ಬಸನಗೌಡ ಪಾಟೀಲ್ ಯತ್ನಾಳ್ 
ರಾಜಕೀಯ

ಅಶೋಕ್ ಹಾಜರಿದ್ದರೂ ಡೋಂಟ್ ಕೇರ್: ನಾನೇ ನಿಜವಾದ ವಿರೋಧ ಪಕ್ಷದ ನಾಯಕ, ನನಗೆ ಉಪ ಸಭಾಪತಿ ಪಕ್ಕದ 'ಕುರ್ಚಿ' ನೀಡಿ; ಯತ್ನಾಳ್; Video

ನಾನು ಯಾವುದೇ ಹೊಂದಾಣಿಕೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಯಲ್ಲ. ನಾನು ಯಾರೊಂದಿಗೂ ಯಾವುದೇ Adjustment ಮಾಡಿಕೊಂಡಿಲ್ಲ ಎಂದರು. ನಾನು ಮುಖ್ಯಮಂತ್ರಿ ಕಚೇರಿಗೆ ಹೋಗಿಲ್ಲ, ಯಾವುದೇ ಸಚಿವರಿಗೆ ಯಾವುದೇ ವಿನಂತಿಗಳನ್ನು ಮಾಡಿಲ್ಲ.

ಬೆಳಗಾವಿ: ನಾನು ನಿಜವಾದ ವಿರೋಧ ಪಕ್ಷದ ನಾಯಕ, ನನಗೆ ವಿಧಾನಸಭೆಯಲ್ಲಿ ಉಪ ಸಭಾಪತಿಯ ಪಕ್ಕದಲ್ಲಿನ ಕುರ್ಚಿ ನೀಡಿ ಎಂದು ಬಿಜೆಪಿಯಿಂದ ಉಚ್ಛಾಟಿತಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು, ತಮಗೆ ಮತ್ತು ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟಿರುವ ಇತರ ಇಬ್ಬರು ಶಾಸಕರಿಗೆ ಅವರ ಹಿರಿತನವನ್ನು ಪರಿಗಣಿಸಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡುವಂತೆ ಯತ್ನಾಳ್ ಸಭಾಪತಿಗೆ ಮನವಿ ಮಾಡಿದರು.

ಈ ವರ್ಷದ ಆರಂಭದಲ್ಲಿ ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟ ನಂತರ ಯತ್ನಾಳ್, ಎಸ್ ಟಿ ಸೋಮಶೇಖರ್ ಮತ್ತು ಎ ಶಿವರಾಮ್ ಹೆಬ್ಬಾರ್ ಅವರನ್ನು ಹಿಂದಿನ ಬೆಂಚ್‌ಗಳಿಗೆ ವರ್ಗಾಯಿಸಲಾಗಿದೆ. ಹಿರಿಯ ಶಾಸಕರನ್ನು ಹಿಂದಿನ ಬೆಂಚುಗಳಲ್ಲಿ ಕೂರಿಸುವ ಮೂಲಕ ಅವಮಾನಿಸಲಾಗಿದೆ. ಹಿಂದಿನ ಅಧಿವೇಶನದಲ್ಲೂ ಹೀಗೆ ಮಾಡಲಾಗಿತ್ತು.

ನಾವು ಐದರಿಂದ ಆರು ಬಾರಿ ಆಯ್ಕೆಯಾಗಿದ್ದೇವೆ, ನಮ್ಮನ್ನು ಮುಂದಿನ ಸಾಲಿನಲ್ಲಿ ಕೂರಿಸಲು ವ್ಯವಸ್ಥೆ ಮಾಡಬೇಕು ಎಂದು ಯತ್ನಾಳ್ ಹೇಳಿದರು. ಆಸನ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಸ್ಪೀಕರ್ ಗೆ ಮನವಿ ಮಾಡಿದ ಅವರು, ನಾಳೆಯೊಳಗೆ ಈ ವಿಷಯದಲ್ಲಿ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ ಖಾದರ್, ರಾಜಕೀಯದಲ್ಲಿ ಹಿರಿಯರು ಅಥವಾ ಕಿರಿಯರು ಇಲ್ಲ ಎಂದು ಯತ್ನಾಳ್ ಗೆ ಹೇಳಿದರು. ಹಿರಿತನದ ಆಧಾರದ ಮೇಲೆ ಸ್ಥಾನಗಳನ್ನು ಹಂಚಲಾಗುವುದಿಲ್ಲ, ಬಹುಮತ ಹೊಂದಿರುವವರಿಗೆ ಸದನದಲ್ಲಿ ಬೆಂಚುಗಳು ಸಿಗುತ್ತವೆ ಮತ್ತು ಕಡಿಮೆ ಸಂಖ್ಯೆಯ ಬಲವಿರುವವರಿಗೆ ವಿರೋಧ ಪಕ್ಷದ ಬೆಂಚುಗಳು ಸಿಗುತ್ತವೆ ಎಂದು ಅವರು ಹೇಳಿದರು.

ಯತ್ನಾಳ್ ಅವರಿಗೆ ಬಿಜೆಪಿಯಲ್ಲಿದ್ದಾಗ ಮುಂಭಾಗದ ಆಸನವನ್ನು ನೀಡಲಾಗಿತ್ತು ಎಂದು ಹೇಳಿದ ಸ್ಪೀಕರ್, ಈಗ ಅವರು ಪಕ್ಷದಿಂದ ಹೊರಗಿದ್ದೀರಾ ಏನು ಮಾಡಬಹುದು ಎಂದು ಪ್ರಶ್ನಿಸಿದರು. "ನೀವು (ಯತ್ನಾಳ್) ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದ ಭಾಗವಾಗಿದ್ದರೆ, ನಿಮಗೆ ಆಯಾ ಕಡೆಗಳಲ್ಲಿ ಮುಂಚೂಣಿಯ ಸ್ಥಾನ ಸಿಗುತ್ತದೆ" ಎಂದು ಸ್ಪೀಕರ್ ವಿವರಿಸಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸದನದಲ್ಲಿ ಹಾಜರಿದ್ದರೂ, ತಾವು ವಿಧಾನಸಭೆಯಲ್ಲಿ "ನಿಜವಾದ ವಿರೋಧ ಪಕ್ಷದ ನಾಯಕ" ಎಂದು ಹೇಳಿಕೊಂಡರು. ನಾನು ಯಾವುದೇ ಹೊಂದಾಣಿಕೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಯಲ್ಲ. ನಾನು ಯಾರೊಂದಿಗೂ ಯಾವುದೇ Adjustment ಮಾಡಿಕೊಂಡಿಲ್ಲ ಎಂದರು.

ನಾನು ಮುಖ್ಯಮಂತ್ರಿ ಕಚೇರಿಗೆ ಹೋಗಿಲ್ಲ, ಯಾವುದೇ ಸಚಿವರಿಗೆ ಯಾವುದೇ ವಿನಂತಿಗಳನ್ನು ಮಾಡಿಲ್ಲ. ಆದ್ದರಿಂದ ನಾನು ನಿಜವಾದ ವಿರೋಧ ಪಕ್ಷದ ನಾಯಕ ಮತ್ತು ನೀವು ನನಗೆ ಉಪಸಭಾಪತಿಯ ಪಕ್ಕದ ಸ್ಥಾನವನ್ನು ನೀಡಬಹುದು (ಇದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ನಿಗದಿಪಡಿಸಲಾದ ಸ್ಥಾನ)," ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತ-ಯುರೋಪಿಯನ್ ಒಕ್ಕೂಟ ನಡುವೆ 'Mother of All Deals'ಗೆ ಶೀಘ್ರದಲ್ಲೇ ಅಂತಿಮ ಸಹಿ; ಒಪ್ಪಂದ 2027ರಿಂದಲೇ ಶುರು!

ವಿಮಾನ ಅಪಘಾತ: ಟೇಕ್ ಆಫ್ ವೇಳೆ ಜೆಟ್ ಅಪಘಾತ; 7 ಮಂದಿ ಸಾವು, ಬದುಕುಳಿದ ಓರ್ವ ಸಿಬ್ಬಂದಿ!

T20 ವಿಶ್ವಕಪ್‌ಗೂ ಮುನ್ನ PAK ಹೊಸ ಆಟ: ಭಾರತದ ವಿರುದ್ಧದ ಪಂದ್ಯ ಬಹಿಷ್ಕರಿಸುವ ಬೆದರಿಕೆ!

ಮನ್ರೇಗಾ ಹೆಸರು ಬದಲಾವಣೆಗೆ ವಿರೋಧ: ನಾಳೆ ಕಾಂಗ್ರೆಸ್​ನಿಂದ ರಾಜಭವನ ಚಲೋ- DCM ಡಿ.ಕೆ ಶಿವಕುಮಾರ್

WPL ಇತಿಹಾಸದಲ್ಲೇ ಇದೇ ಮೊದಲು: 'ಚೊಚ್ಚಲ ಶತಕ' ಸಿಡಿಸಿ, ಹೊಸ ದಾಖಲೆ ಬರೆದ ಸಿವರ್ ಬ್ರಂಟ್!

SCROLL FOR NEXT