ಬಸವರಾಜ ಬೊಮ್ಮಾಯಿ 
ರಾಜಕೀಯ

ರಾಜ್ಯ ಸರ್ಕಾರ "online betting" ಪರವಿದೆ: ಸಂಸದ ಬೊಮ್ಮಾಯಿ ಆಕ್ರೋಶ

ಆನ್‌ಲೈನ್ ಬೆಟ್ಟಿಂಗ್ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೋರಮಂಗಲದ ಕಾವೇರಿ ಕಾಲೋನಿಯಲ್ಲಿರುವ ಗೋಲ್ಡನ್ ಏಸಸ್ ಪೋಕರ್ ರೂಂ'ಗೆ ನುಗ್ಗಿದ ಕನ್ನಡ ಪರ ಸಂಘಟನೆಯ ಸದಸ್ಯರು ಸ್ಥಳದಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ನಿಜವಾಗಲು ಆನ್ ಲೈನ್ ಬೆಟ್ಟಿಂಗ್ ತಡೆದು ಬಡವರು ಅದಕ್ಕೆ ಬಲಿಯಾಗುವುದನ್ನು ತಡೆಯುವ ಕಾಳಜಿ ಇದ್ದರೆ ಸುಪ್ರೀಂ ಕೊರ್ಟ್ ನಲ್ಲಿ ಇರುವ ಕೇಸಿನ ಬಗ್ಗೆ ಕ್ರಮ ವಹಿಸಿ ಕಾನೂನು ಜಾರಿ ಮಾಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿಯವರು ಭಾನುವಾರ ಆಗ್ರಹಿಸಿದ್ದಾರೆ.

ಆನ್‌ಲೈನ್ ಬೆಟ್ಟಿಂಗ್ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೋರಮಂಗಲದ ಕಾವೇರಿ ಕಾಲೋನಿಯಲ್ಲಿರುವ ಗೋಲ್ಡನ್ ಏಸಸ್ ಪೋಕರ್ ರೂಂ'ಗೆ ನುಗ್ಗಿದ ಕನ್ನಡ ಪರ ಸಂಘಟನೆಯ ಸದಸ್ಯರು ಸ್ಥಳದಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.

ಘಟನೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕೋರಮಂಗಲದಲ್ಲಿ ಕನ್ನಡಪರ ಸಂಘಟನೆಗಳು ಕೇಂದ್ರ ಸರ್ಕಾರ ಆನ್ ಲೈನ್ ಬೆಟ್ಟಿಂಗ್ ಬ್ಯಾನ್ ಮಾಡಿದಾಗಲು ಕೂಡ ಅವ್ಯಾಹತವಾಗಿ ಪೊಲಿಸರ ಕಣ್ಣ ಕೆಳಗಡೆ ನಡೆಯುತ್ತಿರುವುದನ್ನು ಬಹಿರಂಗಗೊಳಿಸಿದ್ದಾರೆಂದು ಹೇಳಿದ್ದಾರೆ.

ಇದು ಆನ್ ಲೈನ್ ಬೆಟ್ಟಿಂಗ್ ಮಾಡುವವರು ಮತ್ತು ಪೊಲಿಸರು ಸರ್ಕಾರದ ನಡುವೆ ಇರುವ ಸಂಬಂಧ ಗೊತ್ತಾಗುತ್ತದೆ. ನಮ್ಮ ಸರ್ಕಾರ ಇದ್ದಾಗ ಆನ್ ಲೈನ್ ಬೆಟ್ಟಿಂಗ್ ವಿರುದ್ದ ನಾನ್ ಬೇಲೆಬಲ್ ಕೇಸ್ ಮಾಡಿ ಕಠಿಣ ಕಾನೂನು ಜಾರಿ ಮಾಡಿದ್ದೇವು. ಅದು ಸುಪ್ರೀಂ ಕೋರ್ಟ್ ನಲ್ಲಿದೆ.

