ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಅಜ್ಜಂಪೀರ್ ಖಾದ್ರಿ 
ರಾಜಕೀಯ

ಶಿಗ್ಗಾಂವಿ ಬಂಡಾಯ: ಅಜ್ಜಂಪೀರ್ ಖಾದ್ರಿ ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿ

ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ವಿರುದ್ಧ ಬಂಡೆದ್ದ ಅಜ್ಜಂಪೀರ್ ಖಾದ್ರಿ ಕೊನೆ ಗಳಿಗೆಯಲ್ಲಿ ನಿನ್ನೆ ನಾಮಪತ್ರ ಸಲ್ಲಿಸಿದ್ದರು. ಅವರನ್ನು ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಅಖಾಡ ರಂಗೇರಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನಿನ್ನೆ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದರೊಂದಿಗೆ ಪ್ರಚಾರ ಆರಂಭಿಸಿವೆ.

ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ವಿರುದ್ಧ ಬಂಡೆದ್ದ ಅಜ್ಜಂಪೀರ್ ಖಾದ್ರಿ ಕೊನೆ ಗಳಿಗೆಯಲ್ಲಿ ನಿನ್ನೆ ನಾಮಪತ್ರ ಸಲ್ಲಿಸಿದ್ದರು. ಅವರನ್ನು ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸುಮಾರು ಅರ್ಧಗಂಟೆ ಅಜ್ಜಂಪೀರ್ ಖಾದ್ರಿ ಅವರೊಂದಿಗೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು, ಬಿಜೆಪಿ ಅಭ್ಯರ್ಥಿ ಸೋಲಿಸಬೇಕು, ನೀನು ಪಕ್ಷದ ಪರ ಕೆಲಸ ಮಾಡು ಎಂದು ಮನವೊಲಿಸಿದ್ದು, ಮಾಜಿ ಶಾಸಕ ಅಜ್ಜಂಪೀರ್ ತಮ್ಮ ನಾಮಪತ್ರ ವಾಪಸ್ ಪಡೆಯುತ್ತಾರೆ ಎನ್ನಲಾಗಿದೆ. ಆದರೆ, ಮತ್ತೋರ್ವ ಬಂಡಾಯ ಅಭ್ಯರ್ಥಿ ಮಂಜುನಾಥ್ ಕುನ್ನೂರು ಅವರು ನಾಮಪತ್ರ ವಾಪಸ್ ಪಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka By-poll & Assembly elections 2026 LIVE updates (KL, TN, AS, WB): ಷೇರು ಮಾರುಕಟ್ಟೆ ಮೇಲೂ ಚುನಾವಣಾ ಫಲಿತಾಂಶ ಪರಿಣಾಮ: Sensex 600 ಅಂಕಗಳ ಏರಿಕೆ

ಪಂಚರಾಜ್ಯ ಚುನಾವಣೆ ಫಲಿತಾಂಶ 2026: ಬಂಗಾಳದಲ್ಲಿ BJP ಮುನ್ನಡೆ, ಕೇಸರಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಆಲೂ ಪೂರಿ, ರಸಗುಲ್ಲ ಸಿದ್ಧತೆ

'ಪವರ್ ಕಟ್, ಸಿಸಿಟಿವಿಗಳು ಸ್ಥಗಿತ.. ಬಿಜೆಪಿಯವ್ರು ಏನೋ ಮಾಡ್ತಾ ಇದಾರೆ': ಪಶ್ಚಿಮ ಬಂಗಾಳ ಸಿಎಂ Mamata Banerjee ಆತಂಕ

ಕರ್ನಾಟಕ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್ ಕಂಗೆಡಿಸಿರುವ 'ಬಾಂಧವರು'; ಬಿಜೆಪಿಗೆ ವರವಾಗಲಿದ್ಯಾ ಹಿಂದೂ ಮತಗಳ ಧ್ರುವೀಕರಣ!

ಆಸ್ಪತ್ರೆಗೆ ದಾಖಲಾಗಿದ್ದಾರೆಯೇ ಅಮೆರಿಕಾ ಅಧ್ಯಕ್ಷ..?: "ಟ್ರಂಪ್‌ಗಾಗಿ ಪ್ರಾರ್ಥಿಸಿ" ಎಂದ ಸಂಸದೆ ನ್ಯಾನ್ಸಿ ಮೇಸ್, ಹೆಚ್ಚಿದ ಗೊಂದಲ..!

SCROLL FOR NEXT