ಪ್ರತಾಪ್ ಸಿಂಹ 
ರಾಜಕೀಯ

'ನೆಹರು ಮರಿ ಮೊಮ್ಮಗಳ ಹೆಸರು ಇಟ್ಕೊಂಡಿರುವ ನಿಮ್ಮಿಂದ RSS ಬ್ಯಾನ್ ಅಸಾಧ್ಯ; ಜಮೀರ್‌ನ ಬಿಳಿ ಟೋಪಿ ಸಾಬಣ್ಣ ಅಂತ ಕರಿತೀರಾ?'

ಪ್ರಿಯಾಂಕ್ ಖರ್ಗೆ ಅವರೇ ಆರ್‌ಎಸ್‌ಎಸ್ ಬ್ಯಾನ್ ಮಾಡುವ ವಿಚಾರವನ್ನು ಮರೆತು ಬಿಡಿ. ನೆಹರು ಕೈಯಲ್ಲೇ ಆಗಿಲ್ಲ. ಇನ್ನೂ ನೆಹರು ಮರಿ ಮೊಮ್ಮಗಳ ಹೆಸರು ಇಟ್ಟುಕೊಂಡಿರುವ ನಿಮ್ಮ ಕೈಯಲ್ಲಿ ಇದು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೈಸೂರು: ನೆಹರು ಮರಿ ಮೊಮ್ಮಗಳ ಹೆಸರು ಇಟ್ಕೊಂಡಿರುವ ನಿಮ್ಮ ಕೈಯಲ್ಲಿ ಆರ್‌ಎಸ್‌ಎಸ್ ಬ್ಯಾನ್ ಸಾಧ್ಯವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕ್ ಖರ್ಗೆ ಅವರೇ ಆರ್‌ಎಸ್‌ಎಸ್ ಬ್ಯಾನ್ ಮಾಡುವ ವಿಚಾರವನ್ನು ಮರೆತು ಬಿಡಿ. ನೆಹರು ಕೈಯಲ್ಲೇ ಆಗಿಲ್ಲ. ಇನ್ನೂ ನೆಹರು ಮರಿ ಮೊಮ್ಮಗಳ ಹೆಸರು ಇಟ್ಟುಕೊಂಡಿರುವ ನಿಮ್ಮ ಕೈಯಲ್ಲಿ ಇದು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಿಯಾಂಕ್ ಖರ್ಗೆ 3 ತಿಂಗಳಿಗೊಮ್ಮೆ ಆರ್‌ಎಸ್‌ಎಸ್ ಬೈಯ್ದು ತಮ್ಮ ಅಸ್ತಿತ್ವ ತೋರಿಸುವ ಪ್ರಯತ್ನ ಮಾಡಿದ್ದಾರೆ ಅಷ್ಟೆ. ಎಮ್ಮೆ ಮೇಲೆ ಮಳೆ ಸುರಿದರೆ ಪ್ರಯೋಜನವಿಲ್ಲ. ಅದೇ ರೀತಿ ಪಿಯುಸಿ ಫೇಲ್ ಆಗಿರುವ ಪ್ರಿಯಾಂಕ್ ಖರ್ಗೆಗೆ ಎಷ್ಟೇ ಬುದ್ಧಿ ಹೇಳಿದರು ಅರ್ಥವಾಗಲ್ಲ. ಪ್ರಚಾರದ ಹುಚ್ಚು, ಗೀಳು ಜಾಸ್ತಿಯಾಗಿ ಈ ರೀತಿ ಆಡ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಖರ್ಗೆ ಕುಟುಂಬ ಕಲಬುರಗಿಯನ್ನು ಕೊಚ್ಚೆ ಮಾಡಿದೆ. ಮೈಸೂರಲ್ಲಿ ಅತ್ಯಾಚಾರಕ್ಕೆ ಒಳಗಾದ ಹಕ್ಕಿ-ಪಕ್ಕಿ ಜನಾಂಗದ ಬಾಲಕಿ ಕಲಬುರಗಿ ಮೂಲದವರು. ಆ ಬಾಲಕಿ ಬಗ್ಗೆ ಪ್ರಿಯಾಂಕ್ ಧ್ವನಿ ಎತ್ತಿದ್ರಾ? ನಿಮ್ಮ ಕ್ಷೇತ್ರದ ಜನರಿಗೆ ಅಧಾರ್ ಕಾರ್ಡ್ ಕೊಡಿಸುವ ಯೋಗ್ಯತೆ ಇಲ್ಲ. ನೀವು ಆರ್‌ಎಸ್‌ಎಸ್ ಬಗ್ಗೆ ಮಾತಾಡ್ತೀರಾ? ಪಿಎಸ್‌ಐ ಹಗರಣ, ಬಿಟ್ ಕಾಯಿನ್ ಹಗರಣ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಿದ್ರಿ? ಈಗ ಅದನ್ನು ಸಾಬೀತು ಮಾಡಲು ಆಗ್ತಿಲ್ಲ ಆಕ್ರೋಶ ಹೊರಹಾಕಿದ್ದಾರೆ.

