ಯತೀಂದ್ರ - ಸಿದ್ದರಾಮಯ್ಯ 
ರಾಜಕೀಯ

'ನನಗೆ ಆಶೀರ್ವಾದ ಮಾಡಿದಂತೆ ಯತೀಂದ್ರಗೂ ಮಾಡಿ': ಸಿದ್ದರಾಮಯ್ಯ ಭಾವುಕ ಮಾತಿಗೆ 'ಮತ್ತೆ ಚುನಾವಣೆಗೆ ನಿಲ್ಲಿ' ಎಂದ ಜನ; ಮಾಜಿ ಸಿಎಂ ಹೇಳಿದ್ದೇನು?

ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಇದೇ ಮೊದಲ ಬಾರಿಗೆ ತಮ್ಮ ಕ್ಷೇತ್ರ ವರುಣಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು, ದಾಸನೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ನೆರವೇರಿಸಿದರು.

ಮೈಸೂರು: ನನಗೆ ಆಶೀರ್ವಾದ ಮಾಡಿದಂತೆ ಯತೀಂದ್ರಗೂ ಆಶೀರ್ವಾದ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಭಾವುಕರಾಗಿ ತಮ್ಮ ಕ್ಷೇತ್ರ ವರುಣಾದ ಜನತೆಗೆ ಮನವಿ ಮಾಡಿದ್ದಾರೆ. ಈ ಮೂಲಕ 2028ರ ಚುನಾವಣೆಯಲ್ಲಿ ತಾವು ವರುಣ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂಬ ಸುಳಿವು ನೀಡಿದ್ದಾರೆ.

ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಇದೇ ಮೊದಲ ಬಾರಿಗೆ ತಮ್ಮ ಕ್ಷೇತ್ರ ವರುಣಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು, ದಾಸನೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, "ರಾಜ್ಯದಲ್ಲಿ ಭೀಕರ ಬರಗಾಲ‌ ಇದೆ. 150 ವರ್ಷಗಳಲ್ಲೇ ಅತಿ ದೊಡ್ಡ ಭೀಕರ ಬರ ಇದಾಗಿದೆ. 220 ತಾಲೂಕು ಈ ಹೊಡೆತಕ್ಕೆ ಸಿಲುಕಿವೆ. ಇಂತಹ ಪರಿಸ್ಥಿತಿಯಿದ್ದರೂ ಗ್ಯಾರಂಟಿ ಯೋಜನೆಯಿಂದ ಜನ ನೆಮ್ಮದಿ ಆಗಿದ್ದಾರೆ. ನಾನು‌ ರಾಜ್ಯದಲ್ಲಿ ಎಂಟು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ್ದೇನೆ. ರಾಹುಲ್ ಗಾಂಧಿ ಯಾವಾಗ ಹೇಳ್ತಾರೆ, ಅಂದೇ ಸಿಎಂ ಸ್ಥಾನವನ್ನು ಬಿಡುತ್ತೇನೆ ಎಂದು ನಾಲ್ಕೈದು ಬಾರಿ ಹೇಳಿದ್ದೆ. ಅಂತೆಯೇ, ನಡೆದುಕೊಂಡಿದ್ದೇನೆ" ಎಂದರು.

ವರುಣ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಾನು ಎರಡು ಬಾರಿ ಮುಖ್ಯಮಂತ್ರಿ ಹಾಗೂ ಎರಡು ಬಾರಿ ವಿರೋಧ ಪಕ್ಷದ ನಾಯಕನಾಗಲು ವರುಣ ಕ್ಷೇತ್ರದ ಜನರ ಆಶೀರ್ವಾದವೇ ಕಾರಣ ಎಂದು ಸಿದ್ದರಾಮಯ್ಯ ಹೇಳಿದರು.

ನನ್ನ ರಾಜಕೀಯ ಶ್ರೇಯಸ್ಸಿಗೆ ವರುಣದ ಮತದಾರರೇ ಕಾರಣ. ಶಾಸಕನಾಗಿರಲಿ, ಇಲ್ಲದಿರಲಿ ವರುಣ ಕ್ಷೇತ್ರದ ಸೇವೆಯನ್ನು ಮುಂದುವರಿಸುತ್ತೇನೆ. ವರುಣ ಕ್ಷೇತ್ರವನ್ನು ನಾನು ಯಾವತ್ತೂ ಮರೆಯುವುದಿಲ್ಲ. ಇನ್ನೂ ಒಂದೂವರೆ ವರ್ಷ ಶಾಸಕನಾಗಿ ಇರುತ್ತೇನೆ. ನನಗೆ ಆಶೀರ್ವಾದ ಮಾಡಿದಂತೆ ಯತೀಂದ್ರ ಅವರಿಗೂ ನೀವು ಆಶೀರ್ವಾದ ಮಾಡಬೇಕು" ಎಂದು ಕೇಳಿಕೊಂಡರು.

ಈ ಮಧ್ಯೆ, ನೀವು ಮತ್ತೆ 2028ರ ಚುನಾವಣೆಗೂ ನಿಲ್ಲಬೇಕು. ನಿಮ್ಮನ್ನು ನಾವು ಗೆಲ್ಲಿಸುತ್ತೀವಿ ಎಂದು ವರುಣ ಕ್ಷೇತ್ರದ ಜನರು ಹೇಳಿದ್ದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಸಿದ್ದರಾಮಯ್ಯ ಅವರು ಭಾಷಣ ಮುಗಿಸಿದ್ದು, ಮಾಜಿ ಸಿಎಂ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಫಾರ್ಮ್ 6ಗೆ ಅನುಮೋದನೆ ನೀಡಿಲ್ಲ: CJI ಸ್ಪಷ್ಟನೆ; 'ಸುಪ್ರೀಂ' ಹೇಳಿಕೆಯೂ CEC ಏಕಪಕ್ಷೀಯ ತೀರ್ಮಾನ ಅಂತ ದೃಢಪಡಿಸಿದೆ: ರಾಹುಲ್

SIR V/S FIR: ಫಾರ್ಮ್-7 ದುರ್ಬಳಕೆ ಆರೋಪ; ಬಿಜೆಪಿ ಶಾಸಕನ ವಿರುದ್ಧ ಸೌಮ್ಯಾ ರೆಡ್ಡಿ ದೂರು

ಫ್ಲೈದುಬೈ ಘಟನೆ ಬೆನ್ನಲ್ಲೇ London-Chicago ವಿಮಾನದಲ್ಲಿ ತುರ್ತು ಪರಿಸ್ಥಿತಿ; ದಿಢೀರ್ 9,000 ಅಡಿಗಳಿಗೆ ಕುಸಿತ

ಮತದಾನದ ಹಕ್ಕು ಕಸಿಯುವಂತಿಲ್ಲ: ನ್ಯಾ. ಭುಯಾನ್ ಹೇಳಿಕೆ ಶಿಷ್ಟಾರಕ್ಕೆ ವಿರುದ್ಧ - ನಿವೃತ್ತ ಸಿಜೆಐ ಬಿ.ಆರ್. ಗವಾಯಿ

ಸ್ಮಿತ್ ಮಚ್ಚಾರ್ ಬಗ್ಗೆಯೂ ಸ್ವಲ್ಪ ಮಾತಾಡಿ: CJP ಪ್ರತಿಭಟನೆಯಲ್ಲಿ ಭಾಗಿಯಾದ ನಾಸಿರುದ್ದೀನ್ ಶಾ ವಿರುದ್ಧ ನಟ ಪಿಯೂಷ್ ಮಿಶ್ರಾ ಕಿಡಿ!