ಸಿದ್ದರಾಮಯ್ಯ ಎಚ್ ವಿಶ್ವನಾಥ್ 
ರಾಜಕೀಯ

ರಾಜಕೀಯವಾಗಿ ಸಿದ್ದರಾಮಯ್ಯರನ್ನು ಮುಗಿಸಿದರೆ ಕೆಲವರ ಹಾದಿ ಸುಲಭ: 'ಸ್ಟಿಂಗ್' ಹಿಂದಿನ ಲೆಕ್ಕಾಚಾರ ಬಿಚ್ಚಿಟ್ಟ ಎಚ್‌ ವಿಶ್ವನಾಥ್!

ಬಾಂಬೇ ಬಾಯ್ಸ್ ಪುಸ್ತಕ ಹೊರಬಂದರೆ ಮೂರೂ ರಾಜಕೀಯ ಪಕ್ಷಗಳ ಹಿರಿಯ ನಾಯಕರು ಬೆತ್ತಲಾಗುತ್ತಾರೆ. ಎಲ್ಲರೂ ಗಾಜಿನ ಮನೆಯಲ್ಲೇ ಕುಳಿತಿದ್ದೀರಿ. ಸಾರ್ವಜನಿಕರಿಗೆ ಎಲ್ಲವೂ ಅರ್ಥವಾಗುತ್ತದೆ, ಜನ ದಡ್ಡರಲ್ಲ.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಹಿರಿಯ ರಾಜಕಾರಣಿ ಎಚ್‌ ವಿಶ್ವನಾಥ್ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿದರೆ ನಮ್ಮ ಹಾದಿ ಸುಲಭ ಎಂಬುವುದು ಕೆಲವರ ಲೆಕ್ಕಾಚಾರವಾಗಿದೆ. ಹಾಗಾಗಿ ಇವೆಲ್ಲವೂ ನಡೆಯುತ್ತಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಾಂಬೇ ಬಾಯ್ಸ್ ಪುಸ್ತಕ ಹೊರಬಂದರೆ ಮೂರೂ ರಾಜಕೀಯ ಪಕ್ಷಗಳ ಹಿರಿಯ ನಾಯಕರು ಬೆತ್ತಲಾಗುತ್ತಾರೆ. ಎಲ್ಲರೂ ಗಾಜಿನ ಮನೆಯಲ್ಲೇ ಕುಳಿತಿದ್ದೀರಿ. ಸಾರ್ವಜನಿಕರಿಗೆ ಎಲ್ಲವೂ ಅರ್ಥವಾಗುತ್ತದೆ, ಜನ ದಡ್ಡರಲ್ಲ ಎಂದು ವಿಶ್ವನಾಥ್ ಅವರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಇಂತಹ ಕೆಟ್ಟ ರಾಜಕಾರಣ ನಡೆಯುತ್ತಿರುವುದು ನಾವೆಲ್ಲರೂ ತಲೆತಗ್ಗಿಸಬೇಕಾದ ವಿಷಯವಾಗಿದೆ. ಈ 'ಸ್ಟಿಂಗ್ ಆಪರೇಷನ್' ಕುತಂತ್ರದ ರಾಜಕಾರಣದಿಂದ ವಿರೋಧ ಪಕ್ಷದವರೋ ಅಥವಾ ಸ್ವಪಕ್ಷದವರೋ ಪರಸ್ಪರ ಮುಖಕ್ಕೆ ಮಸಿ ಬಳಿದುಕೊಳ್ಳುತ್ತಿದ್ದಾರೆ. ಇದು ಅತ್ಯಂತ ಅವಮಾನಕರ ಸಂಗತಿಯಾಗಿದೆ ಎಂದಿದ್ದಾರೆ.

ಸಿದ್ದರಾಮಯ್ಯ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ನನಗೆ ಅವರೊಂದಿಗೆ ಹಲವಾರು ಭಿನ್ನಾಭಿಪ್ರಾಯಗಳಿರಬಹುದು, ಅದು ಬೇರೆ ವಿಚಾರ. ಆದರೆ ಈ ರೀತಿ ಮಾನಹರಣ ಮಾಡುವುದು ಸರಿಯಲ್ಲ. ರಾಜಕಾರಣದಲ್ಲಿ ಬೆಳೆಯುವುದೇ ದೊಡ್ಡ ಕಷ್ಟ, ಹಾಗಿರುವಾಗ ಬೆಳೆದವರನ್ನು ಹೀಗೆ ತುಳಿಯುವುದು ಎಷ್ಟು ಸರಿ? ಎಂದು ಮಾಜಿ ಸಚಿವ ಪ್ರಶ್ನಿಸಿದ್ದಾರೆ.

