ಸಿದ್ದರಾಮಯ್ಯ-ಕೆಎನ್ ರಾಜಣ್ಣ online desk
ರಾಜಕೀಯ

2013-18 ರಲ್ಲಿ ಇದ್ದ ಸಿದ್ದರಾಮಯ್ಯ ಈಗ ಇಲ್ಲ- ಅವರೀಗ ಅಧಿಕಾರ ಬಿಟ್ಟು ಕೊಡೋಕೆ 'ಸಿದ್ಧ'ರಾಮಯ್ಯ: ಕೆ.ಎನ್ ರಾಜಣ್ಣ

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನ ನೀಡಿರುವ ಕೆಎನ್ ರಾಜಣ್ಣ, ಈ ಹಿಂದೆ ಇದ್ದ ಸಿದ್ದರಾಮಯ್ಯ ಅಂದರೆ 2013-2018 ರ ಅವಧಿಯಲ್ಲಿದ್ದ ಸಿದ್ದರಾಮಯ್ಯ ಈಗ ಇಲ್ಲ ಎಂದು ಕೆಎನ್ ರಾಜಣ್ಣ...

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆಗಳು ಜೋರಾಗುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿರುವ ಮಾಜಿ ಸಚಿವ ಕೆಎನ್ ರಾಜಣ್ಣ ನೀಡಿರುವ ಹೇಳಿಕೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನ ನೀಡಿರುವ ಕೆಎನ್ ರಾಜಣ್ಣ, ಈ ಹಿಂದೆ ಇದ್ದ ಸಿದ್ದರಾಮಯ್ಯ ಅಂದರೆ 2013-2018 ರ ಅವಧಿಯಲ್ಲಿದ್ದ ಸಿದ್ದರಾಮಯ್ಯ ಈಗ ಇಲ್ಲ. ಈಗ ಸಿದ್ದರಾಮಯ್ಯ ರಾಹುಲ್ ಗಾಂಧಿ ಹೇಳಿದಂತೆ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಚಿವ ರಾಜಣ್ಣ ಈ ಹಿಂದೆ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದು, ಯಾರೋ ಮಾಟ-ಮಂತ್ರ ಮಾಡಿಸಿರಬೇಕು ಎಂದು ಹೇಳುವ ಮೂಲಕ ಸುದ್ದಿಯಾಗಿದ್ದರು. ಈಗ ಸಿದ್ದರಾಮಯ್ಯ ಈ ಹಿಂದೆ ಇದ್ದಂತೆ ಇಲ್ಲ. ಸಿಎಂ ಕುರ್ಚಿ ಬಿಡೋಕು ಸಿದ್ದರಾಮಯ್ಯ ರೆಡಿಯಾಗಿದ್ದಾರೆ ಎನ್ನುವ ಅಚ್ಚರಿಯ ಕೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತಾಡಿದ ಶಾಸಕ ಕೆ ಎನ್ ರಾಜಣ್ಣ, ನಾಯಕತ್ವ ಬದಲಾವಣೆ ವಿಚಾರದಲ್ಲಿ ಗೊಂದಲ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರೆಯೋಕು ಸಿದ್ಧರಾಗಿದ್ದು, ಅಧಿಕಾರ ಬಿಟ್ಟು ಕೊಡಲು ಕೂಡ ರೆಡಿಯಾಗಿದ್ದಾರೆ ಎಂಬ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಅಧಿಕಾರ ಬದಲಾವಣೆಯ ವಿಷಯವಾಗಿ ಗೊಂದಲ ಮುಂದುವರಿಯಲು ಹೈಕಮಾಂಡ್ ಅವಕಾಶ ನೀಡಬಾರದು ಎಂದು ಆಗ್ರಹಿಸಿರುವ ರಾಜಣ್ಣ, ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಸಿದ್ದರಾಮಯ್ಯ ಬದ್ದರಾಗಿದ್ದಾರೆ. ಇದು ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಅಲ್ಲ ಪಕ್ಷ ಹಾಗೂ ರಾಜ್ಯದ ಜನತೆಯ ಭವಿಷ್ಯವೇ ಇದರಲ್ಲಿದೆ ಎಂದು ಹೇಳಿದ್ದಾರೆ.