ಪ್ರಿಯಾಂಕ್ ಪಿಯುಸಿ ಫೇಲ್ ಆಗಿ ಅನಿಮೇಷನ್ ಸರ್ಟಿಫಿಕೇಟ್ ಇಟ್ಟುಕೊಂಡು ಓಡಾಡುತ್ತಿದ್ದಾರೆ. ನೀವಂತೂ ಓದಿಲ್ಲ, ನಿಮ್ಮ ಕ್ಷೇತ್ರದ ಮಕ್ಕಳು ಓದುವಂತೆ ಮಾಡುವ ವಾತಾವರಣವನ್ನೂ ಸೃಷ್ಟಿ ಮಾಡ್ತಿಲ್ಲ. ನಿಮ್ಮ ಖಾತೆಯಲ್ಲಿ ಏನೂ ಕಡಿದು ಕಟ್ಟೆ ಹಾಕಿದ್ದೀರಾ ಹೇಳಿ ಎಂದು ವಾಗ್ದಾಳಿ ಮಾಡಿದ್ದಾರೆ.

ಸ್ಥಳೀಯ ಶಾಸಕರಿಗೆ, ಸಂಸದರಿಗೆ ಗೌರವ ಕೊಡಿ. ಈ ಗುಂಪಲ್ಲಿ ಜಮೀರ್ ಕೂತಿದ್ರೆ ಹೇ ಬಿಳಿ ಟೋಪಿ ಸಾಬಣ್ಣ ಬಾ ಅಂತಾ ಕರೀತಿರಾ? ಕರೆಯುವ ಧಮ್ ಇದ್ಯಾ? ಕುಸುಮಾ ಅವರನ್ನು ನಿಮಗೆ ಬೇಕಾದರೆ ಎಂಎಲ್ಸಿ ಮಾಡಿಸಿ, ರಾಜ್ಯಸಭೆ ಸ್ಥಾನ ಕೊಡಿಸಿ. ಇದನ್ನು ಬಿಟ್ಟು ಸ್ಥಳೀಯ ಶಾಸಕರಿಗೆ ಯಾಕೆ ಕಿರುಕುಳ ಕೊಡ್ತೀರಾ?

2028ಕ್ಕೆ ಡಿ.ಕೆ.ಶಿವಕುಮಾರ್ ಕೂಡ ಜಾಬ್ ಲೇಸ್ ಆಗುತ್ತಾರೆ. ಆಗ ಅವರನ್ನು ಇದೇ ರೀತಿ ನಡೆಸಿಕೊಂಡರೆ ಹೇಗಿರುತ್ತದೆ? ಕಾಂಗ್ರೆಸ್‌ನಲ್ಲಿ ಸೂಟ್‌ಕೇಸ್ ಯಾರು ಜಾಸ್ತಿ ಕಳುಹಿಸ್ತಾರೋ ಅವರು ಅಧಿಕಾರದಲ್ಲಿ ಮುಂದುವರಿಯುತ್ತಾರೆ. ಇದು ಕಾಂಗ್ರೆಸ್‌ನ ಹೈಕಮಾಂಡ್‌ನ ಸಂಸ್ಕೃತಿ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನನಗೇನೂ ಬೇಡ, ಯಾವುದಕ್ಕೂ ಆತುರ ಪಡಲ್ಲ' ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ: ಡಿಕೆ ಶಿವಕುಮಾರ್

ನನ್ನಿಂದ ತಪ್ಪಾಗಿದೆ... ವಿಷಾದಿಸುತ್ತೇನೆ: ಮಾಜಿ ನ್ಯಾ. ಸಂತೋಷ್ ಹೆಗ್ಡೆ

ಭಾರತದ GDP ಅಚ್ಚರಿಯ ಜಿಗಿತ: ಎರಡನೇ ತ್ರೈಮಾಸಿಕದಲ್ಲಿ ಶೇ. 8.2 ರಷ್ಟು ಬೆಳವಣಿಗೆ

ಗೋವಾದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಪ್ರೆಸ್ಟೀಜ್ ಫಾಲ್ಕನ್ ಸಿಟಿ: ಕಲುಷಿತ ನೀರಿನಿಂದ ಮಗು ಸಾವು, ಸೋಶಿಯಲ್ ಮೀಡಿಯಾದಲ್ಲಿ ವದಂತಿ, ಅಧಿಕಾರಿಗಳು ಹೇಳಿದ್ದೇನು?

SCROLL FOR NEXT