ಹುಬ್ಬಳ್ಳಿಯಲ್ಲಿ ನಡೆದ ವೀರಶೈವ-ಲಿಂಗಾಯತ ಏಕತಾ ಸಮಾವೇಶದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು 
ರಾಜಕೀಯ

ಸರ್ಕಾರದ ಜಾತಿ ಸಮೀಕ್ಷೆ: ಧರ್ಮ, ಜಾತಿ ಸ್ಥಾನಮಾನದ ಗೊಂದಲದಲ್ಲಿ ವೀರಶೈವ-ಲಿಂಗಾಯತ ಸಮುದಾಯ

ಸಮಾವೇಶದಲ್ಲಿ ಕೊನೆಗೆ ವೀರಶೈವ-ಲಿಂಗಾಯತರನ್ನು ಜಾತಿ ಅಂಕಣದಲ್ಲಿ ಮತ್ತು ಆಯಾ ಪಂಗಡಗಳನ್ನು ಉಪ-ಜಾತಿ ಅಂಕಣದಲ್ಲಿ ನೋಂದಾಯಿಸುವ ಬಗ್ಗೆ ನಾಯಕರು ಸಂದೇಶ ರವಾನಿಸಿದರು.

ಹುಬ್ಬಳ್ಳಿ: ಸಮುದಾಯಗಳ ಮಧ್ಯೆ ಐಕ್ಯತೆ ಮೂಡಿಸುವ ಉದ್ದೇಶದಿಂದ ವೀರಶೈವ ಲಿಂಗಾಯತ ಏಕತಾ ಸಮಾವೇಶ ನಿನ್ನೆ ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗಿತ್ತು. ಸಮಾವೇಶದಿಂದ ಒಗ್ಗಟ್ಟು ಹೆಚ್ಚಾಗುವ ಬದಲು ಮುಂದಿನ ವಾರದಿಂದ ರಾಜ್ಯ ಸರ್ಕಾರ ನಡೆಸಲಿರುವ ಜಾತಿ ಸಮೀಕ್ಷೆಯ ಬಗ್ಗೆ ಮತ್ತಷ್ಟು ಗೊಂದಲ ಸೃಷ್ಟಿಸಿದೆ.

ಸಮಾವೇಶದಲ್ಲಿ ಕೊನೆಗೆ ವೀರಶೈವ-ಲಿಂಗಾಯತರನ್ನು ಜಾತಿ ಅಂಕಣದಲ್ಲಿ ಮತ್ತು ಆಯಾ ಪಂಗಡಗಳನ್ನು ಉಪ-ಜಾತಿ ಅಂಕಣದಲ್ಲಿ ನೋಂದಾಯಿಸುವ ಬಗ್ಗೆ ನಾಯಕರು ಸಂದೇಶ ರವಾನಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು 'ಧರ್ಮ' ಕಾಲಂನ್ನು ವೀರಶೈವ-ಲಿಂಗಾಯತ ಸಮುದಾಯದ ಸದಸ್ಯರ ವಿವೇಚನೆ ಬಿಟ್ಟಿದ್ದಾರೆ.

ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರು ಪರೋಕ್ಷವಾಗಿ 'ಹಿಂದೂ' ತಮ್ಮ ಧರ್ಮವೆಂದು ನಮೂದಿಸುವಂತೆ ಸಮುದಾಯದ ಜನರಿಗೆ ಸೂಚಿಸಿದರು, ಧರ್ಮ ಕಾಲಂನಲ್ಲಿ ವೀರಶೈವ-ಲಿಂಗಾಯತವನ್ನು ನಿರ್ದಿಷ್ಟಪಡಿಸದ ಹೊರತು, ಉಲ್ಲೇಖಿಸುವ ಅಗತ್ಯವಿಲ್ಲ ಎಂಬುದು ಬಿಜೆಪಿ ನಾಯಕರ ವಾದವಾಗಿದೆ.

ರಂಭಾಪುರಿ ಮಠದ ಜಗದ್ಗುರು ಪ್ರಸನ್ನರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಕೂಡ ಈ ಮಾತಿಗೆ ಬೆಂಬಲ ಸೂಚಿಸಿದರು. ಮಹಾಸಭಾ ಉಪಾಧ್ಯಕ್ಷ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ವೀರಶೈವ-ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯಲು ಮಹಾಸಭಾ ದಶಕಗಳಿಂದ ಪ್ರಯತ್ನಿಸುತ್ತಿದೆ, ಆದರೆ ಕೇಂದ್ರ ಸರ್ಕಾರ ಇನ್ನೂ ಬೇಡಿಕೆಯನ್ನು ಪರಿಗಣಿಸಿಲ್ಲ. ಆದ್ದರಿಂದ ಸಮುದಾಯದವರು ತಮ್ಮ ಆತ್ಮಸಾಕ್ಷಿಯಂತೆ ಧರ್ಮವನ್ನು ನಮೂದಿಸುವುದನ್ನು ಅವರ ವಿವೇಚನೆಗೆ ಬಿಡುತ್ತೇವೆ. ಆದರೆ ಜಾತಿ ಕಾಲಂನಲ್ಲಿ, ಅವರು ವೀರಶೈವ-ಲಿಂಗಾಯತ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರು ಹಿಂದೂ ಧರ್ಮದ ಪಟ್ಟಿಗೆ ಒತ್ತಾಯಿಸಿದ್ದಾರೆ. ವೀರಶೈವ-ಲಿಂಗಾಯತ ಒಂದೇ, ಮತ್ತು ಹಿಂದೂ ಧರ್ಮದ ಭಾಗ ಎಂದು ಹೇಳಿದ್ದಾರೆ.

