ವಿಪಕ್ಷ ನಾಯಕ ಆರ್. ಅಶೋಕ್ 
ರಾಜಕೀಯ

ಅಡ್ಡಮತದಾನ ಮಾಡಿದವರಿಗೆ ಈ ಜನ್ಮದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡುತ್ತೇನೆ: ಆರ್. ಅಶೋಕ್ ಆಕ್ರೋಶ

ವಿಧಾನ ಪರಿಷತ್​​​ ಚುನಾವಣೆಯಲ್ಲಿನ ಅಡ್ಡಮತದಾನ ಬಿಜೆಪಿಗೆ ತೀವ್ರ ಮುಜುಗರ ತಂದೊಡ್ಡಿದ್ದು ಈ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಕೆಂಡಕಾರಿದ್ದಾರೆ.

ಬೆಂಗಳೂರು: ವಿಧಾನ ಪರಿಷತ್​​​ ಚುನಾವಣೆಯಲ್ಲಿನ ಅಡ್ಡಮತದಾನ ಬಿಜೆಪಿಗೆ ತೀವ್ರ ಮುಜುಗರ ತಂದೊಡ್ಡಿದ್ದು ಈ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಕೆಂಡಕಾರಿದ್ದಾರೆ. ಇನ್ನು ಅಡ್ಡಮತದಾನ ಮಾಡಿದ ಶಾಸಕರು ಯಾರು ಎಂಬುದನ್ನು ಪತ್ತೆ ಹಚ್ಚಲು ಬಿಜೆಪಿ ಈಗಾಗಲೇ ಸತ್ಯಶೋಧಾನ ಸಮಿತಿ ರಚನೆ ಮಾಡಿದೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಅಡ್ಡಮತದಾನ ಮಾಡಿದವರನ್ನು ಸುಮ್ಮನೇ ಬಿಡುವುದಿಲ್ಲ ಎಂದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನ 11 ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಅವರು ಯಾರು ಎಂಬುದನ್ನು ಪತ್ತೆ ಹಚ್ಚುವುದೇ ಒಂದು ಸವಾಲಾಗಿದೆ ಎಂದರು. ಯಾರನ್ನೇ ಕೇಳಿದರೂ ಧರ್ಮಸ್ಥಳದಲ್ಲಿ ಬಂದು ನಾವು-ಆಣೆ- ಪ್ರಮಾಣ ಮಾಡುತ್ತೇವೆ ಎನ್ನುತ್ತಿದ್ದಾರೆ. ಅದೇ ನಮಗೂ ಆಶ್ಚರ್ಯವೆನಿಸಿದೆ.

ಧರ್ಮಸ್ಥಳದಲ್ಲಿ ಪಕ್ಷದ ವೇದಿಕೆಯಲ್ಲಿಯೇ ಅಡ್ಡಮತದಾನ ಮಾಡಿದವರು ಯಾರೆಂಬುದನ್ನು ಪತ್ತೆ ಹಚ್ಚುತ್ತೇವೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸರಿಯಾಗಿ ಬುದ್ಧಿ ಕಲಿಸುತ್ತೇವೆ ಎಂದರು. ಅಡ್ಡಮತದಾನ ಮಾಡಿದವರನ್ನು ಮೊದಲು ಪತ್ತಿ ಹಚ್ಚಿ ಈ ಬಗ್ಗೆ ಕೇಂದ್ರದ ನಾಯಕರೊಂದಿಗೆ ಚರ್ಚಿಸುತ್ತೇವೆ. ಮುಂದೆ ಯಾರೂ ಯಾವತ್ತೂ ಇಂತಹ ತಪ್ಪು ಮಾಡಬಾರದು. ಈ ಜನ್ಮದಲ್ಲಿ ಆ ಶಾಸಕರು ಚುನಾವನೆಯಲ್ಲಿ ಸ್ಪರ್ಧಿಸದಂತೆ ಮಾಡುತ್ತೇನೆ ಎಂದು ಗುಡುಗಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

JPSC-PT ರದ್ದುಗೊಳಿಸಲು ಜಾರ್ಖಂಡ್ ಸರ್ಕಾರ ಒಪ್ಪಿದರೂ 6ನೇ ಸುತ್ತಿನ ಮಾತುಕತೆ ವಿಫಲ; ಪ್ರತಿಭಟನೆ ಮುಂದುವರಿಕೆ!

"ಹಮಾಸ್ ನಿಶ್ಯಸ್ತ್ರಗೊಳಿಸುವುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

ಪಾಕಿಸ್ತಾನಿಗಳು ಭಾರತೀಯರ ಸಂಪೂರ್ಣ ಬದ್ಧ ವೈರಿಗಳಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್

ಆಗಸ್ಟ್ 13ರಿಂದ ವಿಧಾನಮಂಡಲ ಅಧಿವೇಶನ: ಟಿ.ಬಿ ಜಯಚಂದ್ರ ಹಂಗಾಮಿ ಸಭಾಧ್ಯಕ್ಷ

ರಷ್ಯಾ-ಭಾರತ ನಡುವೆ ನೇರ ರೈಲು ಸಂಪರ್ಕ? ರಷ್ಯಾದಿಂದ ಮಹತ್ವದ ಪ್ರಸ್ತಾವನೆ!