ಡಿ ಕೆ ಶಿವಕುಮಾರ್ ಮತ್ತು ಹೆಚ್ ಡಿ ದೇವೇಗೌಡ (ಸಂಗ್ರಹ ಚಿತ್ರ) 
ರಾಜಕೀಯ

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ

ನೈಸ್ ಯೋಜನೆ ಕುಮಾರಸ್ವಾಮಿ ಕೂಸು, ದೇವೇಗೌಡರ ಕೂಸು ಎಂದು ಟೀಕಿಸುವವರು, ಆ ಯೋಜನೆಯನ್ನು ಹೆರಿಗೆ ಮಾಡಿಸಿದ ಸೂಲಗಿತ್ತಿ ಯಾರು ಎಂಬುದನ್ನೂ ಹೇಳಬೇಕಲ್ಲವೇ? ಎಂದು ಮಂಗಳವಾರ ದೇವೇಗೌಡರು ಪ್ರಶ್ನಿಸಿದ್ದಾರೆ.

ಹಾಸನ: ನೈಸ್(NICE) ಅಕ್ರಮ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವಿನ ಅಖಾಡಕ್ಕೆ ಇದೀಗ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಎಂಟ್ರಿ ಕೊಟ್ಟಿದ್ದಾರೆ.

ನೈಸ್ ಯೋಜನೆ ಕುಮಾರಸ್ವಾಮಿ ಕೂಸು, ದೇವೇಗೌಡರ ಕೂಸು ಎಂದು ಟೀಕಿಸುವವರು, ಆ ಯೋಜನೆಯನ್ನು ಹೆರಿಗೆ ಮಾಡಿಸಿದ ಸೂಲಗಿತ್ತಿ ಯಾರು ಎಂಬುದನ್ನೂ ಹೇಳಬೇಕಲ್ಲವೇ? ಎಂದು ಮಂಗಳವಾರ ದೇವೇಗೌಡರು ಪ್ರಶ್ನಿಸಿದ್ದಾರೆ.

ಇಂದು ಹಾಸನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ, ನೈಸ್ ಯೋಜನೆ, ಎಸ್‌ಐಆರ್ ಕದನ, ಕಾಂಗ್ರೆಸ್ ನಾಯಕರ ಪ್ರಚಾರ ವೈಖರಿ ಹಾಗೂ ತಮ್ಮ ಸಕ್ರಿಯ ರಾಜಕೀಯ ಭವಿಷ್ಯದ ಕುರಿತು ಸುದೀರ್ಘವಾಗಿ ಮಾತನಾಡಿದರು.

1992 ರಲ್ಲಿ ಅಂದಿನ ಆರ್ಥಿಕ ಸುಧಾರಣೆಗಳ ಕಾಲದಲ್ಲಿ ನಡೆದ ಒಪ್ಪಂದಗಳ ಕುರಿತು ಸ್ಮರಿಸಿದ ಮಾಜಿ ಪ್ರಧಾನಿ, “ಅಮೆರಿಕದ ಕಂಪನಿ ಸೇರಿದಂತೆ ಮೂರು ಸಂಸ್ಥೆಗಳು ಸೇರಿ ಮಾಡಿದ ಎಂಒಯುಗೆ ನಾನು ಅಂದು ಸಹಿ ಹಾಕಿದೆ ಅಷ್ಟೇ. ನಂತರ ನಾನು ದೆಹಲಿ ರಾಜಕೀಯಕ್ಕೆ ಹೋದೆ. ಬಳಿಕ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ನೈಸ್ ಆಸ್ತಿ ವಿಚಾರದಲ್ಲಿ ಎಷ್ಟೇ ಪ್ರಯತ್ನಿಸಿದರೂ ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ಸಿದ್ಧರಾಮಯ್ಯ ಅವರು ದೀಪದ ಬೆಳಕಿನಲ್ಲಿ ಓದಿದೆ ಎನ್ನುತ್ತಾರೆ. ನಾನಂತೂ ಲೈಟೇ ಇಲ್ಲದ ಹಳ್ಳಿಯಲ್ಲಿ ಓದಿ ಬಂದವನು. ದೇವೇಗೌಡ ಸಾಯಬಹುದು, ಆದರೆ ಆತ ಮಾಡಿದ ಕೆಲಸಗಳನ್ನು ಇತಿಹಾಸ ಮರೆಯುವುದಿಲ್ಲ” ಎಂದರು.

ಇದೇ ವೇಳೆ ತಮ್ಮ ಆರೋಗ್ಯದ ಸ್ಥಿತಿಗತಿಯ ಕುರಿತು ಮಾತನಾಡಿದ 93 ವರ್ಷದ ಹಿರಿಯ ನಾಯಕ, “ನನಗೆ ಕಿಡ್ನಿ ಸಮಸ್ಯೆ ಇದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಡಯಾಲಿಸಿಸ್ ಆಗುತ್ತಿರುವುದು ಕಿಡ್ನಿಗೆ ಮಾತ್ರ, ಬ್ರೇನ್‌ಗಲ್ಲ, ನನ್ನ ಬ್ರೇನ್ ಪಕ್ಕಾ ಆಗಿದೆ ಎಂದರು.

ಈ ಬಾರಿಯ ಪಿತೃಪಕ್ಷದ ಕಾರ್ಯಕ್ರಮಗಳನ್ನು ನಮ್ಮ ಸ್ವಗ್ರಾಮ ಹರದನಹಳ್ಳಿಯಲ್ಲೇ ನಾಲ್ವರೂ ಗಂಡುಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿ ನೆರವೇರಿಸಲಿದ್ದೇವೆ. ಪಿತೃಪಕ್ಷ ಮುಗಿದ ತಕ್ಷಣವೇ ನಾನು ರಾಜಕೀಯದಲ್ಲಿ ಮತ್ತಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಮಾಜಿ ಪ್ರಧಾನಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!