ಸಿಎಂ ಸಿದ್ದರಾಮಯ್ಯ  
ರಾಜಕೀಯ

ದೀರ್ಘಾವಧಿ ಆಯ್ತು, ಈಗ ಪೂರ್ಣಾವಧಿ ಆಸೆ ಬಿಚ್ಚಿಟ್ಟ ಸಿದ್ದರಾಮಯ್ಯ; ಹೈಕಮಾಂಡ್ ಮೇಲೆ ಪೂರ್ಣ ವಿಶ್ವಾಸ ಎಂದ CM; Video

ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ, ನನಗೆ ಹೈ ಕಮಾಂಡ್ ಮೇಲೆ ಪೂರ್ಣ ವಿಶ್ವಾಸ ಇದೆ. ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವು ಇದೆ. ಏನೇ ಆದರೂ ಹೈ ಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಹೈ ಕಮಾಂಡ್ ನಿರ್ಧಾರವೇ ಅಂತಿಮ ಎಂದು ಪುನರುಚ್ಛರಿಸಿದ್ದಾರೆ.

ಮೈಸೂರು: ದೀರ್ಘಾವಧಿ ಸಿಎಂ ಆಗುವ ಮೂಲಕ ದಿವಂಗತ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈಗ ಪೂರ್ಣಾವಧಿ ಸಿಎಂ ಆಗುವ ಆಸೆ ಹುಟ್ಟಿಕೊಂಡಿದೆ.

ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ, ನನಗೆ ಹೈ ಕಮಾಂಡ್ ಮೇಲೆ ಪೂರ್ಣ ವಿಶ್ವಾಸ ಇದೆ. ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವು ಇದೆ. ಏನೇ ಆದರೂ ಹೈ ಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಪುನರುಚ್ಛರಿಸಿದ್ದಾರೆ.

ತಮ್ಮ ರಾಜಕೀಯ ಭವಿಷ್ಯ, ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ ಸಂಭ್ರಮ ಹಾಗೂ ರಾಜ್ಯದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಅಧಿಕಾರದ ಅವಧಿಯ ಬಗ್ಗೆ ಮಾತನಾಡುತ್ತಾ 'ನನಗೆ ಹೈ ಕಮಾಂಡ್ ಮೇಲೆ ಪರಿಪೂರ್ಣ ವಿಶ್ವಾಸ ಇದೆ. ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವು ಇದೆ. ಏನೇ ಆದರೂ ಹೈ ಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಹೈ ಕಮಾಂಡ್ ನಿರ್ಧಾರವೇ ಅಂತಿಮ' ಎಂದರು.

ದಾಖಲೆಗಳ ಬಗ್ಗೆ ನನಗೆ ಗೊತ್ತಿರಲಿಲ್ಲ

ಕರ್ನಾಟಕ ಕಂಡ ಜನಪ್ರಿಯ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಅಧಿಕಾರಾವಧಿಯ ದಾಖಲೆ ಸರಿಗಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, 'ನನಗೆ ದೇವರಾಜ ಅರಸು ದಾಖಲೆಯ ಬಗ್ಗೆ ಅರಿವು ಇರಲಿಲ್ಲ. ಯಾವ ದಾಖಲೆ ಮುರಿಯಬೇಕು ಎಂಬುದು ನನ್ನ ಗಮನದಲ್ಲಿ ಇರಲಿಲ್ಲ. ಜನರ ಆಶೀರ್ವಾದದಿಂದ ಎಲ್ಲವೂ ನಡೆದು ಹೋಗಿದೆ. ಇವತ್ತು ದೇವರಾಜ ಅರಸು ದಾಖಲೆ ಸರಿಗಟ್ಟಿದ್ದೇನೆ. ಆದರೆ ದೇವರಾಜ ಅರಸು ರಾಜಕಾರಣದ ಸಮಯವೇ ಬೇರೆ, ಇವತ್ತಿನ ಸಮಯವೇ ಬೇರೆ. ಜನರ ಆಶೀರ್ವಾದದಿಂದ ಅಷ್ಟೇ ನಾನು ಇಲ್ಲಿಯ ತನಕ ಬಂದಿದ್ದೇನೆ. ಇಲ್ಲಿವರೆಗಿನ ರಾಜಕೀಯ ತೃಪ್ತಿ ಕೊಟ್ಟಿದೆ. ಜನರ ಆಶೀರ್ವಾದದಿಂದ ಎಲ್ಲವೂ ನಡೆದು ಹೋಗಿದೆ. ಜನರಿಗೆ ಇನ್ನಷ್ಟು ಕೆಲಸ ಮಾಡಬೇಕಿದೆ. ನಾನು ಒಂದು ಬಾರಿ ಎಂಎಲ್ಎ ಆದರೆ ಸಾಕು ಅಂದುಕೊಂಡು ರಾಜಕೀಯಕ್ಕೆ ಬಂದವನು. ನಂತರ ಎಂಎಲ್ಎ, ಡಿಸಿಎಂ, ಸಿಎಂ ಎಲ್ಲ ಆದೆ, ದಾಖಲೆಯ ಬಜೆಟ್ ಕೂಡ ಮಂಡಿಸಿದೆ' ಎಂದರು.

