ಬಿ.ಎಲ್ ಸಂತೋಷ್ 
ರಾಜಕೀಯ

RSS ಬಿಜೆಪಿಯ ಸೈದ್ಧಾಂತಿಕ ಅಡಿಪಾಯ: ಸುದೀರ್ಘ ಆಡಳಿತಕ್ಕೆ ವಾಜಪೇಯಿ ಬುನಾದಿ; ಬಿ.ಎಲ್ ಸಂತೋಷ್‌

ನಿಮ್ಮ ಸಂಗಾತಿಗಳು (ಸ್ಟಾಲಿನ್ ಪಿಣರಾಯಿ ವಿಜಯನ್‌ ಮಮತಾ ಬ್ಯಾನರ್ಜಿ) ಮಾಡುವ ಟ್ವೀಟ್‌ಗಳು ದೇಶದ ಜನರ ಮನಸ್ಸುಗಳನ್ನು ವಿಚಲಿತಗೊಳಿಸಲು ಆಗುವುದಿಲ್ಲ.

ಬೆಂಗಳೂರು: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಎಸ್‌ಎಸ್ ಬಗ್ಗೆ ಉಲ್ಲೇಖಿಸಿದ್ದನ್ನು ಟೀಕಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಶನಿವಾರ ಟೀಕಿಸಿದ್ದಾರೆ.

ನಾನು ಸಿದ್ದರಾಮಯ್ಯ ಅವರಿಗೆ ಹೇಳಲು ಬಯಸುತ್ತೇನೆ, ಆರ್‌ಎಸ್‌ಎಸ್ ಯಾವಾಗಲೂ ಬಿಜೆಪಿಗೆ ಸೈದ್ಧಾಂತಿಕ ಮತ್ತು ಬೌದ್ಧಿಕ ಅಡಿಪಾಯವಾಗಿರುತ್ತದೆ. ಅದು ರಾಷ್ಟ್ರೀಯ ಜೀವನದ ಮುಖ್ಯವಾಹಿನಿಗೆ ಪ್ರವೇಶಿಸಿದೆ. ಹೆಚ್ಚಿನ ಜನರು ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ, ನಿಮ್ಮ ಟ್ವೀಟ್ ಜನರ ಮನಸ್ಸನ್ನು ಕದಲಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ನಡೆದ ಕಾರ್ಯಕ್ರಮದಲ್ಲಿ ಸಂತೋಷ್ ಹೇಳಿದರು.

ವಾಜಪೇಯಿ ಅವರು ಒಂದು ಜೀವನ, ಒಂದು ಧ್ಯೇಯ, ಒಂದು ನಂಬಿಕೆ ಮತ್ತು ಒಂದು ಸಿದ್ಧಾಂತದಲ್ಲಿ ನಂಬಿಕೆ ಇಡುವ ಸಂಘಟನೆಯಲ್ಲಿ 67 ವರ್ಷಗಳ ಕಾಲ ಜೀವಿಸಿದ್ದಾರೆ. ಅದಕ್ಕಾಗಿಯೇ ಅಟಲ್ ಅಥವಾ ಮೋದಿ ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿಲ್ಲ ಎಂದು ಸಂತೋಷ್ ತಿಳಿಸಿದ್ದಾರೆ.

ಗಾಂಧಿ ಹತ್ಯೆ ಆರ್‌ಎಸ್‌ಎಸ್‌ ಮಾಡಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಲೇ ಇದ್ದಾರೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘ ಬಿಜೆಪಿಗೆ ವೈಚಾರಿಕ ಸೈದ್ಧಾಂತಿಕ ಮತ್ತು ಕಾರ್ಯಬದ್ಧತೆಯ ಬುನಾದಿಯಾಗಿ ಇದ್ದೇ ಇರುತ್ತದೆ. ನಿಮ್ಮ ಸಂಗಾತಿಗಳು (ಸ್ಟಾಲಿನ್ ಪಿಣರಾಯಿ ವಿಜಯನ್‌ ಮಮತಾ ಬ್ಯಾನರ್ಜಿ) ಮಾಡುವ ಟ್ವೀಟ್‌ಗಳು ದೇಶದ ಜನರ ಮನಸ್ಸುಗಳನ್ನು ವಿಚಲಿತಗೊಳಿಸಲು ಆಗುವುದಿಲ್ಲ ಎಂಬುದನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ ’ ಎಂದು ಬಿ.ಎಲ್‌ ಸಂತೋಷ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ರಷ್ಯಾ ಸೇನೆ ಸೇರಿದ್ದ ಭಾರತ ಮೂಲದ ವ್ಯಕ್ತಿ ಬಂಧನ': ಭಾರತಕ್ಕೆ ಉಕ್ರೇನ್ ಮಾಹಿತಿ!

ಕೊನೆಗೂ Bigg Boss Kannada ವೀಕ್ಷಕರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ, ರಿಯಾಲಿಟಿ ಶೋ ಪುನಾರಂಭಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಗ್ರೀನ್ ಸಿಗ್ನಲ್!

ಕೊಪ್ಪಳದ ಗಂಗಾವತಿಯಲ್ಲಿ ಹರಿಯಿತು ನೆತ್ತರು: BJP ಯುವ ಮೋರ್ಚಾ ಅಧ್ಯಕ್ಷನ ಬರ್ಬರ ಹತ್ಯೆ

ಮಧ್ಯಪ್ರದೇಶ: ಕಾಫ್ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯ; ಚಿಕಿತ್ಸೆ ಪಡೆಯುತ್ತಿದ್ದ 6 ಮಕ್ಕಳ ಮರಣ; ಸಾವಿನ ಸಂಖ್ಯೆ 20ಕ್ಕೆ ಏರಿಕೆ

BiggBoss Kannada: ಬಿಗ್ ಬಾಸ್ 12 ಮನೆಗೆ ಬೀಗಮುದ್ರೆ, ಜಾಲಿವುಡ್ ಸ್ಟುಡಿಯೋಸ್ ಇಂದು ಹೈಕೋರ್ಟ್ ಮೊರೆ?

SCROLL FOR NEXT