ಡಾ ಯತೀಂದ್ರ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್  
ರಾಜಕೀಯ

ಮತ್ತೆ ಭುಗಿಲೆದ್ದ ನಾಯಕತ್ವ ಬದಲಾವಣೆ ಚರ್ಚೆ: ಯತೀಂದ್ರ ಹೇಳಿದ ಮೇಲೆ ಮುಗೀತು- ಡಿಕೆಶಿ ಟಾಂಗ್; Video

ಬಳಿಕ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಯತೀಂದ್ರ ಅವರೇ ಈಗ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಮುಗಿಯಿತು ಎಂದು ತಿರುಗೇಟು ನೀಡಿದರು.

ಮಂಗಳೂರು: ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ. ಈ ಬಗ್ಗೆ ಹೈಕಮಾಂಡ್ ಸ್ಪಷ್ಟವಾಗಿ ಸಿಗ್ನಲ್ ಕೊಟ್ಟಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಬಳಿಕ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಯತೀಂದ್ರ ಅವರೇ ಈಗ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಮುಗಿಯಿತು ಎಂದು ತಿರುಗೇಟು ನೀಡಿದರು.

ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಯತೀಂದ್ರರ ಈ‌ ಹೇಳಿಕೆಯನ್ನು ಗೌರವದಿಂದ ಸ್ವೀಕರಿಸುತ್ತೇನೆ. ಅವರೇ ನಮ್ಮ ಹೈಕಮಾಂಡ್ ಅಂತ ಒಪ್ಪಿಕೊಳ್ಳೋಣ. ಯತೀಂದ್ರ ಅಥವಾ ಶಿವಗಂಗಾ ಹೇಳಿಕೆ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ಈ ಬಗ್ಗೆ ಏನು ಪ್ರತಿಕ್ರಿಯಿಸಬೇಕೋ ಅದನ್ನು ದೆಹಲಿಯಲ್ಲಿ ಪ್ರತಿಕ್ರಿಯಿಸುತ್ತೇನೆ ಎಂದರು.

ಇನ್ನು ಪುತ್ತೂರು ಕಾಂಗ್ರೆಸ್ ಕಚೇರಿ ಶಿಲಾನ್ಯಾಸದಲ್ಲಿ ಮುಸ್ಲಿಂ ಮುಖಂಡರ ಹೆಸರು ಕೈಬಿಟ್ಟ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಕಾಂಗ್ರೆಸ್ ಜಾತಿ ಮೇಲಲ್ಲ ನೀತಿ ಮೇಲೆ ರಾಜಕಾರಣ ಮಾಡುತ್ತದೆ. ನಮಗೆ ಎಲ್ಲಾ ಜಾತಿ, ಧರ್ಮಗಳೂ ಬೇಕು. ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಅಸೂಯೆ ಇರುವವರು ಈ ರೀತಿ ಮಾತನಾಡುತ್ತಾರೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

101 ಕ್ಷಿಪಣಿ ದಾಳಿ ಬೆನ್ನಲ್ಲೇ USS ಅಬ್ರಹಾಂ ಲಿಂಕನ್ ಪಲಾಯನ; ನಮ್ಮ ವ್ಯಾಪ್ತಿಯೊಳಗೆ ಬಂದರೆ, ನಾಶ ಮಾಡ್ತೀವೀ: ಇರಾನ್ ಎಚ್ಚರಿಕೆ!

West Asia crisis ಕುರಿತು ಸರ್ವಪಕ್ಷ ಸಭೆ: 'ಪ್ರಧಾನಿ ಭಾಗವಹಿಸಬೇಕು'; ಪ್ರತಿಪಕ್ಷ, ಬಿಜೆಪಿ ನಡುವೆ ವಾಗ್ವಾದ

'ನನ್ನ ಸಹೋದರನಿಗೆ ಫೋನ್ ಮಾಡಿ, ಆದೇಶ ಪ್ರಶ್ನಿಸಲು ಎಷ್ಟು ಧೈರ್ಯ' ನ್ಯಾಯಾಂಗ ನಿಂದನೆ ವಾರ್ನಿಂಗ್ ನೀಡಿದ CJI! ಏನಿದು ಕೇಸ್?

ಚಿಕ್ಕಮಗಳೂರು 'Love Jihad' ಕೇಸ್: ಮತಾಂತರಕ್ಕೆ ಒತ್ತಾಯ, PU ಹಿಂದೂ ಬಾಲಕಿ ಜೊತೆ SSLC ವಿದ್ಯಾರ್ಥಿ ಲವ್, Pocso ದೂರು!

IPL 2026: ವಿರಾಟ್ ಕೊಹ್ಲಿ ಬೌಲ್ ಮಾಡುತ್ತಾರಾ? ಪೂರ್ವ ತಯಾರಿಯ Video ವೈರಲ್!

SCROLL FOR NEXT