ಎಚ್.ಡಿ ಕುಮಾರಸ್ವಾಮಿ ಮತ್ತು ಜಮೀರ್ ಅಹ್ಮದ್ ಖಾನ್ 
ರಾಜಕೀಯ

ಜಮೀರ್ 'ಕಾಲಾ' ಕುಮಾರಸ್ವಾಮಿ ಹೇಳಿಕೆ: ಚನ್ನಪಟ್ಟಣ ಉಪಚುನಾವಣೆ ಮೇಲೆ ಪರಿಣಾಮ..?

ಏ ಕೌನ್ ಬೋಲ್ರಾಸೋ, ಕಾಲಾ ಕುಮಾರಸ್ವಾಮಿ ಎಂದು ವರ್ಣ ನಿಂದನೆಯನ್ನು ಮಾಡಿದ್ದರು. ಅಲ್ಲದೆ, ಅಲ್ಪಸಂಖ್ಯಾತರಿಂದ ಹಣ ಸಂಗ್ರಹಿಸಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕುಟುಂಬವನ್ನೇ ಖರೀದಿ ಮಾಡುತ್ತೇನೆಂದು ಹೇಳಿದ್ದರು

ಬೆಂಗಳೂರು: ಕೇಂದ್ರ ಸಚಿವ ಹೆಚ್'ಡಿ.ಕುಮಾರಸ್ವಾಮಿ ಅವರ ವಿರುದ್ಧ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನೀಡಿರುವ ಜನಾಂಗೀಯ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಹೇಳಿಕೆ ಚನ್ನಪಟ್ಟಣ ಉಪ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದ ಜಮೀರ್ ಅವರು ದೇವೇಗೌಡ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಉರ್ದು ಭಾಷಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಜಮೀರ್, ಏ ಕೌನ್ ಬೋಲ್ರಾಸೋ, ಕಾಲಾ ಕುಮಾರಸ್ವಾಮಿ ಎಂದು ಜನಾಂಗೀಯ ನಿಂದನೆಯನ್ನು ಮಾಡಿದ್ದರು. ಅಲ್ಲದೆ, ಅಲ್ಪಸಂಖ್ಯಾತರಿಂದ ಹಣ ಸಂಗ್ರಹಿಸಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕುಟುಂಬವನ್ನೇ ಖರೀದಿ ಮಾಡುತ್ತೇನೆಂದು ಹೇಳಿದ್ದರು.

ದೇವೇಗೌಡ ಕುಟುಂಬದ ವಿರುದ್ಧ ಜಮೀರ್ ಅವರು ನೀಡಿರುವ ಹೇಳಿಕೆ ಕ್ಷೇತ್ರದ ಒಳಗೆ ಹಾಗೂ ಹೊರಗಿರುವ ಒಂದು ವರ್ಗದ ಜನರ ಮೇಲೆ ವಿಶೇಷವಾಗಿ ಒಕ್ಕಲಿಗರ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಗ್ರಾಮಾಂತರ ಬಿಜೆಪಿ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಕಿರಿಯ ಸಹೋದರ ಹಾಗೂ ಶ್ರವಣಬೆಳಗೊಳ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ನೇತೃತ್ವದಲ್ಲಿ ರಾಜ್ಯ ಒಕ್ಕಲಿಗರ ಸಂಘ ನಿನ್ನೆಯಷ್ಟೇ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಜಮೀರ್ ಅವರ ರಾಜೀನಾಮೆಗೆ ಒತ್ತಾಯಿಸಿದೆ.

ಜಮೀರ್ ಅವರ ಹೇಳಿಕೆ ಚುನಾವಣೆ ವೇಳೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರಬಹುದು. ನಮ್ಮ ಗೆಲುವಿನ ಅಂತರವನ್ನು ಇದು ಕಡಿಮೆ ಮಾಡಬಹುದು. ಆದರೆ, ಕಡಿಮೆ ಅಂತರದಲ್ಲಿದ್ದರೂ ನಮ್ಮ ಅಭ್ಯರ್ಥಿ ಖಂಡಿತವಾಗಿಯೂ ಗೆಲ್ಲುತ್ತಾರೆಂದು ಯೋಗೇಶ್ವರ ಪರ ಪ್ರಚಾರ ನಡೆಸಿದ್ದ ಅಲ್ಪಸಂಖ್ಯಾತ ಸಮುದಾಯದ ಶಾಸಕರೊಬ್ಬರು ಹೇಳಿದ್ದಾರೆ.

ಜಮೀರ್ ಅವರ ಹೇಳಿಕೆಯು ಮತದಾರರ ಚಿಂತನೆಗಳನ್ನು ಬದಲಾಯಿಸುವ ಸಾಧ್ಯತೆಗಳಿವೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

ಕ್ಷೇತ್ರದಲ್ಲಿ ಹಣದ ಹೊಳೆಯೇ ಹರಿದಿದ್ದು, ಮತದಾರರು ಈಗಾಗಲೇ ತಮ್ಮ ಮತ ಯಾರಿಗೆ ಹಾಕಬೇಕೆಂದು ಈಗಾಗಲೇ ನಿರ್ಧಾರ ಮಾಡಿರುವುದರಿಂದ ಹೇಳಿಕೆ ಅಷ್ಟೊಂದು ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಮತ್ತೊಬ್ಬ ರಾಜಕೀಯ ವಿಶ್ಲೇಷಕ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ರಾಜಕೀಯ ಪಕ್ಷವೊಂದು ಪ್ರತಿ ಮತದಾರರಿಗೆ 1000 ರೂಪಾಯಿ, ಚಿನ್ನದ ನಾಣ್ಯ ಹಾಗೂ ದೇವರ ಚಿತ್ರ ವಿತರಿಸಿದೆ ಎನ್ನಲಾಗಿದ್ದು, ಮತ್ತೊಂದು ಪಕ್ಷದವರು ಪ್ರತಿ ಮತಕ್ಕೆ ಕೇವಲ 3 ಸಾವಿರ ರೂಪಾಯಿ ಹಂಚಿದ್ದಾರೆಂದು ಮೂಲಗಳು ತಿಳಿಸಿವೆ.

ಇದಲ್ಲದೆ ಬಟ್ಟೆ ಹಾಕಿದ ಕೋಳಿಗಳನ್ನೂ ವಿತರಿಸಿ ಮತದಾರರನ್ನು ಸೆಳೆಯುವ ಯತ್ನ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚನ್ನಪಟ್ಟಣ ಚುನಾವಣಾಧಿಕಾರಿ ಬಿನಯ್ ಮಾತನಾಡಿ, ಮತದಾರರಿಗೆ ಹಣ ಮತ್ತು ಇತರೆ ಆಮಿಷಗಳನ್ನು ಹಂಚಿರುವ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಆದರೆ, ನಗದು ಮತ್ತು ಉಡುಗೊರೆಗಳನ್ನು ನೀಡಿದ ಆರೋಪದ ಮೇಲೆ ಜೆಡಿಎಸ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಬಹಿರಂಗ ಚುನಾವಣೆ ವೇಳೆ ಮಹಿಳೆಗೆ 500 ರೂ. ನೀಡಿದ ಆರೋಪದ ಮೇಲೆ ಜಮೀರ್ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT