ಮಾಡಬೇಕು ಎಂದರು. ಈಗ ಬಿಜೆಪಿ, ಜೆಡಿಎಸ್​ನವರು ಎಲ್ಲಿದ್ದಾರೆ? ಪ್ರಜ್ವಲ್​ನನ್ನು ಎನ್ಕೌಂಟರ್ ಮಾಡಿ ಅಂತ ಯಾಕೆ ಹೇಳುತ್ತಿಲ್ಲ? ಸಾಮಾನ್ಯ ಜನರಿಗೆ ಒಂದು ನ್ಯಾಯ, ದೊಡ್ಡವರಿಗೆ ಒಂದು ನ್ಯಾಯನಾ? ಎಂದು ಪ್ರಶ್ನಿಸಿದರು.

ಇದೇ ವೇಳೆ ಲೋಕಸಭೆ ಚುನಾವಣೆ ಬಳಿಕ ಕರ್ನಾಟಕ ಸರ್ಕಾರ ಪಥನವಾಗಲಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ಆತ ಗಂಡಸು ಇದ್ದರೇ ರಾಜ್ಯದಲ್ಲಿ ಸರ್ಕಾರ ರಚಿಸಲಿ. ಅವರು ಏನಾದರೂ ಗಂಡಸು ಇದ್ದರೆ ರಾಜ್ಯಕ್ಕೆ ಬಂದು, ನಾಲ್ಕು ಜನ ಶಾಸಕರನ್ನು ಕರೆದುಕೊಂಡು ಹೋಗಲಿ. ಮಹಾರಾಷ್ಟ್ರದಲ್ಲಿ ಅಲ್ಲಿ ಏನು ಕಡಿಯಲು ಆಗುತ್ತಿಲ್ಲ. ಆತ ನಮ್ಮ ರಾಜ್ಯದಲ್ಲಿ ಏನು ಕಡಿತಾನ. ಮಹಾರಾಷ್ಟ್ರದಲ್ಲಿ ಮೊದಲು ತಮ್ಮ ಸರ್ಕಾರ ಉಳಿಸಿಕೊಳ್ಳಲಿ. ಅವರ ಸರ್ಕಾರ ಅಲಗಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT