ಡಿ.ಕೆ ಶಿವಕುಮಾರ್ ಮತ್ತು ಎಚ್ .ಡಿ ದೇವೇಗೌಡ 
ರಾಜಕೀಯ

ದೇವೇಗೌಡರಿಗೆ 'ಮಣ್ಣಿನ ಮಗ' ಬಿರುದು ಸುಮ್ಮನೆ ಬಂದಿಲ್ಲ; ನನ್ನದು ಧರ್ಮರಾಯನ ಧರ್ಮತ್ವ: ಡಿ.ಕೆ ಶಿವಕುಮಾರ್

ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಪರಿಚಯಿಸುವಾಗ ಯತೀಂದ್ರ ಅವರ ಹೆಸರನ್ನು ಹೇಳಿ, "ನಮ್ಮ ಹೊಸ ಹೀರೋ. ನಮ್ಮ ನಾಯಕ" ಎಂದು ಸಿಎಂ ಬೆನ್ನುತಟ್ಟಿದರು.

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರಿಗೆ ಮಣ್ಣಿನ ಮಗ ಎನ್ನುವ ಬಿರುದು ಸುಮ್ಮನೆ ಬಂದಿಲ್ಲ. ಅವರು ನಾಡಿನ ರೈತರ ಪರವಾಗಿ ಅಪಾರ ಹೋರಾಟ ಮಾಡಿದ್ದಾರೆ. ಅನೇಕ ನೀರಾವರಿ ಯೋಜನೆಗಳನ್ನು ರೂಪಿಸಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ವಿಧಾನ ಪರಿಷತ್ ನಲ್ಲಿ ಮಾತನಾಡಿದ ಅವರು, ದೇವೇಗೌಡರ ರೀತಿ ಛಲ ಇರಬೇಕು. ಈ ಇಳಿಯವಯಸ್ಸಿನಲ್ಲೂ ಹೇಗೆ ಹೋರಾಟ ಮಾಡುತ್ತಿದ್ದಾರೆ, ಅದು ನಮ್ಮೆಲ್ಲರಿಗೂ ಸ್ಫೂರ್ತಿ ಎಂದರು. ಬೆಂಗಳೂರಿನಲ್ಲಿ ಮೊದಲ ಮೇಲ್ಸೇತುವೆ ನಿರ್ಮಾಣ ಮಾಡಿದ್ದು ಕೂಡ ದೇವೇಗೌಡ ಅವರೇ. ಕುಮಾರಸ್ವಾಮಿ ಹಾಗೂ ನಮ್ಮ ನಡುವೆ ರಾಜಕೀಯ ವೈರುಧ್ಯ ಇರಬಹುದು. ಆದರೆ, ಅವರ ಪೆರಿಫೆರಲ್ ರಿಂಗ್ ರಸ್ತೆ, ಬಿಡದಿ ಸೇರಿದಂತೆ 5 ಟೌನ್ ಶಿಪ್ ನಿರ್ಮಾಣದಂಥ ಯೋಜನೆಗಳನ್ನು ನಾನು ಒಪ್ಪಿಕೊಳ್ಳುತ್ತೇನೆ.

ಬೆಂಗಳೂರಿನ ಬೆಳವಣಿಗೆಗೆ ಅವರ ಅಪಾರ ಕೊಡುಗೆ. ಫೆರಿಫೆರಲ್ ರಿಂಗ್ ರೋಡ್ -2 ಯೋಜನೆ ರೂಪಿಸಿದರು. ಅವರಿಗೆ ಸಮಯದ ಅಭಾವವೋ, ತೊಡಕುಗಳು ಎದುರಾಯಿತೋ ಏನೋ ಯೋಜನೆ ಜಾರಿ ಮಾಡಲಾಗಲಿಲ್ಲ" ಎಂದರು.

