ಬೆಂಗಳೂರು: ಜೆಡಿಎಸ್ (JD-S) ತುರುವೇಕರೆ ಕ್ಷೇತ್ರದ ಶಾಸಕ ಎಂ.ಟಿ. ಕೃಷ್ಣಪ್ಪ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರ ವಿರುದ್ಧ ಮತ್ತು ಕಾಂಗ್ರೆಸ್ ಪಕ್ಷದ ಆಹ್ವಾನದ ಕುರಿತು ನೀಡಿದ ಹೇಳಿಕೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಗೆ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರು ಮತ್ತು 2028ರ ಚುನಾವಣೆಗೆ ₹500 ಕೋಟಿ ಅನುದಾನ ನೀಡುವುದಾಗಿ ಆಫರ್ ಕೊಟ್ಟಿದ್ದರು ಎಂದು ಎಂ.ಟಿ. ಕೃಷ್ಣಪ್ಪ ಬಹಿರಂಗಪಡಿಸಿದ್ದಾರೆ.
ನನಗೆ ಮತ್ತು ಜಿ.ಟಿ ದೇವೇಗೌಡರಿಗೆ ಆಹ್ವಾನ ಬಂದಿತ್ತು. ನಾನು ಸಿಎಂ ನಾನು ಹೇಳಿದ ಹಾಗೆ ಕೇಳಬೇಕು, ನೀನು ಕಾಂಗ್ರೆಸ್ ಗೆ ಬರಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದರು, ನಾನು ನನ್ನಪ್ಪನ ಮಾತೇ ಕೇಳಲ್ಲ ಇನ್ನೂ ನಿನ್ನ ಮಾತು ಕೇಳ್ತಿನಾ ಎಂದು ಹೇಳಿದ್ದಾಗಿ ಕೃಷ್ಣಪ್ಪ ತಿಳಿಸಿದ್ದಾರೆ.
ಪಕ್ಷಕ್ಕೆ ಬಂದರೆ 500ಕೋಟಿ ಗ್ರಾಂಟ್ ಕೊಡ್ತಿನಿ ಅಂದ್ರು, ಆದರೆ ತಾವು ಆ ಆಫರ್ ತಿರಸ್ಕರಿಸಿರುವುದಾಗಿ ತಿಳಿಸಿದ್ದಾರೆ, "ನನ್ನ ಪಾರ್ಟಿ ದೇವೇಗೌಡರು ಮತ್ತು ಕುಮಾರಣ್ಣ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. 2028ಕ್ಕೆ ಕುಮಾರಣ್ಣ ಸಿಎಂ ಆಗ್ತಾರೆ, ಅವರೆ 1000 ಕೋಟಿ ಅನುದಾನ ಕೊಡ್ತಾರೆ ಹೋಗಯ್ಯ ಎಂದಿದ್ದಾಗಿ ತಿಳಿಸಿದ್ದಾರೆ.