ಈ ಸ್ಟಿಂಗ್ ಆಪರೇಷನ್ ಹಿಂದೆ ರಾಜಕಾರಣಿಗಳೇ ಇದ್ದಾರೆ. ಇವತ್ತು ನಮ್ಮಲ್ಲಿರುವ ಇತರ ರಾಜಕಾರಣಿಗಳಿಗೆ ಹೋಲಿಸಿದರೆ ಸಿದ್ದರಾಮಯ್ಯನವರು ಸ್ವಲ್ಪ ಎತ್ತರದಲ್ಲಿ ನಿಲ್ಲುತ್ತಾರೆ. ಹಾಗಾಗಿ ಸಿದ್ದರಾಮಯ್ಯನವರನ್ನು ಮುಗಿಸಿದರೆ ಮುಂದೆ ನಮಗೆಲ್ಲಾ ಹಾದಿ ಸುಲಭವಾಗುತ್ತದೆ ಎಂಬ ಲೆಕ್ಕಾಚಾರ ಕೆಲವು ರಾಜಕಾರಣಿಗಳಲ್ಲಿದೆ.

ನನ್ನ 'ಬಾಂಬೆ ಬಾಯ್ಸ್' ಪುಸ್ತಕ ಹೊರಬಂದರೆ ಮೂರೂ ಪಕ್ಷಗಳ ಹಿರಿಯ ನಾಯಕರು ಬೆತ್ತಲಾಗುತ್ತಾರೆ. ರಾಜಕಾರಣಿಯಾಗಿ ನಾನೂ ಈ ವ್ಯವಸ್ಥೆಯ ಭಾಗವಾಗಿದ್ದವನು. ಈ ಕ್ಷುಲ್ಲಕ ವಿಚಾರಗಳನ್ನು ರಾಜಕೀಯಕ್ಕೆ ತಂದು ಸಮಾಜ ಹಾಳು ಮಾಡುವುದು ಬೇಡವೆಂದು ಸುಮ್ಮನಿದ್ದೇನೆ ಎಂದು ವಿಶ್ವನಾಥ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ ನಾಯಕಿ ಸೌಮ್ಯಾ ರೆಡ್ಡಿ ದಿಢೀರ್ ರಾಜಿನಾಮೆ!

ಮುಖ್ಯಮಂತ್ರಿಯೂ ಬಲಿಪಶುವಾಗಿರಬಹುದು, ರಾಜಕೀಯ ನಾಯಕತ್ವ ನಿಯಂತ್ರಣಕ್ಕೆ 'ಸ್ಟಿಂಗ್ ಆಪರೇಷನ್' ವಿಡಿಯೋ ಬಳಕೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

'ಲಕ್ಷಾಂತರ ರೂ. ಕೊಟ್ಟು ಕರೆಸಿದರೆ 15 ನಿಮಿಷದಲ್ಲೇ ವೇದಿಕೆ ಬಿಟ್ಟು ಹೋದ್ಲು': ನಟಿ ಅಂಜಲಿ ವಿರುದ್ಧ ಆಯೋಜಕರ ಕಾನೂನು ಕ್ರಮ ಎಚ್ಚರಿಕೆ!

ರಾಯಚೂರು ಬಳಿ ಟ್ರಕ್ ಪಲ್ಟಿ; ಗಾಯಗೊಂಡವರಿಗೆ ನೆರವಾಗುವ ಬದಲು 15 ನಿಮಿಷದಲ್ಲಿ ಇಡೀ ಲಾರಿ ಈರುಳ್ಳಿ ದೋಚಿದ ಜನ!

ಮಕ್ಕಳ ಇಂಟರ್‌ನೆಟ್‌ ಬಳಕೆಗೆ ಸಂಪೂರ್ಣ ನಿಷೇಧ ಬೇಡ; child mode ಜಾರಿಗೆ ಸುಪ್ರೀಂ ಕೋರ್ಟ್‌ ಸಲಹೆ!