ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಇಡೀ ರಾಜ್ಯದ ಜನತೆಯ ಗಮನ ಸೆಳೆಯುತ್ತಿದೆ. ವಿರೋಧ ಪಕ್ಷಗಳು, ಸಿಎಂ ಕುರ್ಚಿ ಕದನ ಮುಂದುವರಿದಿದೆ. ಈ ಮೀಟಿಂಗ್ ನ್ನು ಒಗ್ಗಟ್ಟು ಪ್ರದರ್ಶಿಸುವ ನಾಟಕ ಎಂದು ಟೀಕಿಸುತ್ತಿದ್ದಾರೆ.
ಇಂದಿನ ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಜೆಡಿಎಸ್ ಅಣಕಿಸಿದೆ. ಇದು ಸಿಎಂ ಸಿದ್ದರಾಮಯ್ಯನವರ ಸೆಟ್ಲ್ ಮೆಂಟ್ ರಾಜಕಾರಣ ಎಂದು ಟೀಕಿಸಿದೆ.
ಸಿದ್ದರಾಮಯ್ಯನವರಿಗೆ ಸಿಎಂ ಕುರ್ಚಿ ಬಿಡಲು ಮನಸ್ಸು ಒಪ್ಪುತ್ತಿಲ್ಲ, ಅದಕ್ಕಾಗಿ ಡಿ ಕೆ ಶಿವಕುಮಾರ್ ಜೊತೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ಸಂಪುಟ ಪುನಾರಚನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳೋಣ ಎಂದು ಒತ್ತಡ ಹೇರಲು ನೋಡುತ್ತಿದ್ದಾರೆ. ಇವರಿಬ್ಬರದ್ದು ಕೇವಲ ನಾಟಕವಷ್ಟೆ, ಹೊರಗೆ ಮಾಧ್ಯಮಗಳ ಮುಂದೆ ಅಣ್ತಮ್ಮನಂತೆ ತೋರಿಸಿಕೊಳ್ಳುತ್ತಿದ್ದಾರಷ್ಟೆ ಎಂದು ಹೇಳಿದೆ.