ಬೆಂಗಳೂರು: ಮಾಜಿ ಕೇಂದ್ರ ಸಚಿವ ಬಿಜೆಪಿ ಹಿರಿಯ ನಾಯಕರಾಗಿದ್ದ ದಿವಂಗತ ಅನಂತ್ ಕುಮಾರ್ ಅವರ ಪುತ್ರಿ ಐಶ್ವರ್ಯಾ ಅನಂತ್ ಕುಮಾರ್ ಮತ್ತೊಮ್ಮೆ ಸೋಷಿಯಲ್ ಮೀಡಿಯಾ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ.
ಅತಿಯಾದ ಸಾಲ ಮತ್ತು ರೈತರ ಸಂಕಷ್ಟದಲ್ಲಿ ಕರ್ನಾಟಕ ರಾಜ್ಯ ಸಿಲುಕಿರುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯನವರು ಹೈಕಮಾಂಡ್ ಓಲೈಸಲು ರಾಜ್ಯದ ಜನತೆಯನ್ನು ಇನ್ನಷ್ಟು ಕಷ್ಟಕ್ಕೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಕೇರಳದಲ್ಲಿ ಪ್ರಿಯಾಂಕಾ ಗಾಂಧಿಯವರ ವಯನಾಡ್ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ಕರ್ನಾಟಕ ಜನತೆಯ ತೆರಿಗೆ ದುಡ್ಡನ್ನು ಕೊಟ್ಟಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಇಲ್ಲಿ ತೋರಿಸಿರುವ ಮಾನವೀಯ ಕ್ರಮವಲ್ಲ, ಬದಲಿಗೆ ಕೇರಳ ಚುನಾವಣೆಗೆ ಮುನ್ನ, ಹೈಕಮಾಂಡ್ ಸೇವೆ ಮಾಡಿರುವುದು. ಕನ್ನಡಿಗರ ಕಷ್ಟಪಟ್ಟು ಸಂಪಾದಿಸಿದ ಹಣ ಮೊದಲು ಕರ್ನಾಟಕವನ್ನು ನಿರ್ಮಿಸಲು ಬಳಸಬೇಕು, ಪಕ್ಕದ ರಾಜ್ಯದಲ್ಲಿ ಮತಗಳನ್ನು ಖರೀದಿಸಲು ಅಲ್ಲ ಎಂದು ಐಶ್ವರ್ಯಾ ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಾರೆ.