ಆರ್ ಅಶೋಕ್  
ರಾಜಕೀಯ

ಫಾರ್ಮ್ 7 ಕೊಟ್ಟು ಹೆಸರು ಡಿಲೀಟ್ ಆಗಿರುವವರನ್ನು ಕರೆತನ್ನಿ: ಅರ್ಜಿ ಚಂದ್ರಲೋಕದಲ್ಲಿ ಬೇಕಾದರೂ ಪ್ರಿಂಟ್ ಆಗಲಿ, ಪ್ರಶ್ನಿಸುವುದಕ್ಕೆ ನೀವು ಯಾರು?

ಯಾವುದೇ ಧರ್ಮ ಹಾಗೂ ಜಾತಿಯ ಅರ್ಹ ಮತದಾರ ತನ್ನ ಹಕ್ಕಿನಿಂದ ವಂಚಿತನಾಗಬಾರದು. ಆದರೆ, ಬಾಂಗ್ಲಾದೇಶದ ನಾಗರಿಕರು ಹಾಗೂ ಬೋಗಸ್ ಕಾರ್ಡ್ ಹೊಂದಿದವರ ಬಗ್ಗೆ ಪರಿಶೀಲನೆಯೇ ಆಗಬಾರದು ಎಂದು ಒತ್ತಡ ಹೇರಿದರೆ ಹೇಗೆ?

ಬೆಂಗಳೂರು : ಫಾರಂ 7 ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಅದನ್ನು ಪ್ರಶ್ನಿಸುವುದಕ್ಕೆ ಡಿ.ಕೆ.ಶಿವಕುಮಾರ್ ಯಾರು? ಆಯೋಗದ ಕಚೇರಿಯ ಮುಂದೆ ಅಕ್ರಮವಾಗಿ ಧರಣಿ ನಡೆಸಿದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಯಾವುದೇ ಧರ್ಮ ಹಾಗೂ ಜಾತಿಯ ಅರ್ಹ ಮತದಾರ ತನ್ನ ಹಕ್ಕಿನಿಂದ ವಂಚಿತನಾಗಬಾರದು. ಆದರೆ, ಬಾಂಗ್ಲಾದೇಶದ ನಾಗರಿಕರು ಹಾಗೂ ಬೋಗಸ್ ಕಾರ್ಡ್ ಹೊಂದಿದವರ ಬಗ್ಗೆ ಪರಿಶೀಲನೆಯೇ ಆಗಬಾರದು ಎಂದು ಒತ್ತಡ ಹೇರಿದರೆ ಹೇಗೆ? ಫಾರ್ಮ್‌ ನಂಬರ್ ಅರ್ಜಿ ಚಂದ್ರಲೋಕದಲ್ಲಿ ಬೇಕಾದರೂ ಪ್ರಿಂಟ್ ಆಗಲಿ. ಅದನ್ನು ಪ್ರಶ್ನಿಸುವುದಕ್ಕೆ ನೀವು ಯಾರು? ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದರು.

ಫಾರ್ಮ್ 7 (Form 7) ಕೊಟ್ಟು ಹೆಸರು ಡಿಲೀಟ್ ಆಗಿರುವ ಮತದಾರರನ್ನು ಕರೆತಂದು ನಿಲ್ಲಿಸಿ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಸವಾಲು ಹಾಕಿದ್ದಾರೆ. ಅರ್ಜಿ ಸಲ್ಲಿಸಲೇಬಾರದು ಎಂದು ಆಗ್ರಹಿಸುವ ಅಧಿಕಾರ ಕಾಂಗ್ರೆಸ್ ನಾಯಕರಿಗೆ ಇಲ್ಲ. ಅರ್ಜಿಯನ್ನು ಪರಿಶೀಲಿಸುವುದು ಚುನಾವಣಾ ಆಯೋಗ. ಅಲ್ಲಿಯೂ ತಪ್ಪಾದರೆ ಪ್ರಶ್ನಿಸಬೇಕಾಗಿರುವುದು ನ್ಯಾಯಾಲಯದಲ್ಲಿ. ಸಿಎಂ ಬೇಕಾದರೆ ನ್ಯಾಯಾಲಯದ ಮೆಟ್ಟಿಲು ಹತ್ತಲಿ. ಕೋರ್ಟ್ ಛೀಮಾರಿ ಹಾಕುತ್ತದೆ ಎಂಬ ಭಯಕ್ಕೆ ಈ ರೀತಿ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಈ ದೇಶದಲ್ಲಿ ಚುನಾವಣಾ ಅಕ್ರಮ ಮಾಡಿ ಪ್ರಧಾನಿಯಾದವರು ಇಂದಿರಾ ಗಾಂಧಿ ಮಾತ್ರ. ಚುನಾವಣಾ ಆಯೋಗ ಸೇರಿದಂತೆ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಕಾಂಗ್ರೆಸ್ ದುರ್ಬಳಕೆ ಮಾಡಿದೆ. ರಾಜ್ಯದಲ್ಲಿ ಭೀಕರ ಬರ ಇದೆ. ಅದಕ್ಕೆ ಸ್ಪಂದಿಸುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ. ರೈತರಿಗೆ ಮುಖ ತೋರಿಸುವುದಕ್ಕೆ ಸಾಧ್ಯವಾಗದ ಮುಖ್ಯಮಂತ್ರಿ ಪ್ರತಿಭಟನೆಯ ನಾಟಕ ಸೃಷ್ಟಿಸಿ ಮುಖ ಮುಚ್ಚಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಅವಕಾಶವಿಲ್ಲ. ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಮಾಡಬೇಕು. ಆದರೆ ಕಾಂಗ್ರೆಸ್ನವರು ಹೇಗೆ ಚುನಾವಣಾ ಆಯೋಗದ ಎದುರು ಧರಣಿ ನಡೆಸಿದರು ? ಗಣೇಶನನ್ನು ಕುಳ್ಳಿರಿಸುವುದಕ್ಕೂ ಅನುಮತಿ ಕೇಳುವ ಸರ್ಕಾರ ಎಲ್ಲಿ ಬೇಕಾದರೂ ಪ್ರತಿಭಟನೆ ನಡೆಸಬಹುದೇ ? ಪೊಲೀಸರು ಮುಖ್ಯಮಂತ್ರಿಯನ್ನೂ ಒಳಗೊಂಡು ಕಾಂಗ್ರೆಸ್ ನಾಯಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಸಂವಿಧಾನ ಎತ್ತಿ ಹಿಡಿಯುತ್ತೇವೆ ಎಂದು ಪ್ರಮಾಣ ಮಾಡಿದವರು ಅವರು. ಅಜ್ಜಯ್ಯನ ಮೇಲೆ ಪ್ರಮಾಣ ಮಾಡಿದ್ದಾರೆ. ಕಾನೂನು ಪಾಲಿಸಬೇಕಾದವರು ಕಾನೂನು ಮುರಿದಿದ್ದಾರೆ. ಪ್ರತಿಭಟನೆಗೆ ಫ್ರೀಡಂ ಪಾರ್ಕ್ ಒಂದೇ ಸ್ಥಳ ಅಂತ ಕೋರ್ಟ್ ಹೇಳಿದೆ. ಆದರೆ ಅವರು ಕೋರ್ಟ್ ಆದೇಶ ಧಿಕ್ಕರಿಸಿ ಆಯೋಗದ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ದೆಹಲಿಯ ದೊರೆಗಳು ಯಾವುದಾದ್ರೂ ನಾಟಕ ಆಡು ಅಂತ ಫೋನ್ ಮಾಡಿದ್ರಂತೆ, ಅದಕ್ಕೆ ಡಿಕೆಶಿ ನಾಟಕ ಆಡುತ್ತಿದ್ದಾರೆ. ಫಾರ್ಮ್ 7 ಏಕೆ ಹಾಕ್ತಾರೆ? ವಿದೇಶಿಯರು ಇದ್ರೆ, ಅನರ್ಹರು ಇದ್ರೆ ದೇಶದ ಯಾವುದೇ ಪ್ರಜೆ ಅರ್ಜಿ ಕೊಡಬಹುದು. ಫಾರ್ಮ್ 7ನಲ್ಲಿ ಅರ್ಜಿ ಕೊಟ್ಟಿರೋದು ಒಟ್ಟು 25 ಸಾವಿರ ಮಾತ್ರ. 15 ಲಕ್ಷ ಫಾರ್ಮ್ 7 ಕೊಟ್ಟಿದ್ದಾರೆ ಎಂಬ ಕಾಂಗ್ರೆಸ್ ಆರೋಪ ಸುಳ್ಳು. ಫಾರ್ಮ್ 7 ಕೊಟ್ಟು ಹೆಸರು ಡಿಲೀಟ್ ಆಗಿರುವ ಮತದಾರರನ್ನು ಕರೆತಂದು ನಿಲ್ಲಿಸಿ, ತಾಕತ್, ಧಮ್ ಇದ್ರೆ ಜನರ ಮುಂದೆ ಡಿಲೀಟ್ ಆಗಿರೋದನ್ನು ತಂದು ತೋರಿಸಿ ಎಂದಿದ್ದಾರೆ.