ಸೂಕ್ತ ನಿರ್ಧಾರದ ನಿರೀಕ್ಷೆ

ಹೀಗಾಗಿ ಹೈಕಮಾಂಡ್ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ. ರಾಹುಲ್ ಗಾಂಧಿ ಹೇಳಿದ್ದನ್ನು ಪಾಲನೆ ಮಾಡುತ್ತೇನೆ, ಆಗಲೂ ನಿಮ್ಮೆಲ್ಲರ ಸಹಕಾರ ಇರಬೇಕು ಎಂದು ಸಿಎಂ ಹೇಳಿದ್ದಾರೆ. ರಾಹುಲ್ ಗಾಂಧಿ ಏನು ತೀರ್ಮಾನ ಕೊಡ್ತಾರೆ ಅದರಂತೆ ನಡೆಯೋಣ ಎಂಬ ನಿರ್ಧಾರಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ ಎಂದು ರಾಜಣ್ಣ ತಿಳಿಸಿದ್ದಾರೆ.

ಅಧಿಕಾರ ಶಾಶ್ವತವಲ್ಲ, ಅಧಿಕಾರ ಕಳೆದುಕೊಂಡವರು ಮತ್ತೆ ಗಳಿಸ್ತಾರೆ. ರಾಹುಲ್ ನಿರ್ದೇಶನದಂತೆ ಹೋಗಬೇಕು ಎನ್ನುವುದು ಮುಖ್ಯಮಂತ್ರಿಗಳ ಮನಸ್ಥಿತಿಯಾಗಿದೆ. ಆದರೆ ಸಿದ್ದರಾಮಯ್ಯ ಅವರೇ ಮುಂದುವರೆಯಬೇಕು ಅನ್ನೋದು ನಮ್ಮ ಅಭಿಪ್ರಾಯ. ಇದನ್ನೇ ನಾವೆಲ್ಲಾ ಹೈಕಮಾಂಡ್​​ಗೂ ಹೇಳಿದ್ದೇವೆ ಎಂದು ರಾಜಣ್ಣ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Liquor Scam: ನ್ಯಾ.ಸ್ವರ್ಣ ಕಾಂತ ಶರ್ಮಾ ಮುಂದೆ ವಿಚಾರಣೆಗೆ ಹಾಜರಾಗಲ್ಲ: ಕೇಜ್ರಿವಾಲ್ ಬೆನ್ನಲ್ಲೇ ಕೋರ್ಟ್ ಬಹಿಷ್ಕರಿಸಿದ ಸಿಸೋಡಿಯಾ..!

ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ಹಿಡಿತ: ಟೆಹ್ರಾನ್ ಷರತ್ತುಗಳಿಗೆ ‘NO’ ಎಂದ ಅಮೆರಿಕಾ; ಸಂದಿಗ್ಧ ಸ್ಥಿತಿಯಲ್ಲಿ ಶಾಂತಿ ಮಾತುಕತೆ

ಟ್ರಂಪ್ ಕೈಗೆ ಗಾಯ, ಬಣ್ಣ ಬದಲಾವಣೆ: ಫೋಟೋ ವೈರಲ್, ಅಮೆರಿಕಾ ಅಧ್ಯಕ್ಷರ ಆರೋಗ್ಯ ಕುರಿತು ಊಹಾಪೋಹ ಶುರು..!

ಟೂರ್ನಿಗೆ ಕೋಟಿ ಕೋಟಿ ಖರ್ಚು ಆದರೆ, ಬಿಲ್ ಬಾಕಿಯ ಕೋಪ; ಚಿನ್ನಸ್ವಾಮಿ ಕ್ರೀಡಾಂಗಣದ 240 CCTV ಗಳ ಆಪ್ಟಿಕಲ್ ಫೈಬರ್ ಕೇಬಲ್‌ ಗೆ ಕತ್ತರಿ!

ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಕು: ಸರ್ಕಾರಿ ಶಾಲೆಗಳ ಬಲವರ್ಧನೆಗೆ 8 ಗ್ಯಾರಂಟಿಗಳ ಘೋಷಣೆ..!

SCROLL FOR NEXT