ಬಿಜೆಪಿಯ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಏನು ಮಾಡಬೇಕೆಂಬುದು ಸಂವಿಧಾನ ಮತ್ತು ಈ ನೆಲದ ಆಡಳಿತದ ಚೌಕಟ್ಟಿನೊಳಗೆ ಇರಬೇಕು ಎಂದು ಹೇಳಿದರು. ಅದು ಒಬ್ಬರ ಸ್ವಂತ ಇಚ್ಛೆಯಂತೆ ನಡೆದರೆ, ಅದು ಸಮುದಾಯಗಳ ಏಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಸಮೀಕ್ಷೆಯಲ್ಲಿ ಸೇರಿಸಲಾದ ಜಾತಿಗಳ ಸಂಖ್ಯೆಯ ಬಗ್ಗೆ ಗೊಂದಲವನ್ನು ಬಿಜೆಪಿ ನಾಯಕರು ಪ್ರಸ್ತಾಪಿಸಿದರು, ಸಮಾನತೆಯನ್ನು ತರಲು ಮತ್ತು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಲು ಅಂತಹ ಜಾತಿ ಸಮೀಕ್ಷೆ ಮಾಡಲಾಗುತ್ತಿತ್ತು. ಸರ್ಕಾರ ಸಮೀಕ್ಷೆಯನ್ನು ವಸ್ತುನಿಷ್ಠವಾಗಿ, ಪಾರದರ್ಶಕವಾಗಿ ಮತ್ತು ನಿಖರವಾಗಿ ನಡೆಸಬೇಕು. ಕಾಲಂನಲ್ಲಿ ಸೇರಿಸಲಾದ ಜಾತಿಗಳ ಬಗ್ಗೆ ಉದ್ಭವಿಸಿರುವ ಗೊಂದಲವನ್ನು ನಿವಾರಿಸುವಂತೆ ಅವರು ಸಚಿವ ಖಂಡ್ರೆ ಅವರಿಗೆ ಮನವಿ ಮಾಡಿದರು.

ಧರ್ಮವು ಸೂಕ್ಷ್ಮ ವಿಷಯವಾಗಿರುವುದರಿಂದ, ಸಮುದಾಯದ ಜನರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಜಾಗರೂಕರಾಗಿರಬೇಕು ಮತ್ತು ಮಹಾಸಭಾ ಅದರಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ರಂಭಾಪುರಿ ಶ್ರೀಗಳು ಹೇಳಿದರು. ಮಹಾಸಭಾವು ಕಾನೂನು ತಜ್ಞರ ಸಭೆಯನ್ನು ಕರೆದು ಈ ವಿಷಯದ ಬಗ್ಗೆ ಚರ್ಚಿಸಿ, ಸಾಮಾನ್ಯ ಜನರಲ್ಲಿನ ಗೊಂದಲವನ್ನು ನಿವಾರಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಮಠಾಧೀಶರು ಒತ್ತಾಯಿಸಿದರು.

ಹೊಸ ಧರ್ಮವನ್ನು ಆರಿಸಿಕೊಳ್ಳುವ ಬದಲು, ಅಸ್ತಿತ್ವದಲ್ಲಿರುವ ಧರ್ಮವನ್ನು ಬಲಪಡಿಸಲು ಸಮುದಾಯವು ಒಂದಾಗಬೇಕು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ತಕ್ಷಣ ಅಮೆರಿಕಕ್ಕೆ ಹಿಂತಿರುಗಿ ಇಲ್ಲದಿದ್ದರೆ ಸಿಕ್ಕಿಹಾಕಿಕೊಳ್ಳುತ್ತೀರಿ: H-1B ವೀಸಾ ನೌಕರರಿಗೆ ವಲಸೆ ಅಟೊರ್ನಿ, ಕಂಪೆನಿಗಳ ಎಚ್ಚರಿಕೆ ಸೂಚನೆ !

Caste Census: ಜಾತಿ ಗಣತಿ, ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್! ಕಾರಣವೇನು?

ಭಾರತಕ್ಕೆ ಅಮೆರಿಕದ ಮತ್ತೊಂದು ಹೊಡೆತ! H-1B ವೀಸಾಗಳ ಮೇಲೆ ವಾರ್ಷಿಕ 1 ಲಕ್ಷ ಡಾಲರ್ ಶುಲ್ಕ ವಿಧಿಸುವ ಘೋಷಣೆಗೆ ಟ್ರಂಪ್ ಸಹಿ!

Deepika Student Scholarship: ಅಜೀಂ ಪ್ರೇಮ್‌ಜಿ ಫೌಂಡೇಶನ್‌ ಸಹಯೋಗ: ಈ ಬಾರಿ 37,000 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ!

'Dog Meat' Controversy: ಬೆನ್ನ ಹಿಂದೆ ಮಾತನಾಡುವುದಲ್ಲ, ನೇರಾ ನೇರಾ ಮಾತನಾಡಬೇಕು; ಪಠಾಣ್ ಗೆ ಅಫ್ರಿದಿ ಸವಾಲು!

SCROLL FOR NEXT