ಕೇವಲ 25,000ದಷ್ಟು 'ಫಾರ್ಮ್-7' ಅರ್ಜಿಗಳು ಮಾತ್ರ ಸಲ್ಲಿಕೆಯಾಗಿರುವುದರಿಂದ, 15 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಅಸಾಧ್ಯ ಎಂದು ಅಶೋಕ ಹೇಳಿದರು. ಚುನಾವಣಾ ಆಯೋಗವು ಇನ್ನೂ ಅರ್ಜಿಗಳನ್ನು ಪರಿಶೀಲಿಸುತ್ತಿದೆ ಮತ್ತು ತಮ್ಮ ಮಾಹಿತಿಯ ಪ್ರಕಾರ, ಅವುಗಳ ಆಧಾರದ ಮೇಲೆ ಯಾರ ಹೆಸರನ್ನೂ ಇನ್ನೂ ತೆಗೆದುಹಾಕಲಾಗಿಲ್ಲ ಎಂದು ಅವರು ತಿಳಿಸಿದರು. ಬೆಳಗಾವಿಯ ವೀರಭದ್ರನಗರದಲ್ಲಿ ಸಾಮೂಹಿಕವಾಗಿ ಸಲ್ಲಿಸಲಾದ 'ಫಾರ್ಮ್-7' ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಮತದಾರರೂ ಸಹ 'ಫಾರ್ಮ್-7' ಅನ್ನು ಸಲ್ಲಿಸಬಹುದಾದ್ದರಿಂದ, ಅದನ್ನು ಬೂತ್ ಮಟ್ಟದ ಅಧಿಕಾರಿಗಳು (BLO) ಮಾತ್ರ ಸಲ್ಲಿಸಬೇಕೆಂದೇನೂ ಇಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

FlyDubai ವಿಮಾನ ಪತನ ಯತ್ನದ ಹಿಂದೆ ಇರಾನ್ ಕೈವಾಡ..? ತುಂಬಾ ಕಠಿಣ ಹೊಡೆತ ಬೀಳಲಿದೆ; ಟ್ರಂಪ್ ಕಠಿಣ ಎಚ್ಚರಿಕೆ

ಫಾರಂ-7 ದುರ್ಬಳಕೆ ಆರೋಪ: ಕ್ರಮಕ್ಕೆ ಚು.ಆಯೋಗ ಸೂಚನೆ, ಐತಿಹಾಸಿಕ ದಿನ ಎಂದ ಸಿಎಂ ಡಿಕೆಶಿ

‘ನಿಮ್ಮ ಪ್ರಾರ್ಥನೆಗೆ ಧನ್ಯವಾದ’: ಭಾರತದ ಹೀರೋ ಪೈಲಟ್ ಸ್ಮಿತ್ ಮಚ್ಚರ್ ಅಪಾಯದಿಂದ ಪಾರು!

ರಕ್ತದ ಮಡುವಿನಲ್ಲಿ ಪೈಲಟ್`ಗಳು, ಫ್ಲೈಟ್ ಲ್ಯಾಂಡ್ ಮಾಡಿದ ಪ್ಲಂಬರ್; FlyDubai ವಿಮಾನ ಪತನವಾಗದಿದ್ದದ್ದೇ ಅಚ್ಚರಿ!

ICC Cricket World Cup 2027 ವೇಳಾಪಟ್ಟಿ; ಅ.7ರಿಂದ ಭಾರತದ ಅಭಿಯಾನ ಆರಂಭ, 3 ಬಾರಿ ಬದ್ಧ ಶತ್ರುಗಳ ಕದನ?