ಶಿವರಾಮ್ ಹೆಬ್ಬಾರ್‌ 
ರಾಜಕೀಯ

BJP ಎಂಟು ಶಾಸಕರು ಕಾಂಗ್ರೆಸ್‌ ಸೇರ್ತಾರೆ: ಸೋಮಶೇಖರ್ ಮಾತಿನಲ್ಲಿ ಸತ್ಯತೆ ಇರುತ್ತದೆ ಎಂದ ಶಿವರಾಮ್‌ ಹೆಬ್ಬಾರ್‌

ಎಸ್‌.ಟಿ‌.ಸೋಮಶೇಖರ್ ಮಾತು ಸತ್ಯ ಇರಬಹುದು. ಸೋಮಶೇಖರ್ ಅವರ ಮಾತು ನೋಡಿದರೆ ಅವರಿಗೆ ಖಚಿತ ಮಾಹಿತಿ ಇರಬಹುದು. ಹಾಗಾಗಿ, ಸೋಮಶೇಖರ್ ಮಾತಿನಲ್ಲಿ ಸತ್ಯತೆ ಇರುತ್ತದೆ.

ಯಲ್ಲಾಪುರ (ಉತ್ತರ ಕನ್ನಡ): ಎಸ್‌.ಟಿ‌.ಸೋಮಶೇಖರ್ ಮಾತು ಸತ್ಯ ಇರಬಹುದು. ಸೋಮಶೇಖರ್ ಅವರ ಮಾತು ನೋಡಿದರೆ ಅವರಿಗೆ ಖಚಿತ ಮಾಹಿತಿ ಇರಬಹುದು. ಹಾಗಾಗಿ, ಸೋಮಶೇಖರ್ ಮಾತಿನಲ್ಲಿ ಸತ್ಯತೆ ಇರುತ್ತದೆ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಅವರು ಬುಧವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌.ಟಿ‌.ಸೋಮಶೇಖರ್ ಮಾತು ಸತ್ಯ ಇರಬಹುದು. ಸೋಮಶೇಖರ್ ಅವರ ಮಾತು ನೋಡಿದರೆ ಅವರಿಗೆ ಖಚಿತ ಮಾಹಿತಿ ಇರಬಹುದು. ಹಾಗಾಗಿ, ಸೋಮಶೇಖರ್ ಮಾತಿನಲ್ಲಿ ಸತ್ಯತೆ ಇರುತ್ತದೆ. ಈ ಬಗ್ಗೆ ಮಾತನಾಡಲು ಸೋಮಶೇಖರ್ ಅವರಿಗೆ ಪೋನ್ ಕರೆ ಮಾಡಿದ್ದೆ, ಆದರೆ, ಕರೆಗೆ ಸಿಕ್ಕಿಲ್ಲ ಎಂದು ಹೇಳಿದರು.

ಇದೇ ವೇಳೆ ತಮ್ಮ ಬಗ್ಗೆ ಮಾಧ್ಯಮಗಳ ವರದಿ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿಯಿಂದ ಒಂದು ಕಾಲನ್ನು ಹೊರಗೆ ಇಟ್ಟಿದ್ದೇನೆ ಅಂತಾನಾದ್ರೂ ಬರೆದುಕೊಳ್ಳಿ, ಎರಡು ಕಾಲು ಹೊರಗೆ ಇಟ್ಟಿದ್ದೇನೆ ಅಂತಾನಾದ್ರೂ ಬರೆದುಕೊಳ್ಳಿ, ಅದು ನಿಮ್ಮ ವಿವೇಚನೆಗೆ ಸೇರಿದ್ದು. ನಮ್ಮ ನಿರ್ಣಯ ನಮ್ಮ ಮುಖಂಡರ ಜತೆ ಚರ್ಚೆ ಮಾಡಿ ತೆಗೆದುಕೊಳ್ಳುತ್ತೇನೆ. ಇದು ರಾಜಕಿಯ ಕ್ಷೇತ್ರ, ಯಾವ ಸಂದರ್ಭ, ಯಾವ ನಿರ್ಣಯ ಕೈಗೊಳ್ಬೇಕು ಎಂಬುದು ನಮಗೆ ಗೊತ್ತು ಎಂದು ತಿಳಿಸಿದರು.

ಉಪಚುನಾವಣೆಗೆ ಕಾಲ ಪಕ್ವವಾಗಿಲ್ಲ. ನಾನು ಯಾವ ಪಕ್ಷದ ಚುನಾವಣೆ ಪ್ರಚಾರಕ್ಕೂ ಹೋಗಿಲ್ಲ. ಬೊಮ್ಮಾಯಿ ಅವರು ನನಗೆ ಆತ್ಮೀಯರಾಗಿದ್ದು, ಪ್ರಚಾರಕ್ಕೆ ಕರೆದರೆ ಆಲೋಚನೆ ಮಾಡಿ ನಿರ್ಣಯಿಸುತ್ತೇನೆ ಎಂದರು.

ಮುಡಾ ಹಗರಣದ ಕುರಿತ ಪ್ರಶ್ನೆಗೆ ಉತ್ತರಿಸಿ, ಮುಡಾ ಪ್ರಕರಣ ನ್ಯಾಯಾಂಗ ತನಿಖೆಯಲ್ಲಿದ್ದು, ಸತ್ಯಾಸತ್ಯತೆ ಗೊತ್ತಾಗುತ್ತದೆ. ಈ ಪ್ರಕರಣದ ಬಗ್ಗೆ ನಾವು ಮಾತನಾಡುವುದಿಲ್ಲ. ಸತ್ಯವು ಮೇಲುಗೈ ಸಾಧಿಸುತ್ತದೆ ಎಂದು ಹೇಳಿದರು.

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ ಸೈಲ್ ಅವರಿಗೆ ಶಿಕ್ಷೆ ಪ್ರಕರಣ ಆದೇಶ ವಿಚಾರವಾಗಿ ಮಾತನಾಡಿ, ನ್ಯಾಯಾಂಗದ ನಿರ್ಣಯವನ್ನು ಪ್ರಶ್ನೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ನ್ಯಾಯಾಲಯದ ಬಗ್ಗೆ ಮಾತನಾಡುವಂತಹ ಅಧಿಕಾರವು ನಮಗಿಲ್ಲ. ನ್ಯಾಯಾಲಯದ ತೀರ್ಪಿಗೆ ನಾವು ಗೌರವ ಕೊಡಲೇಬೇಕು. ಆದರೆ, ಅದಕ್ಕಿಂತಲೂ ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವ ಅವಕಾಶವಿದೆ. ಸೈಲ್ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT