ಬೆಂಗಳೂರು: ಬಿಜೆಪಿಯಿಂದ ಉಚ್ಚಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನ್ ಅಡ್ಜಸ್ಟ್‌ಮೆಂಟ್ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
ರಾಜ್ಯದ ಆರ್ಥಿಕ ಸಂಕಷ್ಟ ಪರಿಸ್ಥಿತಿಯನ್ನು ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದಿನ ಬಿಜೆಪಿ ಸರ್ಕಾರವು 2019-23ರ ಅವಧಿಯಲ್ಲಿ ಹಣವಿಲ್ಲದೆ ಮಸೂದೆಗಳನ್ನು ಅಂಗೀಕರಿಸಿದೆ ಎಂದು ಆರೋಪಿಸಿದ ನಂತರ ಯತ್ನಾಳ್ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಹೇಳಿದರು.
ಸಿದ್ದರಾಮಯ್ಯ ಅವರಿಗೆ ನಮ್ಮಿಬ್ಬರ ಬೆಂಬಲ ಸಿಕ್ಕಿದೆ. ನಿಮ್ಮನ್ನೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಜೆಡಿಎಸ್‌ನಿಂದ ಉಚ್ಚಾಟಿಸಿದ್ದರು. ಹೀಗೆ ಉಚ್ಚಾಟಿಸಲ್ಪಟ್ಟವರು ಮುಂದೊಂದು ದಿನ ಮುಖ್ಯಮಂತ್ರಿಯಾಗುತ್ತಾರೆ ಅಂತಾ ಯತ್ನಾಳ್ ಹೇಳಿದರು. ಇದಕ್ಕೆ ಲಘು ಹಾಸ್ಯದ ದಾಟಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ, ನೀವೂ ಮುಖ್ಯಮಂತ್ರಿಯಾದ್ರೆ ನನಗೆ ಸಂತೋಷ ಎಂದರು.
ಆದರೆ ಯಾವ ಪಕ್ಷದಿಂದ ಸಿಎಂ ಆಗ್ತೀರಾ? ಎಂದು ಯತ್ನಾಳ್ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ, ಹೊಸ ಪಕ್ಷ ಕಟ್ಟುವಂತೆ ಸೂಚಿಸಿದರು. ಅದಕ್ಕೆ ಉತ್ತರಿಸಿದ ಯತ್ನಾಳ್, ನಾನ್ ಅಡ್ಜಸ್ಟ್‌ಮೆಂಟ್ ಪಕ್ಷ ಕಟ್ಟುತ್ತೇನೆ. ಅದು ಬಿಜೆಪಿಯ ಮತಗಳನ್ನು ಕಡಿಮೆ ಮಾಡಿದರೆ ಚಿಂತಿಸಬೇಡಿ. ಇದು ನಿಮಗೆ ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಯತ್ನಾಳ್ ಹೊಸ ಪಕ್ಷ ಆರಂಭಿಸಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಕುಟುಂಬ ಆಡಳಿತ ಹಾಗೂ ಸಿದ್ದರಾಮಯ್ಯ- ಯಡಿಯೂರಪ್ಪ ಅವರ ಹೊಂದಾಣಿಕೆ ರಾಜಕೀಯ ವಿರುದ್ಧ ವಿರುದ್ಧ ಪದೇ ಪದೇ ಟೀಕೆ ಮಾಡುವ ಮೂಲಕ ಆರು ವರ್ಷಗಳ ಕಾಲ ಬಿಜೆಪಿಯಿಂದ ಯತ್ನಾಳ್ ಉಚ್ಚಾಟಿತರಾಗಿದ್ದಾರೆ.