ಛಲವಾದಿ ನಾರಾಯಣಸ್ವಾಮಿ 
ರಾಜಕೀಯ

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಡಿಯೋ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು: ಬಹುನಿರೀಕ್ಷಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಕಳೆದ ಸೋಮವಾರ ವಿಸ್ತರಣೆಯಾಗಿದ್ದು, 19 ಕಾಂಗ್ರೆಸ್ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇ

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ, ಸಂಪುಟ ವಿಸ್ತರಣೆ ಹಾಗೂ ‘ಪೇಮೆಂಟ್ ಸೀಟ್’ ಹಂಚಿಕೆ ಕುರಿತು ಶಾಸಕ ಆರ್. ಬಿ. ತಿಮ್ಮಾಪುರ ಮತ್ತು ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ ಅವರದ್ದು ಎನ್ನಲಾದ ಆಡಿಯೋ ಸಂಭಾಷಣೆ ಇದೀಗ ವೈರಲ್ ಆಗಿದೆ.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಡಿಯೋ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಆಡಿಯೋ ಸಂಭಾಷಣೆ ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತವನ್ನು ಮತ್ತೆ ಬೀದಿಗೆ ತಂದಿದ್ದು, ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

ಕಳಂಕಿತರಿಗೆ ಹೆಚ್ಚು ಹಣ ನೀಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ. ವಾಲ್ಮೀಕಿ ನಿಗಮ ಹಗರಣದ ಕಳಂಕಿತರಾಗಿದ್ದ ನಾಗೇಂದ್ರಗೆ ಸಚಿವ ಸ್ಥಾನ ನೀಡಲಾಗಿದೆ. ಹಗರಣದ ಬಗ್ಗೆ ನಾಗೇಂದ್ರ ಎಲ್ಲರ ಹೆಸರು ಹೇಳುತ್ತೇನೆ ಅಂತ ಹೇಳಿದ್ರಂತೆ. ಹೀಗಾಗಿ ನಾಗೇಂದ್ರರನ್ನು ಸಚಿವರನ್ನಾಗಿ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇನ್ನೊಬ್ಬರು ನನ್ನ ಮರ್ಯಾದೆ ಪ್ರಶ್ನೆ ಅಂತ ಹೆಚ್ಚು ಹಣ ಕೊಟ್ಟಿದ್ದಾರಂತೆ. ಹೆಚ್ಚು ಹಣ ನೀಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ವಿಚಾರದಲ್ಲಿ ಹಿಂದೆ ನಾವು ಮಾಡಿದ್ದ ಆರೋಪ ಈಗ ಸಾಬೀತಾಗಿದೆ ಆಡಿಯೋದಲ್ಲಿ ಮಾತಾಡಿರುವುದು ತಿಮ್ಮಾಪುರ ಮತ್ತು ನಂಜಯ್ಯನಮಠ ಇಬ್ಬರೂ ಕಾರಿನಲ್ಲಿ ಮಾತಾಡಿರೋ ಆಡಿಯೋ ರೆಕಾರ್ಡ್ ಮಾಡಲಾಗಿದೆ ಎಂದರು.

ಈಗ ನಾಗೇಂದ್ರ ದೆಹಲಿಗೆ ಹೋಗದಂತೆ ಕೊರ್ಟ್ ಆದೇಶಿಸಿದೆ. ಇಂತಹ ಕಳಂಕಿತರು ಸಂಪುಟದಲ್ಲಿ ಇರಲು ಸಾಧ್ಯವೇ ಇಲ್ಲ .ನಾಗೇಂದ್ರ ರಾಜೀನಾಮೆ ಪಡೆಯುವವರೆಗೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಅಷ್ಟಕ್ಕೂ ಆಡಿಯೋದಲ್ಲಿ ಇರುವುದೇನು?

ಆಡಿಯೋದಲ್ಲಿ ಬಳ್ಳಾರಿಯ ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಟ್ಟಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʼನಾಗೇಂದ್ರ ಅವರ ಮೇಲೆ ಕೇಸ್ ಇದ್ದರೂ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ನಾವು ಯಾವ ರೀತಿಯಾಗಿ ಜನಕ್ಕೆ ಮುಖ ತೋರಿಸಬೇಕು. ಹಣ ಕೊಟ್ಟು ಸಚಿವ ಸ್ಥಾನ ನೀಡಲಾಗಿದೆʼ ಎಂದು ಮಾತುಕತೆ ನಡೆಸಲಾಗಿದೆ. ಅಲ್ಲದೆ, ಸಂಭಾಷಣೆಯಲ್ಲಿ ಎಚ್.ಕೆ.ಪಾಟೀಲ್‌ಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕ ಪ್ರದೇಶದಲ್ಲಿ ಪಕ್ಷ ಸಂಘಟನೆ ಮಾಡಿದ್ದೀರಿ, ನಿಮಗೆ ಸಚಿವ ಸ್ಥಾನ ನೀಡಬೇಕಿತ್ತು ಎಂದು ಆರ್.ಬಿ.ತಿಮ್ಮಾಪುರ ಅವರನ್ನು ಉಲ್ಲೀಖಿಸಿ ಹೇಳಲಾಗಿದೆ.

ಕಾಂಗ್ರೆಸ್ ಪಕ್ಷದ ವಿರುದ್ದವೇ ಮುಖಂಡರೇ ಅಸಮಾಧಾನ ಹೂರಹಾಕಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ. ವೈರಲ್‌ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಥಿಯೋಪಿಯನ್ ಏರ್‌ಲೈನ್ಸ್‌ನ ಮಾಜಿ ಮುಖ್ಯಸ್ಥ ಟೆವೊಲ್ಡೆ Air India ನೂತನ CEO!

KAS ಪರೀಕ್ಷೆಯಲ್ಲೂ ಅಕ್ರಮ: 25 ಮಾರ್ಕ್ಸ್‌ಗೆ ₹1.5 ಕೋಟಿ ಡಿಮ್ಯಾಂಡ್; ಲಂಚ ಕೊಟ್ಟ ಅಭ್ಯರ್ಥಿ ಹೆಸರು ಸಮೇತ ದೂರು!

ಸಿಜೆಪಿ ಪ್ರತಿಭಟನೆ ವೇಳೆ ಜಂತರ್ ಮಂತರ್ ನಲ್ಲಿ ಉಗ್ರ ದಾಳಿಗೆ ಪಾಕ್ ಪ್ರಯತ್ನ: ISI ಬೆಂಬಲಿತ ಭಯೋತ್ಪಾದಕ ಮಾಡ್ಯೂಲ್‌ ಭೇದಿಸಿ ಪಂಜಾಬ್ ಪೊಲೀಸ್!

Pak ಆಟಗಾರನ ಬೆನ್ನಲ್ಲೇ ಬಾಂಗ್ಲಾದೇಶದ ಬೌಲರ್ ಖರೀದಿಸಿದ Kavya Maran ಒಡೆತನದ ಸನ್‌ರೈಸರ್ಸ್, ಅಭಿಮಾನಿಗಳ ಆಕ್ರೋಶ!

ಆಡಿಯೋದಲ್ಲಿ ನನ್ನ ಹೆಸರು ಇರಬಹುದು, ಆದ್ರೆ...: ವೈರಲ್ ಕ್ಲಿಪ್ ಬಗ್ಗೆ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಸ್ಪಷ್ಟನೆ; ಹೇಳಿದ್ದೇನು?