ಸಿಎಂ ಇಬ್ರಾಹಿಂ 
ರಾಜಕೀಯ

ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲ್ತಿದ್ರು; ನಾನು ಚಿಮ್ಮನಕಟ್ಟಿ ಸೇರಿ 3000 ಮತ ಖರೀದಿಸಿದ್ದರಿಂದ ಗೆದ್ರು: ಇಬ್ರಾಹಿಂ

ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ 30 ಸಾವಿರದಿಂದ ಗೆಲ್ತೀನಿ ಅಂತಿದ್ದ. ಪಕ್ಕದಲ್ಲಿದ್ದ ಮಹದೇವಪ್ಪ 40 ಸಾವಿರದಿಂದ ಗೇಲ್ತೀವಿ ಅಂತಿದ್ದ. ಆಗ ನಾನು ಮುಂಡೇದೆ ನೀನೇ ಮೊದಲು ಸೋಲ್ತೀಯ ಅಂದಿದ್ದೆ.

ಮೈಸೂರು: ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲುವ ಹಂತದಲ್ಲಿದ್ದರು. ಆಗ ನಾನು ಮತ್ತು ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಸೇರಿ ಸಾಲ ಮಾಡಿ 3000 ಮತಗಳನ್ನು ಖರೀದಿ ಮಾಡಿದ್ದೆವು ಎಂದು ಇಬ್ರಾಹಿಂ ನೇರವಾಗಿ ಆರೋಪಿಸಿದ್ದಾರೆ.

ಮೈಸೂರಿನ ಕೆ.ಎಸ್.ಓ.ಯು ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಇಬ್ರಾಹಿಂ, ಕೌಂಟಿಂಗ್ ದಿನ ಸಿದ್ದರಾಮಯ್ಯ ಸೋಲುವ ಭಯದಲ್ಲಿದ್ದರು. ಆಗ ನಾನು ಮ್ಯಾನೇಜ್ ಮಾಡಿದ್ದೇನೆ, 800-1000 ಚಿಕ್ಕ ಅಂತರದಲ್ಲಿ ಗೆಲ್ಲುತ್ತೀರಿ ಎಂದು ಹೇಳಿದ್ದೆ. ನಾನು ಮತ್ತು ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಸೇರಿ ಸಾಲ ಮಾಡಿ 3000 ಮತಗಳನ್ನು ಖರೀದಿ ಮಾಡಿದ್ದೆವು, ಆರು ತಿಂಗಳ ನಂತರ ಸಿದ್ದರಾಮಯ್ಯ ಆ ಸಾಲವನ್ನು ವಾಪಸ್ ಕೊಟ್ಟರು ಎಂದು ಬಾಂಬ್ ಹಾಕಿದ್ದಾರೆ.

ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು ಸಾಕು. ಇನ್ನು ದಲಿತರನ್ನು ಸಿಎಂ ಮಾಡಿ. ಸಿದ್ದರಾಮಯ್ಯ ದಲಿತರ ಮತಗಳಿಂದಲೇ ಮುಖ್ಯಮಂತ್ರಿ ಆಗಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಲು ನನಗೆ ಯಾವುದೇ ಭಯವಿಲ್ಲ. ಮುಂದೆ ದೇಶದಲ್ಲಿ ಬಹಳ ಕೆಟ್ಟ ಪರಿಸ್ಥಿತಿ ಬರುತ್ತದೆ ಎಂದಿದ್ದಾರೆ.

ಕಳೆದ ಬಾರಿ ಸಿದ್ಧರಾಮಯ್ಯಗೆ ಬಾದಾಮಿಯಿಂದ ಸ್ಪರ್ಧೆ ಮಾಡುವಂತೆ ಹೇಳಿದ್ದೇ ನಾನು. ಚಿಮ್ಮನಕಟ್ಟಿ ಒಪ್ಪದಿದ್ದಾಗ ಅವರ ಪತ್ನಿ ಕಡೆಯಿಂದ ಒಪ್ಪಿಸಿದೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ 30 ಸಾವಿರದಿಂದ ಗೆಲ್ತೀನಿ ಅಂತಿದ್ದ. ಪಕ್ಕದಲ್ಲಿದ್ದ ಮಹದೇವಪ್ಪ 40 ಸಾವಿರದಿಂದ ಗೇಲ್ತೀವಿ ಅಂತಿದ್ದ. ಆಗ ನಾನು ಮುಂಡೇದೆ ನೀನೇ ಮೊದಲು ಸೋಲ್ತೀಯ ಅಂದಿದ್ದೆ. ಕೊನೆಗೆ ಫಲಿತಾಂಶ ಹಾಗೆಯೇ ಬಂದಿತ್ತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗ್ರೇಟರ್‌ ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಟಿಕೆಟ್‌: ಡಿಕೆ ಶಿವಕುಮಾರ್ ಘೋಷಣೆ

ಅನಂತ್‌ನಾಗ್‌: ಕೂಂಬಿಂಗ್ ಕಾರ್ಯಾಚರಣೆ ವೇಳೆ ಇಬ್ಬರು ಸೈನಿಕರು ನಾಪತ್ತೆ!

ಬೆಂಗಳೂರು: CJI ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ವಿರುದ್ಧ ಎಫ್ಐಆರ್ ದಾಖಲು

ಸ್ವದೇಶಿ ಮಂತ್ರ: Gmailನಿಂದ Zoho Mailಗೆ ಅಮಿತ್ ಶಾ ಶಿಫ್ಟ್; ಟ್ರಂಪ್‌ಗೆ ಠಕ್ಕರ್

ತಾನು ಯಾವತ್ತಿಗೂ ವಿಮರ್ಶಾತೀತ ಎಂದೆಣಿಸುವುದರಲ್ಲಿ ಯಾವ ನ್ಯಾಯವಿದೆ? (ತೆರೆದ ಕಿಟಕಿ)

SCROLL FOR NEXT