ಎಚ್.ಡಿ ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್ 
ರಾಜಕೀಯ

ರಾಮನಗರದಲ್ಲಿ ಜೆಡಿಎಸ್ ಯುಗಾಂತ್ಯ; ಜಿಲ್ಲೆಯಲ್ಲಿ 'ಡಿ.ಕೆ ಬ್ರದರ್ಸ್' ಪ್ರಾಬಲ್ಯ; HDK ಬಳಿಯಿಂದ ಶಿವಕುಮಾರ್ ಕಸಿದುಕೊಂಡ್ರಾ ಒಕ್ಕಲಿಗರ ಸಾಮ್ರಾಜ್ಯ?

ಚನ್ನಪಟ್ಟಣವನ್ನು ದಶಕಗಳ ಕಾಲ ತಮ್ಮ ಪ್ರಭಾವದಲ್ಲಿ ಇರಿಸಿಕೊಂಡಿದ್ದ ದೇವೇಗೌಡರ ಕುಟುಂಬದ ಒಕ್ಕಲಿಗ ಪ್ರಾಬಲ್ಯವನ್ನು ಕಸಿದುಕೊಂಡಿರುವ ಡಿ.ಕೆ.ಶಿವಕುಮಾರ್ ಅವರಿಗೂ ಈ ಉಪಚುನಾವಣೆ ಗೆಲುವು ಮತ್ತಷ್ಟು ಬಲ ತಂದುಕೊಟ್ಟಿದೆ.

ಮೈಸೂರು: ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿರುವುದು ಭ್ರಷ್ಟಾಚಾರದ ಆರೋಪಗಳ ಸುಳಿಯಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೂಸ್ಟರ್ ಡೋಸ್ ಆಗಿ ಪರಿಣಮಿಸಿದೆ.

ಚನ್ನಪಟ್ಟಣವನ್ನು ದಶಕಗಳ ಕಾಲ ತಮ್ಮ ಪ್ರಭಾವದಲ್ಲಿ ಇರಿಸಿಕೊಂಡಿದ್ದ ದೇವೇಗೌಡರ ಕುಟುಂಬದ ಒಕ್ಕಲಿಗ ಪ್ರಾಬಲ್ಯವನ್ನು ಕಸಿದುಕೊಂಡಿರುವ ಡಿ.ಕೆ.ಶಿವಕುಮಾರ್ ಅವರಿಗೂ ಈ ಉಪಚುನಾವಣೆ ಗೆಲುವು ಮತ್ತಷ್ಟು ಬಲ ತಂದುಕೊಟ್ಟಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರ ಸಚಿವ ಸಂಪುಟ ಸೇರಲು ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಸ್ಥಾನವನ್ನು ತ್ಯಜಿಸಿದ ಹಿನ್ನೆಲೆಯಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು. ಶಿವಕುಮಾರ್ ಕನಕಪುರ ಬೆಲ್ಟ್‌ನಲ್ಲಿ ಗಟ್ಟಿಯಾದ ಹಿಡಿತ ಸಾಧಿಸಿದ್ದರೂ, ರಾಮನಗರ ಮತ್ತು ಚನ್ನಪಟ್ಟಣ ಗೌಡರ ಕುಟುಂಬದೊಂದಿಗೆ ಉಳಿದಿತ್ತು. 1990ರ ದಶಕದಲ್ಲಿ ದೇವೇಗೌಡರು ಮುಖ್ಯಮಂತ್ರಿಯಾದಾಗ ಸ್ವತಃ ರಾಮನಗರವನ್ನು ಪ್ರತಿನಿಧಿಸಿದ್ದರು. ಚನ್ನಪಟ್ಟಣ ಕುಮಾರಸ್ವಾಮಿ ಜೊತೆಗಿತ್ತು, ಸಿ.ಪಿ.ಯೋಗೇಶ್ವರ ಅವರು ರಾಜಕೀಯ ಧುರೀಣರೆಂದೇ ಹೆಸರಾಗಿದ್ದರು.

ಯೋಗೇಶ್ವರ ಪಾಳಯದ ವಿರೋಧದ ನಡುವೆಯೂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸುವ ಮೂಲಕ ಚನ್ನಪಟ್ಟಣ ಉಪಚುನಾವಣೆ ದೇವೇಗೌಡ ಮತ್ತು ಡಿಕೆ ಶಿವಕುಮಾರ್ ಕುಟುಂಬಗಳ ನಡುವೆ ನೇರ ಹಣಾಹಣಿಯಾಗಿ ಪರಿಣಮಿಸಿತ್ತು. ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳಲು ಕುಮಾರಸ್ವಾಮಿ ತಮ್ಮ ಮಗನ ಪ್ರಚಾರಕ್ಕಾಗಿ 92 ವರ್ಷದ ದೇವೇಗೌಡರನ್ನು ಕರೆತಂದು ಭಾವನಾತ್ಮಕ ಗೇಮ್ ಆಡಿದ್ದರು. ಈ ನಡುವೆ ಉಪ ಚುನಾವಣೆ ಪ್ರಚಾರದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ನೀಡಿದ್ದ ಹೇಳಿಕೆ ಒಕ್ಕಲಿಗರನ್ನು ಕೆರಳಿಸಿತ್ತು, ಆದರೂ ಕಾಂಗ್ರೆಸ್ 26 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದೆ.

2023 ರಲ್ಲಿ, ಒಕ್ಕಲಿಗ ಭಾಗದ ಹಳೇ ಮೈಸೂರಿನಲ್ಲಿ ಕಾಂಗ್ರೆಸ್ 56 ಸ್ಥಾನಗಳಲ್ಲಿ 38 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಯಿತು ಹೀಗಾಗಿ 136 ಸ್ಥಾನಗಳಿಗೆ ಕೊಂಡೊಯ್ಯಿತು, ಕಾಂಗ್ರೆಸ್ ಅಭ್ಯರ್ಥಿಗಳು ರಾಮನಗರ, ಮೈಸೂರು, ಮಂಡ್ಯ, ಕೋಲಾರ-ಚಿಕ್ಕಬಳ್ಳಾಪುರ ಮತ್ತು ಇತರ ಸ್ಥಳಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಾಗ ಮತ್ತು ಜೆಡಿಎಸ್‌ನ ಎರಡು ಸ್ಥಾನಗಳನ್ನು ಒಳಗೊಂಡಂತೆ 19 ಸ್ಥಾನ ಗಳಿಸಿದವು.

ಶಿವಕುಮಾರ್ ಅವರ ಸೋದರ ಡಿ.ಕೆ.ಸುರೇಶ್ ಸೇರಿದಂತೆ ಎಂಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕಾಂಗ್ರೆಸ್ ರಾಮನಗರದಲ್ಲಿ ಭಾರಿ ಅಂತರದಿಂದ ಸೋತಿದ್ದು, ಒಕ್ಕಲಿಗರು ದೇವೇಗೌಡರ ಕುಟುಂಬವನ್ನು ಬೆಂಬಲಿಸಲು ಕಾಂಗ್ರೆಸ್‌ನಿಂದ ದೂರ ಉಳಿದಿದ್ದಾರೆ ಎಂಬ ಕಥಾನಕವನ್ನು ಕಾಂಗ್ರೆಸ್ ಹುಟ್ಟುಹಾಕಿದೆ. ಪ್ರಜ್ವಲ್ ಲೈಂಗಿಕ ಹಗರಣದಿಂದ ಒಕ್ಕಲಿಗ ಸಮುದಾಯ ಅಸಮಾಧಾನಗೊಂಡಿದೆ. ರಾಮನಗರ ಲೋಕಸಭೆ ಚುನಾವಣೆಯಲ್ಲಿ ಡಿ,ಕೆ ಸುರೇಶ್ ಸೋಲು ಶಿವಕುಮಾರ್ ಅವರಿಗೆ ನುಂಗಲಾರದ ತುತ್ತಾಗಿತ್ತು. ಸಮುದಾಯವು ಅವರನ್ನು ನಿರಾಸೆಗೊಳಿಸಿತ್ತು. ಇದು ಡಿಸಿಎಂಗೆ ಅವರದೇ ಅಂಗಳದಲ್ಲಿ ಪ್ರತಿಷ್ಠೆಯ ಕದನವಾಗಿತ್ತು. ಯೋಗೇಶ್ವರ ಅವರನ್ನು ಬಿಜೆಪಿಯಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಲು ಸೆಳೆಯುವಲ್ಲಿ ಯಶಸ್ವಿಯಾದ ಅವರು, ಯೋಗೇಶ್ವರ ಅವರ ಸೋಲು ಅವರದೇ ಆಗಲಿದೆ ಎಂದರು. ಸೋಲು ಈ ಭಾಗದಲ್ಲಿ ಅವರ ನಾಯಕತ್ವದ ಅಂತ್ಯ ಎಂದು ಅವರು ತಿಳಿದಿದ್ದರು.

ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ಸಮುದಾಯಗಳನ್ನು ಹೊರತುಪಡಿಸಿ ಶೇಕಡ 30-40 ರಷ್ಟು ಒಕ್ಕಲಿಗರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂಬುದನ್ನು ಚನ್ನಪಟ್ಟಣದ ತೀರ್ಪು ಮತ್ತು ಮುನ್ನಡೆಗಳು ಸಾಬೀತುಪಡಿಸಿವೆ. ಫಲಿತಾಂಶಗಳು ಡಿಕೆಎಸ್ ಪಾಳಯದಲ್ಲಿ ಧೈರ್ಯ ತುಂಬಿದ್ದು, ಅವರ ಬೆಂಬಲಿಗರು ರಾಜಕೀಯ ಸಮೀಕರಣಗಳನ್ನು ಬದಲಾಯಿಸಬೇಕೆಂದು ಬಹಿರಂಗವಾಗಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT