ಸಚಿವ ಸತೀಶ್ ಜಾರಕಿಹೊಳಿ 
ರಾಜಕೀಯ

KPCC ಅಧ್ಯಕ್ಷ ರೇಸ್‌ನಲ್ಲಿ ನಾನಿಲ್ಲ; ಸಾಮರ್ಥ್ಯ ಇರುವವರಿಗೆ, ಅನುಭವಸ್ಥರಿಗೆ ಸಾರಥ್ಯ ಸಿಗಲಿ: ಸತೀಶ್ ಜಾರಕಿಹೊಳಿ

ಕೆಪಿಸಿಸಿ ಅಧ್ಯಕ್ಷ ಹುದ್ದೆಯ ರೇಸ್ ನಲ್ಲಿ ನಾನಿಲ್ಲ, ಮುಂದಿನ 4 ವರ್ಷಗಳ ಕಾಲ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ರಾಜ್ಯ ಸುತ್ತಿದ ಅನುಭವಸ್ಥರಿಗೆ ರಾಜ್ಯ ಕಾಂಗ್ರೆಸ್‌ ಸಾರಥ್ಯ ಸಿಗಲಿ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹುದ್ದೆಯ ರೇಸ್ ನಲ್ಲಿ ನಾನಿಲ್ಲ, ಮುಂದಿನ 4 ವರ್ಷಗಳ ಕಾಲ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ರಾಜ್ಯ ಸುತ್ತಿದ ಅನುಭವಸ್ಥರಿಗೆ ರಾಜ್ಯ ಕಾಂಗ್ರೆಸ್‌ ಸಾರಥ್ಯ ಸಿಗಲಿ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತೆ. ಅಧ್ಯಕ್ಷ ಸ್ಥಾನದ ಬದಲಾವಣೆ ಆಗಬೇಕೆಂದರೆ ಮೊದಲು ಆ ಸ್ಥಾನ ಖಾಲಿ ಆಗಬೇಕಲ್ವಾ? ಬದಲಾವಣೆ ಬದಲು ಅಧಿಕಾರ ವಿಸ್ತರಣೆಯೂ ಆಗಬಹುದಲ್ವಾ ಎಂದರು.

ಲೋಕಸಭೆ ಚುನಾವಣೆವರೆಗೆ ಡಿ.ಕೆ. ಶಿವಕುಮಾರ್‌ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂಬ ಎಐಸಿಸಿ ಹೈಕಮಾಂಡ್‌ ಘೋಷಣೆ ಅವಧಿ ಮುಗಿದ ಬೆನ್ನಲ್ಲೇ, ಜಾರಕಿಹೊಳಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನಾನಿಲ್ಲ. ಅದು ಪಕ್ಷದ ವರಿಷ್ಠರ ವಿವೇಚನೆಗೆ ಬಿಟ್ಟ ವಿಚಾರ. ಹೊಸ ಅಧ್ಯಕ್ಷರ ನೇಮಕಕ್ಕೆ ರಾಜ್ಯ ಸುತ್ತಿದ್ದ ಹಾಗೂ ಸಮರ್ಥರಿಗೆ ಅವಕಾಶ ನೀಡಬೇಕು. ಮುಂದಿನ ನಾಲ್ಕು ವರ್ಷ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವ ಶಕ್ತಿ ಇರುವವರು ಅಧ್ಯಕ್ಷರಾಗಲಿ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

56th GST Council: ಇನ್ನು ಶೇ.5 ಮತ್ತು ಶೇ.18 ಎರಡು ಹಂತದ ತೆರಿಗೆ, ಸೆ.22ರ ನವರಾತ್ರಿ ದಿನ ಜಾರಿ

GST 2.0: ಯಾವುದಕ್ಕೆ ತೆರಿಗೆ, ಯಾವುದಕ್ಕೆ ವಿನಾಯಿತಿ ಇಲ್ಲಿದೆ ಮಾಹಿತಿ...

ಮುಖ್ಯಮಂತ್ರಿ ಹುದ್ದೆಯಿಂದ ಫಡ್ನವೀಸ್ ಗೆ ಕೊಕ್: ರಾಷ್ಟ್ರ ರಾಜಕಾರಣಕ್ಕೆ 'ಮಹಾ'ಸಿಎಂ; ಬಿಜೆಪಿ ರಾಷ್ಟ್ರಾಧ್ಯಕ್ಷ ರೇಸ್ ನಲ್ಲಿ ರೂಪಾಲಾ !

ದೇಶವಾಸಿಗಳಿಗೆ ಗುಡ್ ನ್ಯೂಸ್: GST ಸ್ಲ್ಯಾಬ್‌ಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಎರಡೇ ತೆರಿಗೆ

ನೀವೊಬ್ಬರು ಸಚಿವರು...ಹೀಗೆ ಕೇಳಿದ್ರೆ ಹೇಗೆ; ಸಚಿವ ತಿಮ್ಮಾಪುರ ವಿರುದ್ಧ ಡಿಕೆ.ಶಿವಕುಮಾರ್ ಗರಂ

SCROLL FOR NEXT