ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಆಯ್ಕೆ ಬಿಜೆಪಿ ಸಂಸದ ಡಾ. ಕೆ ಸುಧಾಕರ್ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವೆ ಮಾತಿನ ಸಮರಕ್ಕೆ ನಾಂದಿಯಾಡಿತ್ತು. ಇನ್ನು ಜಿಲ್ಲಾಧ್ಯಕ್ಷ ಆಯ್ಕೆಯಲ್ಲಿ ಬಿವೈ ವಿಜಯೇಂದ್ರ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಸಂದೀಪ್ ಆಯ್ಕೆಯನ್ನು ಸುಧಾಕರ್ ತೀವ್ರವಾಗಿ ವಿರೋಧಿಸಿದ್ದರು. ಅಲ್ಲದೆ ಬಿಜೆಪಿ ಹೈಕಮಾಂಡ್ ಮೇಲೂ ಒತ್ತಡ ಹೇರಿದ್ದು ಇದೀಗ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಆಯ್ಕಗೆ ಹೈಕಮಾಂಡ್ ತಡೆ ನೀಡಿದೆ. ಅಲ್ಲದೆ ಈ ಬಗ್ಗೆ ಬಿ.ವೈ ವಿಜಯೇಂದ್ರಗೆ ಪತ್ರ ಬರೆದಿರುವ ಬಿಜೆಪಿ ಹೈಕಮಾಂಡ್ ಬಿ.ಸಂದೀಪ್ ಆಯ್ಕೆಗೆ ತಡೆ ನೀಡುವಂತೆ ಸೂಚಿಸಿದೆ. ಇದರೊಂದಿಗೆ ವಿಜಯೇಂದ್ರ ವಿರುದ್ಧ ತೊಡೆತಟ್ಟಿದ ಸುಧಾಕರ್ ತಮ್ಮ ತಾಕತ್ತು ತೋರಿಸಿದ್ದಾರೆ.