ಶಾಸಕ ಡಿ.ಎನ್ ಜೀವರಾಜ್ 
ರಾಜಕೀಯ

ನೀವು ನಮಗೂ ಡಿಸಿಎಂ; ಬೆದರಿಸುವ ಕೆಲಸ ಮಾಡೋದು ಬೇಡ: ಡಿಕೆಶಿಗೆ ಶಾಸಕ ಜೀವರಾಜ್ ತಿರುಗೇಟು

ಸರ್ಕಾರದಿಂದ ತನಿಖೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ‌ತನಿಖೆ ಚುನಾವಣಾ ಆಯೋಗ ಮಾಡಬೇಕು. ಡಿಕೆಶಿಯವರು ಬೆದರಿಸುವ ಕೆಲಸ ಮಾಡೋದು ಬೇಡ. ಅವರು ನಮಗೂ ಉಪಮುಖ್ಯಮಂತ್ರಿ ಎಂದು ಟಾಂಗ್‌ ಕೊಟ್ಟರು.

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಹಿರಿಯರು, ಕ್ರೈಮ್ ಆಗಿದೆ ಅಂತೆಲ್ಲ ಬೆದರಿಸಬಾರದು ಎಂದು ಶೃಂಗೇರಿ ಮರು ಎಣಿಕೆಯಲ್ಲಿ ಗೆದ್ದಿರುವ ಶಾಸಕ ಜೀವರಾಜ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದರ ಅವರು ಮತ ಟ್ಯಾಂಪರಿಂಗ್ ಆರೋಪ ತಳ್ಳಿ ಹಾಕಿದರು. ಸರ್ಕಾರದಿಂದ ತನಿಖೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ‌ತನಿಖೆ ಚುನಾವಣಾ ಆಯೋಗ ಮಾಡಬೇಕು. ಡಿಕೆಶಿಯವರು ಬೆದರಿಸುವ ಕೆಲಸ ಮಾಡೋದು ಬೇಡ. ಅವರು ನಮಗೂ ಉಪಮುಖ್ಯಮಂತ್ರಿ ಎಂದು ಟಾಂಗ್‌ ಕೊಟ್ಟರು.

‌ಪೋಸ್ಟಲ್ ಬ್ಯಾಲೆಟ್‌ಗಳನ್ನು ಸೇಫಾಗಿ ಟ್ರಂಕ್‌ನಲ್ಲಿಟ್ಟಿರುತ್ತಾರೆ.‌ ಡಿಕೆಶಿಯವರು ಯಾಕೆ ಈ ರೀತಿ ಮಾತಾಡ್ತಿದ್ದಾರೋ ಗೊತ್ತಿಲ್ಲ. 24 ಗಂಟೆ ಪೊಲೀಸ್ ಕಾವಲು ಹಾಕಿರುವ ಕಡೆ ನಾನು ಹೇಗೆ ಹೋಗಿ ಟ್ಯಾಂಪರಿಂಗ್ ಮಾಡಲು ಆಗುತ್ತದೆಯೇ? ಡಿಕೆಶಿಯವರು ಹಿರಿಯರು ಈಥರ ಮಾತಾಡಬಾರದು ಎಂದರು.

ಕಾಂಗ್ರೆಸ್‌ನವ್ರು ಮತ ಟ್ಯಾಂಪರಿಂಗ್ ಮಾಡಲಾಗಿದೆ ಅಂತ ಆರೋಪ ಮಾಡಿದ್ದಾರೆ. ದೂರು ಕೊಟ್ಟಿದ್ದಾರೆ, ಎಫ್ಐಆರ್ ಹಾಕಿದ್ದಾರೆ. 2023 ರಲ್ಲಿ ಶೃಂಗೇರಿ ಮತ ಎಣಿಕೆ ವಿಳಂಬ ಆಯ್ತು. ಕೊನೆಯಲ್ಲಿ ಪೋಸ್ಟಲ್ ಮತಗಳ ಎಣಿಕೆ ಮಾಡಿದ್ರು. ಕಾಂಗ್ರೆಸ್‌ ನವರು ಹಾಕಿರುವ ಎಫ್ಐಆರ್ ಕಾನೂನು ಬಾಹಿರ ಆಗಿದೆ ಎಂದು ಜೀವರಾಜ್‌ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ: ಷರತ್ತು ಒಪ್ಪದ ಹೊರತು ಹಾರ್ಮುಜ್ ಜಲಸಂಧಿ ತರೆಯಲ್ಲ ಎಂದ ಇರಾನ್; ದಿಗ್ಬಂಧನ ಮತ್ತಷ್ಟು ಬಿಗಿಗೊಳಿಸಿದ ಅಮೆರಿಕ..!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ‘ದೊಡ್ಡ ಘಟನೆ ನಡೆಯಲಿದೆ’ ಎಂದ ಟ್ರಂಪ್; ಇರಾನ್ ವಿರುದ್ಧ ಅಮೆರಿಕಾ ನಡೆಸಿರುವ ಗೇಮ್‌ಪ್ಲ್ಯಾನ್ ಏನು..?

ಇಂದಿನಿಂದ ವಿಧಾನಮಂಡಲ ವಿಶೇಷ ಅಧಿವೇಶನ: ಕಸ್ತೂರಿರಂಗನ್ ವರದಿ ತಿರಸ್ಕರಿಸಲು ಒಕ್ಕೊರಲ ತೀರ್ಮಾನ ಸಾಧ್ಯತೆ, ಕೇಂದ್ರಕ್ಕೆ ಶಾಕ್ ಕೊಡಲು ರಾಜ್ಯ ಸರ್ಕಾರ ಸಜ್ಜು..!

ಅಮೆರಿಕಾ ವಿರುದ್ಧ ಯುದ್ಧವಿಲ್ಲ, ಸೌದಿ ವಿರುದ್ಧ ಸಮರ ನಿಲ್ಲಲ್ಲ: ಟ್ರಂಪ್‌ಗೆ ಹೌತಿಗಳ ಖಡಕ್ ಸಂದೇಶ, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಆತಂಕ..!

ಕಸ್ತೂರಿರಂಗನ್ ವರದಿ ವಿರುದ್ಧ ರೈತರ ರಣಕಹಳೆ: 10 ಕಿ.ಮೀ. ನಡೆದು ಬಂದ ಸಾವಿರಾರು ಅನ್ನದಾತರು, ಸಿಎಂ ಭೇಟಿಗೆ ಪಟ್ಟು: ಬಿಸಿಲಲ್ಲೇ ಕುಳಿತು ಧರಣಿ..!