ನಾಟಿ ಕೋಳಿ ಪಲಾವ್

ರಾಜ್ಯದ ಹಲವಡೆ ನಿಮ್ಮ ಹೆಸರಿನಲ್ಲಿ ನಾಟಿ ಕೋಳಿ ಪಲಾವ್ ನ್ನು ಅಭಿಮಾನಿಗಳು ಹಂಚುತ್ತಿದ್ದಾರೆ ಎಂದಾಗ, 'ಯಾರು ನಾಟಿ ಕೋಳಿ ಪಲಾವ್ ಹಂಚುತ್ತಿದ್ದಾರೆ ನನಗೆ ಗೊತ್ತಿಲ್ಲ. ನಾನು ಹಳ್ಳಿಯಿಂದ ಬಂದವನು, ಸಹಜವಾಗಿ ನನಗೆ ನಾಟಿ ಕೋಳಿ ಇಷ್ಟ. ನನ್ನಂತೆಯೇ ಹಳ್ಳಿಯಿಂದ ಬಂದವರಿಗೆ ನಾಟಿ ಕೋಳಿ ಊಟ ಇಷ್ಟ ಇರುತ್ತದೆ. ನಾನು ಮೊದಲು ಹೆಚ್ಚು ನಾಟಿ ಕೋಳಿ ತಿನ್ನುತ್ತಿದ್ದೆ, ಈಗ ಕಡಿಮೆ ಮಾಡಿದ್ದೇನೆ. ಇಂದು ಯಾರ್ಯಾರು ಹಂಚಿದ್ದಾರೆ ನನ್ನ ಗಮನದಲ್ಲಿ ಇಲ್ಲ,' ಎಂದು ನಕ್ಕು ಹೇಳಿದರು.

ಸಂಪುಟ ಪುನಾರಚನೆ

ಸಂಕ್ರಾಂತಿ ಹಬ್ಬ ಬಳಿಕ ಸಂಪುಟ ಪುನಾರಚನೆಯ ವದಂತಿ ಬಗ್ಗೆ ಕೇಳಿದಾಗ ಹಾಗೂ ನಿನ್ನೆ ಕೆ.ಸಿ. ವೇಣುಗೋಪಾಲ್ ಭೇಟಿಯಾಗಿ ಏನು ಚರ್ಚಿಸಿದ್ದೀರಿ ಎಂದು ಕೇಳಿದಾಗ, 'ಅವರು ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಹೋಗಿ ದೆಹಲಿಗೆ ಹೋಗುತ್ತಿದ್ದರು, ಹೀಗಾಗಿ ಅವರನ್ನ ಭೇಟಿಯಾಗಿದ್ದೇನೆ ಅಷ್ಟೇ. ಯಾವ ರಾಜಕಾರಣವೂ ಚರ್ಚೆ ಆಗಿಲ್ಲ. ಸಂಪುಟ ಪುನಾರಚನೆ ಬಗ್ಗೆಯೂ ಅವರ ಬಳಿ ಚರ್ಚೆ ಮಾಡಿಲ್ಲ. ಸಂಪುಟ ಪುನಾರಚನೆ ವಿಚಾರದಲ್ಲಿ ಹೈ ಕಮಾಂಡ್ ಯಾವತ್ತು ದೆಹಲಿಗೆ ಕರೆಯುತ್ತದೆ ಅವತ್ತು ದೆಹಲಿಗೆ ಹೋಗುತ್ತೇನೆ' ಎಂದರು.

ಬಳ್ಳಾರಿ ಗಲಾಟೆ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ರಾಜಕಾರಣ ಮಾಡುತ್ತಿದೆ, ಅದರ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ವರದಿ ಬರಲಿ ಆ ನಂತರ ಮಾತನಾಡುತ್ತೇನೆ. ಸಿಒಡಿ ತನಿಖೆಗೆ ಕೊಡುವ ಬಗ್ಗೆ ಇಂದು ಬೆಂಗಳೂರಿಗೆ ಗೃಹ ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ನಂತರ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಂಡು ಸೂಕ್ತ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ವಶಪಡಿಸಿಕೊಂಡಿದ್ದ ತೈಲ ಟ್ಯಾಂಕರ್ ನಲ್ಲಿ ಮೂವರು ಭಾರತೀಯರೂ ಇದ್ದರು!

'ಧೈರ್ಯ ಇದ್ದರೆ ಈಗ ಮುಟ್ಟಿ..': ಅಮೆರಿಕಕ್ಕೆ ರಷ್ಯಾ ಸವಾಲು; ಅಣ್ವಸ್ತ್ರ ನೌಕೆಗಳ ನಿಯೋಜನೆ, US ಹಡುಗುಗಳ ಮುಳುಗಿಸಲು ಕರೆ!

RCB ಅಭಿಮಾನಿಗಳಿಗೆ ತೀವ್ರ ನಿರಾಸೆ: ಚಿನ್ನಸ್ವಾಮಿಗಿಲ್ಲ IPL ಭಾಗ್ಯ?, ಹೊಸ ತವರು ಮೈದಾನ ಬಹುತೇಕ ಫಿಕ್ಸ್!

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಈಗ ಮಹಾರಾಷ್ಟ್ರ ಚುನಾವಣೆಯಲ್ಲಿ ಸ್ಪರ್ಧೆ!

ನಟಿ ಜಯಮಾಲ, ಸಾ.ರಾ ಗೋವಿಂದುಗೆ ಡಾ.ರಾಜ್‌ಕುಮಾರ್‌ ಪ್ರಶಸ್ತಿ; ಎಂ.ಎಸ್ ಸತ್ಯುಗೆ ಪುಟ್ಟಣ್ಣ ಕಣಗಾಲ್ ಅವಾರ್ಡ್

SCROLL FOR NEXT