ರಾಜ್ಯ ಸರ್ಕಾರಕ್ಕೆ ನಿಜವಾಗಲು ಆನ್ ಲೈನ್ ಬೆಟ್ಟಿಂಗ್ ತಡೆದು ಬಡವರು ಅದಕ್ಕೆ ಬಲಿಯಾಗುವುದನ್ನು ತಡೆಯುವ ಕಾಳಜಿ ಇದ್ದರೆ ಸುಪ್ರೀಂ ಕೊರ್ಟ್ ನಲ್ಲಿ ಇರುವ ಕೇಸಿನ ಬಗ್ಗೆ ಕ್ರಮ ವಹಿಸಿ ಕಾನೂನು ಜಾರಿ ಮಾಡಿ ಶಿಕ್ಷೆಗೆ ಒಳಪಡಿಸಿದರೆ ಅದು ಸಾಧ್ಯವಿದೆ. ಆದರೆ ಎರಡೂವರೆ ವರ್ಷವಾದರೂ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದೇ ಈ ಸರ್ಕಾರ ಸಂಪೂರ್ಣ ಆನ್ವಲೈನ್ ಬೆಟ್ಟಿಂಗ್ ಪರ ಇದೆ ಎನ್ನುವುದು ಗೊತ್ತಾಗುತ್ತದೆ ಇದನ್ನು ತೀರ್ವವಾಗಿ ಖಂಡಿಸುತ್ತೇವೆ.

ಮತ್ತೆ ಎಲ್ಲ ಬಡವರ, ಯುವಕರ ಪರವಾಗಿ ಆನ್ ಲೈನ್ ಬೆಟ್ಟಿಂಗ್ ಬ್ಯಾನ್ ಮಾಡುವ ಕೇಂದ್ರದ ಕಾನೂನು ಜಾರಿ ಮಾಡಬೇಕು ಮತ್ತು ಕರ್ನಾಟಕದ ಕಾನೂನಿಗೆ ಸುಪ್ರೀಂ ಕೋರ್ಟ್ ನಲ್ಲಿ ಕಾನೂನಾತ್ಮಕ ಹೋರಾಟ ಮಾಡಿ ಅದಕ್ಕೆ ಶಕ್ತಿ ತುಂಬಬೇಕು ಎಂದು ಆಗ್ರಹಿಸುತ್ತೇನೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜೈಪುರ: ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಎಂಟು ರೋಗಿಗಳು ಸಜೀವ ದಹನ, ಮೂವರ ಸ್ಥಿತಿ ಗಂಭೀರ

Bihar Assemebly Election: ಚುನಾವಣಾ ಆಯೋಗದಿಂದ ಸಂಜೆ 4 ಗಂಟೆಗೆ ಮುಹೂರ್ತ ಫಿಕ್ಸ್ !

ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್ಚುತ್ತಿದೆ ಜನಾಕ್ರೋಶ, ಆಡಳಿತ ವಿರೋಧಿ ಅಲೆ: ಜಾತಿ ಸಮೀಕ್ಷೆ ವೇಳೆ ಬಹಿರಂಗ!

ಏಕದಿನ ವಿಶ್ವಕಪ್: "Bh***diki ಕಣ್ಣು ತೋರಿಸ್ತಾಳೆ': ಪಾಕ್ ಸ್ಪಿನ್ನರ್ ವಿರುದ್ಧ ಹರ್ಮನ್ ಪ್ರೀತ್ ಕೌರ್ ಕೆಂಡ

ಹೈಕೋರ್ಟ್ ಚಾಟಿ, ಜಿಲ್ಲಾಡಳಿತದ ಖಡಕ್ ವಾರ್ನಿಂಗ್: ಕೊನೆಗೂ Sambhal ಮಸೀದಿ ತೆರವು ಮಾಡಿದ 'ಮುಸ್ಲಿಮರು'

SCROLL FOR NEXT