ಜೀವನದಲ್ಲಿ ಯಶಸ್ಸು ಸಿಗಬೇಕಾದರೆ. ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನ ಗುರಿ ಇರಬೇಕು, ವಿಧುರನ ನೀತಿ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣನ ತಂತ್ರ ಇರಬೇಕು" ಎಂದ ಸಿಎಂ ಗೆ ಪ್ರತಿಪಕ್ಷದವರು ಈ ಮಾತನ್ನು ಯತೀಂದ್ರ ಅವರನ್ನು ನೋಡಿ ಹೇಳುತ್ತಿದ್ದೀರಿ ಎಂದು ಕಾಲೆಳೆದರು.

ಅದಕ್ಕೆ ಉತ್ತರಿಸಿದ ಸಿಎಂ ನಾನು ಯತೀಂದ್ರ ‌ಅವರನ್ನು ನೋಡಿ ವಿಧುರನ‌ ನೀತಿ ಎಂದು ಹೇಳಿದೆ. ವಿಧುರನ ನೀತಿಯೂ ಬಹಳ ಮುಖ್ಯ ಎಂದರು. ಆಗ ನಿಮ್ಮದು ಯಾವ ನೀತಿ ಎಂದು ಪ್ರತಿಪಕ್ಷದವರು ಕೇಳಿದಾಗ, "ನನ್ನದು ಧರ್ಮರಾಯನ ಧರ್ಮತ್ವ. ದಾನಶೂರ ಕರ್ಣನ ದಾನತ್ವ, ಅರ್ಜುನನ ಗುರಿ ಹೀಗೆ ಎಲ್ಲಾ ಗುಣ ಇದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ" ಎಂದು ಪುನರುಚ್ಚರಿಸಿದರು.

ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಪರಿಚಯಿಸುವಾಗ ಯತೀಂದ್ರ ಅವರ ಹೆಸರನ್ನು ಹೇಳಿ, "ನಮ್ಮ ಹೊಸ ಹೀರೋ. ನಮ್ಮ ನಾಯಕ" ಎಂದು ಸಿಎಂ ಬೆನ್ನುತಟ್ಟಿದರು.

8 ಸಾವಿರ ಕೋಟಿ ಸಿಎಸ್ ಆರ್ ಅನುದಾನವಿದೆ. ಎಲ್ಲವೂ ದುರ್ಬಳಕೆಯಾಗುತ್ತಿದೆ. ಶೇ.50ರಷ್ಟು ಮೊತ್ತ ವಾಪಸ್ಸು ಪಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ರಾಜ್ಯದ ಪ್ರತಿಯೊಬ್ಬರಿಗೂ ಒಳ್ಳೆಯ ಶಿಕ್ಷಣ, ಉದ್ಯೋಗ ವ್ಯವಸ್ಥೆ ಮಾಡುವ ಗುರಿಯೊಂದಿಗೆ, ಈ ಸಿಎಸ್ ಆರ್ ಅನುದಾನವನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ಹೊಸ ಸಿಎಸ್ ಆರ್ ಯೋಜನೆ ಜಾರಿ ಮಾಡಲು ಸರ್ಕಾರ ಮುಂದಾಗಿದೆ" ಎಂದು ಸದನಕ್ಕೆ ವಿವರಿಸಿದರು.

"ಹಳ್ಳಿಯ ಜನರು ತುತ್ತು ಅನ್ನಕ್ಕಾಗಿ ವಲಸೆ ಹೋಗಬಾರದು ಹಾಗೆಯೇ, ಬೆಂಗಳೂರು ಜನತೆ ಹೊರಗೆ ಹೋಗಬಾರದು. ಅದಕ್ಕಾಗಿ ಪಂಚಾಯಿತಿ ಮಟ್ಟದಲ್ಲೇ ಕಂಪನಿಗಳೇ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಿಎಸ್ ನಿಧಿಯನ್ನು ಬಳಸಿ ಅಭಿವೃದ್ಧಿಗೊಳಿಸುವ ಹೊಸ ನೀತಿಯನ್ನು ರೂಪಿಸುತ್ತಿದ್ದೇವೆ" ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!