ಸತೀಶ್ ಜಾರಕಿಹೊಳಿ 
ರಾಜಕೀಯ

ಹೊಸ ಕ್ರಾಂತಿಗೆ ಮುನ್ನುಡಿ ಬರೆಯದಿದ್ದರೆ ಅಹಿಂದ ದೂರ; ನಮ್ಮ ಸರ್ಕಾರದಲ್ಲೇ ಕೆಲವರು ಭರವಸೆ ಈಡೇರಿಸಲು ಬಿಟ್ಟಿಲ್ಲ: ಸತೀಶ್ ಜಾರಕಿಹೊಳಿ

20 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶ ರಾಜಕೀಯ ಬದಲಾವಣೆಗೆ ಕಾರಣವಾಯಿತು. ಈ ನೆನಪು ಮುಂದಿಟ್ಟುಕೊಂಡು ಏನೆಲ್ಲ ಬದಲಾವಣೆಯಾಗಿದೆ, ಏನೇನು ಆಗಬೇಕು ಎನ್ನುವುದನ್ನು ಚಿಂತಿಸಬೇಕು ಎಂದರು.

ಹುಬ್ಬಳ್ಳಿ: ಅಹಿಂದ ತಮ್ಮ ಪರವಾಗಿದೆ ಎಂದು ಕೆಲ ರಾಜಕಾರಣಿಗಳು ತಿಳಿದುಕೊಂಡಿದ್ದಾರೆ. ಆದರೆ, ಪರಿಸ್ಥಿತಿ ಅವರು ಅಂದುಕೊಂಡಂತಿಲ್ಲ. ಉಂಟಾಗಿರುವ ಸಮಸ್ಯೆಗೆ ಸೂಕ್ತ ಪರಿಹಾರ ನೀಡಿ ಗಟ್ಟಿಗೊಳಿಸಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಬೇಕು. ಇಲ್ಲದಿದ್ದರೆ ಅಹಿಂದ ನಮ್ಮಿಂದ ದೂರವಾಗುತ್ತದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಭಾನುವಾರ ನಗರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅಹಿಂದ ಹೋರಾಟ ಸಾಧನೆ, ಸಂಕಲ್ಪ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಈ ಚಳವಳಿ ನಿರಂತರವಾಗಿ ಕ್ರಿಯಾಶೀಲವಾಗಿರಬೇಕು. 20 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶ ರಾಜಕೀಯ ಬದಲಾವಣೆಗೆ ಕಾರಣವಾಯಿತು. ಈ ನೆನಪು ಮುಂದಿಟ್ಟುಕೊಂಡು ಏನೆಲ್ಲ ಬದಲಾವಣೆಯಾಗಿದೆ, ಏನೇನು ಆಗಬೇಕು ಎನ್ನುವುದನ್ನು ಚಿಂತಿಸಬೇಕು ಎಂದರು.

ಅಹಿಂದ ಸಂಘಟನೆಯನ್ನು ರಾಜಕೀಯ ಲಾಭಕ್ಕಾಗಿ ಮಾಡುತ್ತಿಲ್ಲ, ಜನ ಜಾಗೃತಿಗಾಗಿ ಮಾಡಲಾಗುತ್ತಿದೆ. ಅಹಿಂದ ವರ್ಗವು ಸರಕಾರ ಮತ್ತು ಜನರ ಮಧ್ಯೆ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಭವಿಷ್ಯದ ದಿನಮಾನಗಳಲ್ಲಿ ಏನೇನು ಆಗಬೇಕು ಎನ್ನುವುದನ್ನು ಚಿಂತಿಸಬೇಕು. ಇದು ನಾನು ಮುಖ್ಯಮಂತ್ರಿಯಾಗಬೇಕು, ಅಧಿಕಾರಿಯಾಗಬೇಕು ಎನ್ನುವ ರಾಜಕೀಯ ಕಾರ್ಯಾಗಾರವಲ್ಲ. ನಮ್ಮ ನ್ಯೂನತೆ, ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗುವುದಕ್ಕಾಗಿ ಎಲ್ಲರ ಸಲಹೆ ಸೂಚನೆಗಾಗಿ ಈ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದರೂ ಅಹಿಂದ ವರ್ಗಕ್ಕೆ ಏನೂ ಮಾಡಿಲ್ಲ ಎನ್ನುವ ಟೀಕೆಗಳು ಕೇಳಿ ಬರುತ್ತಿವೆ. ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ನಾವು ಸನ್ನದ್ಧರಾಗಬೇಕಿದೆ. ನಮ್ಮ ಸರ್ಕಾರದಲ್ಲೇ ಕೆಲವರು ಭರವಸೆ ಈಡೇರಿಸಲು ಬಿಟ್ಟಿಲ್ಲ. ಈ ಅವಧಿಯಲ್ಲಿ ಸಾಕಷ್ಟು ಕಲಿತಿದ್ದೇವೆ. ಹೋರಾಟದ ಸ್ವರೂಪ ಬದಲಿಸಿಕೊಳ್ಳಬೇಕಿದೆ. ರಾಜಕೀಯ, ಸಾಮಾಜಿಕ ನ್ಯಾಯದ ಬಗ್ಗೆ ತಿಳಿದುಕೊಳ್ಳಬೇಕು. ಸಾಕಷ್ಟು ಸಭೆ, ಸಮಾವೇಶ ನಡೆಸಿದರೂ ಬದಲಾವಣೆ ಸಾಧ್ಯವಾಗಿಲ್ಲ ಎಂದು ಜಾರಕಿಹೊಳಿ ವಿಷಾದ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಭಾರತದಲ್ಲಿ ಕಳೆದ 8 ತಿಂಗಳಲ್ಲಿ 254 ಹಿಂದೂಗಳು ಮುಸ್ಲಿಂ ಜಿಹಾದಿ ಹಿಂಸಾಚಾರಕ್ಕೆ ಬಲಿ: ಎಲ್ಲಿದೆ ನ್ಯಾಯ; VHP

ಬೆಂಗಳೂರು ಜಾತ್ರೆಗೆ ಡೇಟ್‌ ಫಿಕ್ಸ್‌; 10 ದಿನಗಳ ಊರ ಹಬ್ಬಕ್ಕೆ ಉದ್ಯಾನನಗರಿ ಸಜ್ಜು, ಏನೆಲ್ಲಾ ಇರಲಿದೆ? ಇಲ್ಲಿದೆ ವಿವರ...

ಭಾರತೀಯ ವಾಯುಪಡೆಗೆ ವರ್ಷಕ್ಕೆ 36-40 ಹೊಸ ಯುದ್ಧ ವಿಮಾನಗಳ ಅಗತ್ಯ: ವಾಯುಸೇನಾ ಮುಖ್ಯಸ್ಥ

ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಹಣೆಗೆ ಮುತ್ತಿಟ್ಟ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?