ಎಚ್ ಡಿ ಕುಮಾರಸ್ವಾಮಿ, ಪ್ರದೀಪ್ ಈಶ್ವರ್ 
ರಾಜಕೀಯ

80 ಲಕ್ಷದ ದುಬಾರಿ ವಾಚ್ ಆರೋಪ: ಪ್ರದೀಪ್ ಈಶ್ವರ್ ಆರೋಪಕ್ಕೆ HDK ತಿರುಗೇಟು, ಅಂಬೇಡ್ಕರ್ ಚಿತ್ರವಿರುವ HMT ವಾಚ್ ಬೆಲೆಯೆಷ್ಟು? Video

ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಪಂಚೆ ಮಾತ್ರ ಸಿಂಪಲ್ ಅವರು ಕಟ್ಟುವ ವಾಚ್ ದುಬಾರಿ ಬೆಲೆಯದ್ದು ಎಂದು ಆರೋಪ ಮಾಡಿರುವ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಕೇಂದ್ರ ಸಚಿವರು ತಿರುಗೇಟು ನೀಡಿದ್ದಾರೆ.

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಪಂಚೆ ಮಾತ್ರ ಸಿಂಪಲ್ ಅವರು ಕಟ್ಟುವ ವಾಚ್ ದುಬಾರಿ ಬೆಲೆಯದ್ದು ಎಂದು ಆರೋಪ ಮಾಡಿರುವ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಕೇಂದ್ರ ಸಚಿವರು ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ದುಬಾರಿ ವಾಚ್ ಕಟ್ಟುತ್ತೇನೆ ಎಂದು ಕಾಂಗ್ರೆಸ್ಸಿಗರು ಆರೋಪ ಮಾಡುತ್ತಿದ್ದಾರೆ. ಆದರೆ ನೋಡಿ ನನ್ನ ಕೈಲಿರುವುದು ಅಂಬೇಡ್ಕರ್ ಚಿತ್ರವಿರುವ ಸಾಧಾರಣ ವಾಚ್ ಕಟ್ಟಿದ್ದೇನೆ ಎಂದು ಕೈಯಲ್ಲಿ ಕಟ್ಟಿರುವ ವಾಚ್ ಅನ್ನು ಮಾಧ್ಯಮಗಳಿಗೆ ತೋರಿಸಿದರು. ನಾನು 80 ಲಕ್ಷದ ವಾಚ್ ಕಟ್ಟುತ್ತೇನೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. ಆದರೆ ಇದು ಸಾಧಾರಣ HMT ವಾಚ್ ಎಂದು ಹೇಳಿದರು. ಅವರಿಗೆ ಏನಾದರೂ ಅನುಮಾನಗಳಿದ್ದರೆ ಅವರ ಬಳಿಯೇ SIT ಇದೆಯಲ್ಲ ತನಿಖೆ ಮಾಡಿಸಿ ತೆಗೆದುಕೊಂಡು ಹೋಗಲಿ ಎಂದು ಟಾಂಗ್ ನೀಡಿದರು.

ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರ ಬಳಿ 85 ವಾಚುಗಳು, 700-800 ಎಕರೆ ಜಮೀನಿದೆ. ಅವರ ವಾಚ್‌ಗಳ ಒಟ್ಟು ಮೌಲ್ಯವೇ 10 ರಿಂದ 20 ಕೋಟಿ ರೂಪಾಯಿ ಆಗುತ್ತದೆ. ಇಷ್ಟು ಆಸ್ತಿಯನ್ನು ಅವರು ಬದನೆಕಾಯಿ ಮಾರಿ ಗಳಿಸಿದರೇ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರಶ್ನೆ ಮಾಡಿದ್ದರು.

ಅಂಬೇಡ್ಕರ್ ಚಿತ್ರವಿರುವ HMT ವಾಚ್ ನ ಬೆಲೆ ಆನ್ ಲೈನ್ ನಲ್ಲಿ 1,699 ರಿಂದ 2,350 ರೂಪಾಯಿವರೆಗಿನ ವಿವಿಧ ಮಾದರಿಯ ವಾಚುಗಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 47 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!